ತಿರುಪತಿಯಲ್ಲಿ ಭಕ್ತರ ಸಾಗರ: ಸದ್ಯಕ್ಕೆ ವೆಂಕಟೇಶ್ವರನ ದರ್ಶನಕ್ಕೆ ಬಾರದಿರಿ ಎಂದ ಟಿಟಿಡಿ

Promotion

ಬೆಂಗಳೂರು, ಮೇ 29, 2022 (www.justkannada.in): ಧಾರ್ಮಿಕ ಕ್ಷೇತ್ರವಾಗಿರುವ ತಿರುಪತಿ ವೆಂಕಟೇಶ್ವರನ ಸನ್ನಿಧಿಗೆ ಭಕ್ತ ಜನಸಾಗರವೇ ಹರಿದು ಬಂದಿದೆ.

ವಾರಾಂತ್ಯದ ಜತೆಯಲ್ಲಿ ಬೇಸಿಗೆ ರಜೆಯ ಹಿನ್ನೆಲೆಯಲ್ಲಿ ಭಾರೀ ಪ್ರಮಾಣದಲ್ಲಿ ಭಕ್ತಾದಿಗಳು ದೇವರ ದರ್ಶನಕ್ಕೆ ಬಂದಿದ್ದಾರೆ.

ಉಚಿತ ದರ್ಶನವಾಗಿರುವ ಸರ್ವ ದರ್ಶನಕ್ಕೆ ಬರೋಬ್ಬರಿ 48 ತಾಸುಗಳ ಕಾಲ ಕಾಯುವಂತಾಗಿದೆ. 4-5 ಕಿ.ಮೀ.ವರೆಗೆ ಸರತಿ ಸಾಲಿದೆ.  ವೈಕುಂಠಂ ಸಂಕೀರ್ಣದಲ್ಲಿರುವ 33 ನಿರೀಕ್ಷಣಾ ಕೊಠಡಿಗಳೂ ಭರ್ತಿಯಾಗಿವೆ.

ಈ ಸಮಯದಲ್ಲಿ ಯಾವುದೇ ಭಕ್ತಾದಿಗಳು ತಿರುಪತಿಗೆ ಬರುವ ಯೋಜನೆಯನ್ನು ಹಾಕಿಕೊಂಡಿದ್ದರೆ, ದಯಮಾಡಿ ಯೋಜನೆಯನ್ನು ಮುಂದೂಡಿಕೊಳ್ಳಿ’ ಎಂದು ಟಿಟಿಡಿ ಹೇಳಿದೆ.