ಹೇಮಾವತಿ ನದಿ ನೀರು ಉಕ್ಕಿ ಹರಿಯದಂತೆ ತಡೆಗೊಡೆ ನಿರ್ಮಾಣ : ಸಚಿವ ಗೋಪಾಲಯ್ಯ ಭರವಸೆ…

kannada t-shirts

ಹಾಸನ,ಆ,8,2020(www.justkannada.in):  ರಾಮನಾಥಪುರ ಪಟ್ಟಣದಿಂದ ಹಾದು ಹೋಗಿರುವ ಹೇಮಾವತಿ ನದಿಯಿಂದ ಹಾನಿಯಾಗದಂತೆ ತಡೆಗೋಡೆ ನಿರ್ಮಿಸಲಾಗುವುದು ಎಂದು ಉಸ್ತುವಾರಿ ಸಚಿವ ಕೆ ಗೋಪಾಲಯ್ಯ ಭರವಸೆ ನೀಡಿದರು.jk-logo-justkannada-logo

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಸೂಚನೆಯಂತೆ ರಾಮನಾಥಪುರ ನೆರೆ ಹಾವಳಿ ಪ್ರದೇಶದ ಪರಿಶೀಲನೆಗೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ‌ ಮಾತನಾಡಿ ಹೇಮಾವತಿ ನದಿಯಿಂದ ಆಗಿರುವಂತಹ ಹಾನಿಯನ್ನು ಕಂಡಿದ್ದು ಮುಂದಿನ ಕೆಲ ದಿನಗಳಲ್ಲಿ ತಡೆಗೋಡೆ ನಿರ್ಮಿಸಲಾಗುವುದು ಎಂದು ತಿಳಿಸಿದರು.

ಪ್ರತಿವರ್ಷ ಮಳೆಯ ಅವಾಂತರ ಹೆಚ್ಚುತ್ತಿದ್ದು ಸಕಲೇಶಪುರ ಮಡಿಕೇರಿ ಹಾಗೂ ಇತರ ಜಿಲ್ಲೆಗಳಲ್ಲಿ ಹೆಚ್ಚು ಹಾನಿ ಸಂಭವಿಸುತ್ತಿದೆ ಇದಕ್ಕೆ ಅರಣ್ಯನಾಶವು ಒಂದು ಕಾರಣವಾಗಿದೆ ಮೂರ್ನಾಲ್ಕು ತಿಂಗಳು ಬರಬೇಕಾದ ಮಳೆ ಎಂಟು ಹತ್ತು ದಿನದಲ್ಲಿ ಸುರಿಯುತ್ತಿರುವುದರಿಂದ ಇಂತಹ ಅನಾಹುತಗಳು ಸಂಭವಿಸುತ್ತಿವೆ ಎಂದು ಹೇಳಿದರು.

ಜಿಲ್ಲೆಯ ಜಲಾಶಯಗಳ ಹಿನ್ನೀರಿನಲ್ಲಿ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ನೀರಿನ ಹರಿವು ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಜಲಾಶಯದ ಅಚ್ಚುಕಟ್ಟು ಪ್ರದೇಶಗಳಿಗೆ ಹಾಗೂ ಇತರ ಜಿಲ್ಲೆಗಳಿಗೆ ನಾಲೆಗಳ ಮೂಲಕ ಕೆರೆಕಟ್ಟೆ ತುಂಬಿಸಲು ನೀರನ್ನು ಹರಿ ಬಿಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಿದ್ದೇನೆ ಎಂದು ಸಚಿವರು ಇದೇವೇಳೆ ತಿಳಿಸಿದರು.

ರಾಮನಾಥಪುರ ಪಟ್ಟಣಕ್ಕೆ ಹೇಮಾವತಿ ನೀರು ಉಕ್ಕಿ ಹರಿಯದಂತೆ ತಡೆಗೋಡೆ ನಿರ್ಮಾಣ ನಮ್ಮ ಸರ್ಕಾರದ ಅವಧಿಯಲ್ಲಿ ಪೂರ್ಣಗೊಳಿಸುವುದು ನಿಶ್ಚಿತ ಎಂದರಲ್ಲದೆ ಸರ್ಕಾರ ಜನರ ಸಂಕಷ್ಟಗಳಿಗೆ ಸೂಕ್ತವಾಗಿ ಸ್ಪಂದಿಸಲಿದೆ ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಅರಕಲಗೂಡು ಕ್ಷೇತ್ರದ ಶಾಸಕ ಎ ಟಿ ರಾಮಸ್ವಾಮಿ ಮಾಜಿ ಸಚಿವ ಮಂಜು ಸೇರಿದಂತೆ ಇತರೆ ಅಧಿಕಾರಿಗಳು ಹಾಜರಿದ್ದರು.

ಹೇಮಾವತಿ ಜಲಾನಯನ ಪ್ರದೇಶಗಳ ಕೆರೆ-ಕಟ್ಟೆಗಳಿಗೆ ನೀರು….

ಹೇಮಾವತಿ ಜಲಾನಯನ ಪ್ರದೇಶಗಳ ಕೆರೆ-ಕಟ್ಟೆಗಳಿಗೆ ಹಾಗೂ ಇತರ ಜಿಲ್ಲೆಗಳಿಗೆ ನೀರನ್ನು ಹರಿಬಿಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ ಗೋಪಾಲಯ್ಯ ತಿಳಿಸಿದರು.Hemavathi River –dam-built-Minister Gopalaiah

ಜಿಲ್ಲೆಯ ಗೊರೂರಿನ ಹೇಮಾವತಿ ಜಲಾಶಯಕ್ಕೆ ಇಂದು ಬೆಳಗ್ಗೆ ಭೇಟಿ ನೀಡಿದ ಸಚಿವರು ಜಲಾಶಯದ ಇಂಜಿನಿಯರ್ ಗಳೊಂದಿಗೆ ಮಾತನಾಡಿದರು ಹಾಗೂ ಜಲಾಶಯಕ್ಕೆ ಒಳಹರಿವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚುವರಿ ನೀರನ್ನು ಹರಿಬಿಡಲು ತಿಳಿಸಿದರು.

ಹೇಮಾವತಿ ಜಲಾಶಯಕ್ಕೆ ಒಳಪಡುವ ಜಿಲ್ಲೆಗಳಾದ ತುಮಕೂರು ಹಾಸನ ಹಾಗೂ ಮಂಡ್ಯ ಜಿಲ್ಲೆಗಳಿಗೆ ಕೆರೆಕಟ್ಟೆಗಳ ನೀರು ತುಂಬಿಸಲು ನಾಲೆಗಳಿಗೆ ನೀರನ್ನು ಬಿಡುವಂತೆ ಸೂಚನೆ ನೀಡಿದರು .

ಹೇಮಾವತಿ ಜಲಾಶಯಕ್ಕೆ ಈಗಾಗಲೇ 50 ಸಾವಿರ ಕ್ಯೂಸೆಕ್ಸ್ ನೀರು ಒಳಹರಿವಿದ್ದು 20 ಸಾವಿರ ಕ್ಯೂಸೆಕ್ಸ್ ನೀರು ನಾಲೆ ಹಾಗೂ ನದಿಗೆ ಹರಿಬಿಡಲಾಗುತ್ತಿದೆ ಎಂದು ಇದೇ ವೇಳೆ ಸಚಿವರು ತಿಳಿಸಿದರು. ಈ ವೇಳೆ ಅರಕಲಗೂಡು  ಶಾಸಕರಾದ ರಾಮಸ್ವಾಮಿ ಹಾಗೂ ಜಲಾಶಯದ ಅಧಿಕಾರಿಗಳು ಉಪಸ್ಥಿತರಿದ್ದರು.

Key words: Hemavathi River –dam-built-Minister Gopalaiah

 

website developers in mysore