ಬ್ರಿಮ್ಸ್ ಅವ್ಯವಸ್ಥೆ ಕಂಡು ಆರೋಗ್ಯ ಸಚಿವ ಸುಧಾಕರ್ ಕೆಂಡಾಮಂಡಲ: ಅಧಿಕಾರಿಗಳಿಗೆ ತರಾಟೆ…

ಬೀದರ್,ಏಪ್ರಿಲ್,30,2021(www.justkannada.in):  ಬ್ರಿಮ್ಸ್ ಕಾಲೇಜು ಆಸ್ಪತ್ರೆ ಅವ್ಯವಸ್ಥೆ   ಕಂಡು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಕೆಂಡಾಮಂಡಲರಾದ ಘಟನೆ ಇಂದು ನಡೆಯಿತು.jk

ವೈದ್ಯರು ಮತ್ತು ಸಿಬ್ಬಂದಿಯ ಸಮರ್ಪಕ ಬಳಕೆ ಮಾಡದ ನಿರ್ದೇಶಕರನ್ನು ಸಚಿವ ಡಾ,ಕೆ.ಸುಧಾಕರ್ ತೀವ್ರವಾಗಿ ತರಾಟೆ ತೆಗೆದುಕೊಂಡರು. ಇಂದು ಬೀದರ್ ನ ಬ್ರಿಮ್ಸ್ ಗೆ ಭೇಟಿ ನೀಡಿದ ಸಚಿವ ಡಾ.ಕೆ.ಸುಧಾಕರ್, ಏಳನೂರಕ್ಕೂ ಹೆಚ್ಚು ಸಿಬ್ಬಂದಿ ಇದ್ದರೂ ಕೋವಿಡ್ ಚಿಕಿತ್ಸೆಗೆ ಬಳಕೆ ಮಾಡಿಕೊಳ್ಳಲು ನಿಯೋಜಿಸಿರುವ ಸಿಬ್ಬಂದಿ ಮಾಹಿತಿ ಸರಿಯಾಗಿ ನೀಡಲು ವಿಫಲವಾಗಿದ್ದನ್ನು ಕಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ರಾತ್ರಿಪಾಳಿಯಲ್ಲಿ ವೈದ್ಯರು ಮತ್ತು ಸಿಬ್ಬಂದಿ ಇರುವುದಿಲ್ಲ. ರೋಗಿ ಸಂಬಂಧಿಗಳು ವಾರ್ಡ್ ಗೆ ಬಿಡುತ್ತಿರುವುದರ ಬಗ್ಗೆ ಸಿಇಓ ಅವರನ್ನು ತರಾಟೆ ತೆಗೆದುಕೊಂಡ ಸಚಿವ ಡಾ.ಕೆ ಸುಧಾಕರ್, ರೋಗದ ಹರಡುವಿಕೆ ತಡೆಯಲು ಮಾರ್ಗಸೂಚಿ ಅನ್ವಯ ಕರ್ತವ್ಯ ನಿರ್ವಹಿಸಬೇಕು. ಹೋಮ್ ಐಸೋಲೇಷನ್ ನಲ್ಲಿರುವ ಸೋಂಕಿತರಿಗೆ ಔಷಧಗಳ ಕಿಟ್ ನೀಡದಿರುವ ಮತ್ತು ನಿಗಾ ವ್ಯವಸ್ಥೆ ರೂಪಿಸದಿರುವ ಬಗ್ಗೆಯೂ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.

ಜನರಲ್ಲಿ ಅರಿವು ಮೂಡಿಸುವ ಕೆಲಸ ಆಗಬೇಕು. ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಈ ಕೆಲಸಕ್ಕೆ ಚುನಾಯಿತ ಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ತೆಲಂಗಾಣ ಮತ್ತು ಆಂಧ್ರದ ಸೋಂಕಿತರು ಬಂದರೂ ಚಿಕಿತ್ಸೆ ನೀಡಲು ಅಗತ್ಯ ಸಿಬ್ಬಂದಿ ಇದೆ.  ಸಮನ್ವಯದೊಂದಿಗೆ ಕರ್ತವ್ಯ ನಿರ್ವಹಿಸಬೇಕು ಎಂದು ಸಚಿವ ಸುಧಾಕರ್ ಸೂಚನೆ ನೀಡಿದರು.

ಯಾವುದೇ ಕಾರ್ಪೋರೆಟ್ ಆಸ್ಪತ್ರೆಗೆ ಕಡಿಮೆ ಇಲ್ಲದಂತೆ ವೈದ್ಯರು ಮತ್ತು ಸಿಬ್ಬಂದಿ ಇದ್ದರೂ ಕರ್ತವ್ಯಕ್ಕೆ ಹಾಜರಾಗದಿದ್ದರೆ ಹೇಗೆ? ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳನ್ನು ಪೂರ್ಣ ಪ್ರಮಾಣದಲ್ಲಿ ನಿಯೋಜನೆ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.health-minister-sudhakar-outrage-brims-bidar

ಇದು ಯುದ್ಧದ ಸಮಯ. ಇಂತಹ ಸಂದರ್ಭದಲ್ಲಿ ಹೌಸ್ ಸರ್ಜನ್ಸ್, ರೆಸಿಡೆಂಟ್ ಡಾಕ್ಟರ್ಸ್, ಪಿಜಿ ಸ್ಟೂಡೆಂಟ್ಸ್ ಗಳು ಕಡ್ಡಾಯವಾಗಿ ಕೋವಿಡ್ ಕರ್ತವ್ಯ ದಲ್ಲಿ ಪಾಲ್ಗೊಳ್ಳಬೇಕು. ಟೆಲಿಕಾಲ್, ಕೌನ್ಸೆಲಿಂಗ್ ನಂತಹ ಕರ್ತವ್ಯದಲ್ಲಿ ನಿಯೋಜನೆ ಮಾಡಬೇಕು ಎಂದು ತಾಕೀತು ಮಾಡಿದರು.

 ಪಿಪಿಇ ಕಿಟ್ ನೀಡದಕ್ಕೆ ತರಾಟೆ..

ಹಾಗೆಯೇ ವಾರ್ಡ್  ಮತ್ತು ಐಸಿಯುಗಳಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರು ಮತ್ತು ಸಿಬ್ಬಂದಿಗೆ ಸರಿಯಾದ ರೀತಿಯಲ್ಲಿ ಪಿಪಿಇ ಕಿಟ್ ನೀಡದ್ದನ್ನು ಕಂಡು ಸಚಿವ ಸುಧಾಕರ್ ಕೆಂಡಾಮಂಡಲರಾದರು. ಉತ್ತಮ ಗುಣಮಟ್ಟದ ವಸ್ತುಗಳನ್ನು ಕಳುಹಿಸಿದ್ದರೂ ನೀಡದ್ದಕ್ಕೆ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ ಅವರು,  ಈ ಬಗ್ಗೆ ತನಿಖೆ ನಡೆಸಿ ವರದಿ ನೀಡಲು ಜಿಲ್ಲಾ ಪಂಚಾಯತ್ ಸಿಇಒ ಜಹೀರಾ ನಸೀಂ ಅವರಿಗೆ ಸೂಚನೆ ನೀಡಿದರು.

ಸಿಟಿ ಸ್ಕ್ಯಾನರ್ ಕೆಲಸ ಮಾಡದ್ದನ್ನೂ ತಿಳಿದ ಸಚಿವ ಸುಧಾಕರ್ ಸಂಜೆ ವೇಳೆಗೆ ಅದನ್ನು ಸುಸ್ಥಿತಿಗೆ ತರಬೇಕು. ಹೆಚ್ಚುವರಿಯಾಗಿ ಮತ್ತೊಂದು ಸಿಟಿ ಸ್ಕ್ಯಾನರ್ ಖರೀದಿಸಲು ಸ್ಥಳದಲ್ಲೇ ಆದೇಶ ನೀಡಿದರು.

ಈ ವೇಳೆ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್, ಸಂಸದರಾದ ಭಗವಂತ ಖೂಬ,  ಶಾಸಕರಾದ ಬಂಡೆಪ್ಪ ಕಾಶೆಂಪೂರ್, ನಹೀಂಖಾನ್ ಮತ್ತಿತರಿದ್ದರು.

ENGLISH SUMMARY…

Health Minister Dr. K. Sudhakar expresses displeasure on seeing the condition at BRIMS
Bidar, Apr. 30, 2021 (www.justkannada.in): Health and Medical Education Minister Dr. K. Sudhakar visited the BRIMS College and Hospital in Bidar. He expressed his deep displeasure looking at the condition and took the officials concerned to the task.
The Minister took the Director to task questioning why he is not utilizing the services of the doctors and staff properly. He expressed his deep displeasure as the officer concerned couldn’t reply properly about the attendance of staff. The hospital has more than 700 staff but their services are not being utilized properly. The Director failed to provide the details to the Minister irking him.
After coming to know about the absence of doctors and staff during night hours, and allowing relatives of the patients into the wards he took the CEO to task. He also expressed displeasure on the officers concerned for not following the guidelines including providing medicines kits to the patients who are in home isolation and monitoring.health-minister-sudhakar-outrage-brims-bidar
He instructed that all the house surgeons, resident doctors, PG students should compulsorily be present and also make arrangements for providing telecalling and counseling services.
District In-charge Minister Prabhu Chavan, MP Bhagwanth Khooba, MLAs Bandeppa Kashempur and Nahim Khan accompanied him.
Keywords: Health Minister Dr. K. Sudhakar/ visits BRIMS/ expresses displeasure

Key words: Health minister- Sudhakar –outrage- BRIMS-bidar