ಕೊಡಗಿನಲ್ಲಿ ಭಾರಿ ಮಳೆ ಹಿನ್ನೆಲೆ: ಬಾಗಮಂಡಲ ತ್ರಿವೇಣಿ ಸಂಗಮ 3ನೇ ಬಾರಿಗೆ ಜಲಾವೃತ…

ಕೊಡಗು,ಸೆ,9,2019(www.justkannada.in):  ಕೊಡಗಿನಲ್ಲಿ ಧಾರಾಕಾರ ಮಳೆ ಹಿನ್ನೆಲೆ ಬಾಗಮಂಡಲದ ತ್ರಿವೇಣಿ ಸಂಗಮ ಮೂರನೇ ಬಾರಿಗೆ ಜಲಾವೃತವಾಗಿದೆ.

ದಕ್ಷಿಣ ಕೊಡಗಿನಲ್ಲಿ ತಲಕಾವೇರಿ ವ್ಯಾಪ್ತಿಯಲ್ಲಿ ವರುಣನ ಅಬ್ಬರ ಜೋರಾಗಿದ್ದು ಈ ಹಿನ್ನೆಲೆ ಬಾಗಮಂಡಲದ ತ್ರಿವೇಣಿ ಸಂಗಮ ಜಲಾವೃತವಾಗಿದೆ. ಹಾಗೆಯೇ ಮಳೆಯಿಂದಾಗಿ  ಬಾಗಮಂಡಲ- ನಾಪೊಕ್ಲು ಸಂಪರ್ಕ ಕಡಿತಗೊಂಡಿದೆ.

ರಾಜ್ಯದಲ್ಲಿ ಕೆಲ ದಿನಗಳ ಹಿಂದೆ ಭಾರೀ ಅವಾಂತರ ಸೃಷ್ಠಿಸಿದ್ದ ಮಳೆರಾಯ ಮತ್ತೆ ತನ್ನ ಆರ್ಭಟ ಮುಂದುವರೆಸಿದ್ದು, ಮುಂದಿನ 24 ಗಂಟೆಯಲ್ಲಿ ರಾಜ್ಯದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಈ ನಡುವೆ ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿದ್ದು, ಕೃಷ್ಣಾ  ನದಿ, ಮಲಪ್ರಭಾನದಿ ಉಕ್ಕಿ ಹರಿಯುತ್ತಿದೆ.

Key words: Heavy rain – Kodagu-Bagamamandala- Triveni Sangama