ಹೆಗ್ಡೆ ಗ್ರೂಪ್ಸ್ ಮತ್ತು ಕನ್ನಡ ಕಾನೂನು ಮಾಸ ಪತ್ರಿಕೆ ಬಳಗದಿಂದ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಿಗೆ ಗೌರವ ಸಮರ್ಪಣೆ.

ಮೈಸೂರು,ಫೆಬ್ರವರಿ,15,2023(www.justkannada.in): ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಮೈಸೂರು ಜಿಲ್ಲಾ ಪತ್ರಕರ್ತರಿಗೆ ಹೆಗ್ಡೆ ಗ್ರೂಪ್ಸ್ ಹಾಗೂ ಮೈಸೂರಿನ ಕನ್ನಡ ಕಾನೂನು ಮಾಸ ಪತ್ರಿಕೆ ಬಳಗ ವತಿಯಿಂದ ಸನ್ಮಾನ ಮಾಡಿ ಗೌರವ ಸಮರ್ಪಿಸಲಾಯಿತು.

ನಗರದ ಚಾಮರಾಜಪುರಂನ  ಟರ್ಮರಿಕ್ ಕಿಚನ್ ಹೋಟೆಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ  ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಭಾಜನರಾದ ಮೈಸೂರು ನಗರದ ಪತ್ರಕರ್ತರಾದ ಪಬ್ಲಿಕ್ ಟಿವಿಯ ಹಿರಿಯ ವರದಿಗಾರ ಕೆ ಪಿ ನಾಗರಾಜ್, ಹಿಂದೂ ಪತ್ರಿಕೆಯ ಹಿರಿಯ ವರದಿಗಾರ ಶಂಕರ್ ಬೆನ್ನೂರು, ವಿಜಯ ಕರ್ನಾಟಕ ಪತ್ರಿಕೆಯ ಹಿರಿಯ ಛಾಯಾಗ್ರಾಹಕ ನಾಗೇಶ್ ಪಾಣತ್ತಲೆ, ಆಂದೋಲನ ಪತ್ರಿಕೆಯ ಹಿರಿಯ ವರದಿಗಾರ ಕೆ ಬಿ ರಮೇಶ್ ನಾಯಕ, ವಿಜಯವಾಣಿ ಪತ್ರಿಕೆಯ ಹಿರಿಯ ಉಪ ಸಂಪಾದಕ ಮುಳ್ಳೂರು ರಾಜು, ಆಂದೋಲನ ಪತ್ರಿಕೆಯ ಹಿರಿಯ ಸಂಪಾದಕ ಮುಳ್ಳೂರು ಶಿವಪ್ರಸಾದ್ ಅವರಿಗೆ ಗೌರವ ಸಮರ್ಪಣೆ ಮಾಡಲಾಯಿತು.

ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪಡೆದ ಮೈಸೂರು ಪತ್ರಕರ್ತರಿಗೆ ಸನ್ಮಾನಿಸಿ ಮಾತನಾಡಿದ ಮಾಜಿ ಸಿಎಂ ವೀರಪ್ಪ ಮೊಯ್ಲಿ, ನಾನು ಹಿರಿಯ ರಾಜಕಾರಣಿಯಾಗಿ ಪತ್ರಕರ್ತ, ಪ್ರಕಾಶಕ, ವಕೀಲನಾಗಿ ಕೆಲಸ ಮಾಡಿದ್ದೇನೆ.  ಹೆಗಡೆ ಗ್ರೂಪ್ ಹಾಗೂ ಕನ್ನಡ ಕಾನೂನು ಮಾಸಪತ್ರಿಕೆ ಲಾ ಗೈಡ್ ಆಯೋಜಿಸಿದ್ದ ಸಮಾರಂಭದಲ್ಲಿ ಪ್ರಶಸ್ತಿ ವಿಜೇತರನ್ನ ಸನ್ಮಾನಿಸಿದ್ದು, ನನ್ನ ಸುದೈವ. ನಾನು ಮುಖ್ಯಮಂತ್ರಿಯಾಗಿದ್ದಾಗ ತಂದ  ಅನೇಕ ಕ್ರಾಂತಿಕಾರಿ ಯೋಜನೆಗಳನ್ನ  ಜಾರಿ ಮಾಡಿದ್ದೇನೆ. ದೇಶದ ಪ್ರಥಮ ಭೂಸುಧಾರಣಾ ಕಾಯಿದೆ, ಸಿಇಟಿ ಜಾರಿಗೆ ತಂದಿದ್ದು, ರಾಷ್ಟ್ರೀಯ ಕಾನೂನು ಕಾಲೇಜು ಸ್ಥಾಪನೆ, ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ  ಆಸ್ತಿ ಹಂಚಿಕೆ ಹಾಗೂ ಶೇ.33 ರಷ್ಟು ಮೀಸಲಾತಿ ಮಹಿಳೆಯರಿಗೆ ಜಾರಿ  ತಂದರೂ ಮಹಿಳೆಯರು ನನ್ನನ್ನ ಸನ್ಮಾನಿಸಲಿಲ್ಲವೆಂದು ಹಾಸ್ಯಭರಿತವಾಗಿ ನುಡಿದರು. ಸನ್ಮಾನ ಸ್ವೀಕರಿಸಿದ ಪತ್ರಕರ್ತರಿಗೆ ಶುಭ ಕೋರಿದರು.

ಸಮಾರಂಭದಲ್ಲಿ ಮುಖ್ಯ  ಅತಿಥಿಯಾಗಿ ಭಾಗವಹಿಸಿದ್ದ ಮಾಜಿ ಶಾಸಕ ವಾಸು ಅವರು ಹೆಗಡೆ ಗ್ರೂಪ್ ಹಾಗೂ ಲಾಗೈಡ್ ಕಾನೂನು ಪತ್ರಿಕೆಯ ಸಮಾಜಮುಖಿ ಕಾರ್ಯವನ್ನ ಪ್ರಶಂಸಿದರು. ಹಾಗೂ ಪತ್ರಕರ್ತರಿಗೆ ಶುಭಕೋರಿದರು.

ಕಾರ್ಯಕ್ರಮದಲ್ಲಿ ಹೆಗಡೆ ಗ್ರೂಪ್ ನ ಹರೀಶ್ ಹೆಗಡೆ, ಲಾಗೈಡ್ ಕಾನೂನು ಪತ್ರಿಕಾ ಸಂಪಾದಕ ಹೆಚ್.ಎನ್ ವೆಂಕಟೇಶ್, ಹಾಗೂ ವಕೀಲರ ಸಂಘದ ಅಧ್ಯಕ್ಷ ಮಹದೇವಸ್ವಾಮಿ, ಉಮೇಶ್ ಹಾಗೂ ಕಾನೂನು ವಿದ್ಯಾರ್ಥಿಗಳು , ಅನೇಖ ಹಿರಿ ಕಿರಿಯ ವಕೀಲರು ಉಪಸ್ಥಿತರಿದ್ದರು.

Key words: Hegde Group –Kannada- Law -paper Tribute- Media Academy Award- Winners- Veerappa Moily