ನಿರಂತರ ಮಳೆ ಹಿನ್ನೆಲೆ: ಟೊಮೊಟೊ ಬೆಲೆ ಕುಸಿತ: ವ್ಯಾಪಾರಸ್ಥರು ಕಂಗಾಲು..

kannada t-shirts

ಬೆಂಗಳೂರು,ಅ,26,2019(www.justkannada.in):  ರಾಜ್ಯದಲ್ಲಿ ಸುರಿಯುತ್ತಿರುವ ಭಾರಿ ಮಳೆಯ ಪರಿಣಾಮ ಟೊಮೊಟೊ ಬೆಲೆ ಕುಸಿತವಾಗಿದ್ದು ಈ ಹಿನ್ನೆಲೆ ರೈತರು ವ್ಯಾಪಾರಸ್ಥರು ಕಂಗಾಲಾಗಿದ್ದಾರೆ.

ರಾಜ್ಯದೆಲ್ಲೆಡೆ ಕಳೆದ ಒಂದು ವಾರಗಳಿಂದಲೂ  ವರುಣನ ಅಬ್ಬರಿಸುತ್ತಿದ್ದು ಈ ಹಿನ್ನೆಲೆ ಟೊಮೊಟೊ ಬೆಲೆ ಕುಸಿದಿದೆ. 1ಕೆಜಿ ಟೊಮೊಟೊ ಬೆಲೆ ಕೇವಲ  5ರೂಗೆ ಇಳಿದಿದ್ದು ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರು ಕಂಗಾಲಾಗಿದ್ದಾರೆ ಟೊಮೊಟೊ ವ್ಯಾಪಾರದಲ್ಲಿ  ಬೆಲೆ ಕುಸಿತವಾದ ಹಿನ್ನೆಲೆ ವ್ಯಾಪಾರಸ್ಥರು ಚೀಲಗಟ್ಟಲೆ ಟೊಮೊಟೊ ಗಳನ್ನ ಬೀದಿಗೆ ಸುರಿದಿದ್ದಾರೆ.

ಮಳೆಯ ಕಾಟದಿಂದ ಒಂದೆಡೆ ರೈತರು ಸಂಕಷ್ಟಕ್ಕೆ  ಸಿಲುಕಿದರೇ ಇತ್ತ ಟಮೊಟೊ ಬೆಲೆ ಕುಸಿದು ವ್ಯಾಪಾರಸ್ಥರು ಪರದಾಡುತ್ತಿದ್ದಾರೆ ಈ ಮೂಲಕ ಮಳೆರಾಯ ರೈತನ ಬೆಳೆಗೆ ಕತ್ತಲಾಗಿದ್ದಾನೆ.

Key words: Heavy rain – Tomato Price – Decrease

website developers in mysore