ಕೊಡಗಿನಲ್ಲಿ ಭಾರಿ ಮಳೆ ಹಿನ್ನೆಲೆ: ಜಿಲ್ಲಾಡಳಿತದಿಂದ ಕಂಟ್ರೋಲ್ ರೂಂ ಓಪನ್….

ಕೊಡಗು,ಆ,6,2020(www.justkannada.in): ಕಾಫಿನಾಡು ಕೊಡಗಿನಲ್ಲಿ ಭಾರಿ ಮಳೆಯಾಗುತ್ತಿದ್ದು ಪ್ರವಾಹದ ಭೀತಿ ಎದುರಾಗಿದೆ.  ಈ ಹಿನ್ನೆಲೆ ಕೊಡಗು ಜಿಲ್ಲಾಡಳಿತ ರೆಡ್ ಅಲರ್ಟ್ ಘೋಷಣೆ ಮಾಡಿದೆ.heavy-rain-kodagu-control-room-open-district

ಸಾರ್ವಜನಿಕರ ಹಿತದೃಷ್ಟಿಯಿಂದ ಕೊಡಗು ಜಿಲ್ಲಾಡಳಿತ ಕಂಟ್ರೋಲ್ ರೂಂ ತೆರೆದಿದ್ದು, ಹವಾಮಾನ ಮುನ್ಸೂಚನೆ ಪ್ರಕಾರ ಕೊಡಗಿನಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಿ ಕೊಡಗು ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಆದ್ದರಿಂದ ನಾಡಿನ ಜನತೆ ಎಚ್ಚರಿಕೆ ವಹಿಸುವಂತೆ ಕೋರಲಾಗಿದೆ.

ಇನ್ನು ಭಾರಿ ಮಳೆ ಹಿನ್ನೆಲೆ  ಮುನ್ನೆಚ್ಚರಿಕೆ ಬಗ್ಗೆ ಜಿಲ್ಲಾಧಿಕಾರಿ ಅನ್ನೀಸ್ ಕಣ್ಮಣಿ ಜಾಯ್  ಮಾಹಿತಿ ನೀಡಿದ್ದು, ಜಿಲ್ಲೆಯಲ್ಲಿ ದಿನಾಂಕ 03-08-2020 ರಿಂದ 05-08-2020ರ ಬೆಳಿಗ್ಗೆ 8:30 ವರೆಗೆ  ಹೆಚ್ಚಿನ ಮಳೆಯಾಗಿದೆ. ಸಾರ್ವಜನಿಕರು ತುರ್ತು ಸೇವೆಗೆ ಟೋಲ್ ಫ್ರೀ ಸಂಖ್ಯೆ 24×7 ಕಂಟ್ರೋಲ್ ರೂಂ. 08272 – 221077, ವಾಟ್ಸ್ ಆ್ಯಪ್ ಸಂಖ್ಯೆ : 8550001077 ಈ ನಂಬರ್ ಸಂಪರ್ಕಿಸಬಹುದಾಗಿದೆ.heavy-rain-kodagu-control-room-open-district

ಕೊಡಗು  ಜಿಲ್ಲೆಯಲ್ಲಿ ಪ್ರವಾಹ ಮತ್ತು ಭೂಕುಸಿದ ಅಪಾಯದ ಮುನ್ಸೂಚನೆಯು ದೊರೆತಿದ್ದು ಕಳೆದ ಬಾರಿಯಂತೆ ಹಾನಿ ಉಂಟಾಗುವ ಮುನ್ನವೇ ರಾಜ್ಯ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಿದೆ.

Key words: Heavy rain – Kodagu-Control Room- Open – District.