ಜನತಾ ಕರ್ಫ್ಯೂ ವೇಳೆ ಕೋವಿಡ್ ಲಸಿಕೆ ನೀಡುವ ಬಗ್ಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಪ್ರತಿಕ್ರಿಯಿಸಿದ್ದು ಹೀಗೆ…?

ಬೆಂಗಳೂರು,ಏಪ್ರಿಲ್,27,2021(www.justkannada.in):  ಕೊರೋನಾ ತಡೆಗೆ ಇಂದು ರಾತ್ರಿಯಿಂದ 14 ದಿನಗಳ ಕಾಲ ಜನತಾ ಕರ್ಫ್ಯೂ ಘೋಷಣೆ ಮಾಡಲಾಗಿದ್ದು ಈ ಹಿನ್ನೆಲೆಯಲ್ಲಿ ಕೃಷಿ ಉತ್ಪಾದನಾ ವಲಯ ಹೊರತುಪಡಿಸಿ ಎಲ್ಲವೂ ಬಂದ್ ಆಗಲಿದೆ. ಈ ವೇಳೆ ಕೊರೋನಾ ಲಸಿಕೆ ನೀಡುವುದನ್ನ ಮುಂದುವರಿಸುವ ಬಗ್ಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಪ್ರತಿಕ್ರಿಯಿಸಿದ್ದಾರೆ.jk

ಈ ಕುರಿತು ಮಾತನಾಡಿರುವ ಸಚಿವ ಸುಧಾಕರ್,   ಕೊರೋನಾ ಲಸಿಕೆ ನೀಡುವುದನ್ನ ಮುಂದುವರೆಸುತ್ತೇವೆ. ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕೊರೋನಾ ತಡೆಯ ಮಾರ್ಗವೆಂದ್ರೇ ಲಸಿಕೆ ಪಡೆಯೋದು. ರಾಜ್ಯದ ಜನರು ತಪ್ಪದೇ ಲಸಿಕೆ ಪಡೆಯಬೇಕು. ಕೊರೋನಾ ವಿರುದ್ಧದ ಹೋರಾಟಕ್ಕೆ ಇದು ಸಹಕಾರಿ ಆಗಲಿದೆ ಎಂದಿದ್ದಾರೆ.Health Minister -Dr K Sudhakar –covid  vaccination -during -Janata curfew

ರಾಜ್ಯದಲ್ಲಿ ಕೊರೋನಾ ಲಸಿಕೆಯ ಕೊರತೆ ಇಲ್ಲ. ಕಡ್ಡಾಯವಾಗಿ ಪ್ರತಿಯೊಬ್ಬರು ಎರಡು ಡೋಸ್ ಲಸಿಕೆ ಪಡೆಯಬೇಕು. 18 ವರ್ಷ ಮೇಲ್ಪಟ್ಟ ಎಲ್ಲರೂ ಲಸಿಕೆ ಪಡೆಯಿರಿ.  3ನೇ ಅಲೆ ತಡೆಯಬೇಕು ಅಂದರೇ ಕೊರೋನಾ ಲಸಿಕೆ ಪಡೆಯಬೇಕು ಎಂದು  ಸಚಿವ ಸುಧಾಕರ್ ತಿಳಿಸಿದರು.

Key words: Health Minister -Dr K Sudhakar –covid  vaccination -during -Janata curfew