ಕುತೂಹಲ ಕೆರಳಿಸಿದ ಹೆಚ್.ಡಿ ಕುಮಾರಸ್ವಾಮಿ ಮತ್ತು ಮಾಜಿ ಸಚಿವ ರಾಮಲಿಂಗರೆಡ್ಡಿ ಭೇಟಿ…

Promotion

ಬೆಂಗಳೂರು,ಜು,25,2019(www.justkannada.in): ಬಹುಮತ ಸಾಬೀತು ಮಾಡುವಲ್ಲಿ ವಿಫಲರಾಗಿ ಈಗಾಗಲೇ ಸಿಎಂ ಸ್ಥಾನಕ್ಕೆ ನೀಡಿ ಉಸ್ತುವಾರಿ ಸಿಎಂ ಆಗಿರುವ ಹೆಚ್.ಡಿ ಕುಮಾರಸ್ವಾಮಿ ಇಂದು ಮಾಜಿ ಸಚಿವ ರಾಮಲಿಂಗರೆಡ್ಡಿ ಅವರನ್ನ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.

 ನಗರದ ಲಕ್ಕಸಂದ್ರದಲ್ಲಿರುವ ರಾಮಲಿಂಗ ರೆಡ್ಡಿ ನಿವಾಸಕ್ಕೆ ಹೆಚ್.ಡಿ ಕುಮಾರಸ್ವಾಮಿ ಭೇಟಿ ನೀಡಿದ್ದಾರೆ.   ಮನೆಗೆ ಬ್ರೇಕ್ ಫಾಸ್ಟ್ ಗೆ ಬರುವುದಾಗಿ ಫೋನ್ ಮಾಡಿ ಹೇಳಿ ಹೆಚ್.ಡಿ ಕುಮಾರಸ್ವಾಮಿ ದಿಢೀರ್ ಭೇಟಿ ನೀಡಿದ್ದು ಇದೀಗ ಉಭಯ ನಾಯಕರ ನಡುವಿನ ಭೇಟಿ ಕುತೂಹಲಕ್ಕೆ ಕಾರಣವಾಗಿದೆ.

ಸುಮಾರು 1 ಗಂಟೆಗಳಿಂದಲೂ ರಾಮಲಿಂಗರೆಡ್ಡಿ ಅವರ ಜತೆ ಹೆಚ್.ಡಿ ಕುಮಾರಸ್ವಾಮಿ ಚರ್ಚೆ ನಡೆಸುತ್ತಿದ್ದು, ರಾಜ್ಯ ರಾಜಕೀಯ ಬೆಳವಣಿಗೆ ಬಗ್ಗ ಕಣ್ಣೀಟ್ಟಿರುವ  ಅವರು ಮುಂದಿನ ರಾಜಕೀಯ ನಡೆ,  ಕಾರ್ಯತಂತ್ರದ ಬಗ್ಗೆ  ಸಮಾಲೋಚಿಸುತ್ತಿದ್ದಾರೆ ಎನ್ನಲಾಗಿದೆ.

Key words: HD Kumaraswamy –meet-former minister –Ramalingareddy-bangalore