ಹೀಗಿದೆ 2022ರ ಸಾರ್ವತ್ರಿಕ ರಜೆ ಪಟ್ಟಿ ನೋಡಿ…: ರಾಜ್ಯ ಸರಕಾರದಿಂದ ಕರಡುಪಟ್ಟಿ ರಿಲೀಸ್

ಬೆಂಗಳೂರು, ಡಿಸೆಂಬರ್ 26, 2021 (www.justkannada.in): ರಾಜ್ಯ ಸರ್ಕಾರ 2022ನೇ ಸಾಲಿಗೆ ಸಾರ್ವತ್ರಿಕ ಹಾಗೂ ಪರಿಮಿತ ರಜೆಗಳ ಕರಡು ಪಟ್ಟಿಯನ್ನು ಬಿಡುಗಡೆ ಮಾಡಿದೆ.

2022ರಲ್ಲಿ ಸಾರ್ವತ್ರಿಕ ರಜೆ ಹಾಗೂ ಪರಿಮಿತ ರಜೆಗಳು ಸೇರಿದಂತೆ ರಜೆಗಳ ಪಟ್ಟಿ ಮಾಡಲಾಗಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಅಧೀನ ಕಾರ್ಯದರ್ಶಿ ಮೊಹಮ್ಮದ್ ನಯೀಮ್ ಮೊಮಿನ್ ಈ ಕುರಿತು ಆದೇಶ ಬಿಡುಗಡೆ ಮಾಡಿದ್ದಾರೆ.

ಪ್ರತಿ ವರ್ಷದಂತೆ ದಿನಾಂಕ 01-04-2022ರಂದು ವಾರ್ಷಿಕ ಬ್ಯಾಂಕ್ ಲೆಕ್ಕಪತ್ರ ಮುಕ್ತಾಯ ದಿನ ಎಂದು ನಮೂದಿಸಲಾಗಿದೆ.

ಹೀಗಿದೆ 2022ರ ಸಾರ್ವತ್ರಿಕ ಹಾಗೂ ಪರಿಮಿತ ರಜೆಗಳ ಕರಡು ಪಟ್ಟಿ
ದಿನಾಂಕ 15-01-2022 – ಉತ್ತರಾಯಣ ಪುಣ್ಯಕಾಲ, ಮಕರ ಸಂಕ್ರಾಂತಿ
ದಿನಾಂಕ 26-01-2022 – ಗಣರಾಜ್ಯೋತ್ಸವ ದಿನ
ದಿನಾಂಕ 01-03-2022 – ಮಹಾ ಶಿವರಾತ್ರಿ
ದಿನಾಂಕ 02-04-2022 – ಉಗಾದಿ
ದಿನಾಂಕ 14-04-2022 – ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ, ಮಹಾವೀರ ಜಯಂತಿ
ದಿನಾಂಕ 15-04-2022 – ಗುಡ್ ಪ್ರೈಡೆ
ದಿನಾಂಕ 03-05-2022 – ಬಸವ ಜಯಂತಿ, ಅಕ್ಷಯ ತೃತೀಯ, ಕುತುಬ್ ಇ ರಂಜಾನ್
ದಿನಾಂಕ 09-08-2022 – ಮೋಹರಂ ಕೊನೆಯ ದಿನ
ದಿನಾಂಕ 15-08-2022 – ಸ್ವಾತಂತ್ರ್ಯ ದಿನಾಚರಣೆ
ದಿನಾಂಕ 31-08-2022 – ವಿನಾಯಕ ಚತುರ್ಥಿ
ದಿನಾಂಕ 04-10-2022 – ಮಹಾನವಮಿ, ಆಯುಧ ಪೂಜಾ
ದಿನಾಂಕ 05-10-2022 – ವಿಜಯ ದಶಮಿ
ದಿನಾಂಕ 24-10-2022 – ನರಕ ಚತುರ್ಥಿ
ದಿನಾಂಕ 26-10-2022 – ಬಲಿ ಪಾಡ್ಯಮಿ, ದೀಪಾವಳಿ
ದಿನಾಂಕ 01-11-2022 – ಕನ್ನಡ ರಾಜ್ಯೋತ್ಸವ
ದಿನಾಂಕ 11-11-2022 – ಕನಕದಾಸ ಜಯಂತಿ
ಈ ಮೇಲ್ಕಂಡ ಪಟ್ಟಿಯಲ್ಲಿ ದಿನಾಂಕ 01-05-2022ರ ಕಾರ್ಮಿಕ ದಿನ, ದಿನಾಂಕ 10-07-2022ರ ಬಕ್ರಿದ್, ದಿನಾಂಕ 25-09-2022ರ ಮಹಾಲಯ ಅಮವಾಸೆ, ದಿನಾಂಕ 02-10-2022ರ ಗಾಂಧಿ ಜಯಂತಿ, ದಿನಾಂಕ 09-10-2022ರ ಮಹರ್ಷಿ ವಾಲ್ಮೀಕಿ ಜಯಂತಿ, ಈದ್ ಮಿಲಾದ್ ಮತ್ತು ದಿನಾಂಕ 25-12-2022ರ ಕ್ರಿಸ್ ಮಸ್ ರಜೆಗಳನ್ನು ಸೇರಿಸಿಲ್ಲ. ಯಾಕೆಂದ್ರೇ ಈ ಎಲ್ಲಾ ದಿನಗಳು ಭಾನುವಾರದಂದು ಬರಲಿದೆ ಎಂಬುದಾಗಿ ತಿಳಿಸಲಾಗಿದೆ.