ದುಬಾರಿ ದಂಡಕ್ಕೆ ಬೆಚ್ಚಿಬಿದ್ದ ವಾಹನ ಸವಾರರು‌: ಹೆಲ್ಮೆಟ್ ಹಾಕಿದ ಬೈಕ್ ಸವಾರರಿಗೆ ಗುಲಾಬಿ ಹೂ ನೀಡುವುದರ ಮೂಲಕ  ವಿಶೇಷ ತಪಾಸಣೆ….

kannada t-shirts

ಮೈಸೂರು,ಸೆ,10,2019(www.justkannada.in): ಮೈಸೂರು ಜಿಲ್ಲೆ ಎಚ್.ಡಿ ಕೋಟೆಯಲ್ಲಿ ನಿಯಮ ಉಲ್ಲಂಘನೆ ಮಾಡಿದವರಿಗೆ  ದಂಡ ಹಾಕಿ ಮುಂದೆ ನಿಯಮ ಉಲ್ಲಂಘನೆ ಮಾಡದಂತೆ ಪಿ ಎಸ್ ಐ ನಾಯಕ್ ಹಾಗೂ‌ ತಂಡ  ವಾಹನ ಸವಾರರಿಗೆ ಖಡಕ್ ಎಚ್ಚರಿಕೆ ನೀಡಿತು.

ಹೊಸ ನಿಯಮದಂತೆ ಹೆಚ್ ಡಿ‌ ಕೋಟೆ ಪೋಲಿಸರು ಇಂದು ಭರ್ಜರಿ ದಂಡ ವಸೂಲಿ ಮಾಡಿದರು. ಹೆಚ್ ಡಿ ಕೋಟೆ  ಪೋಲಿಸ್ ಠಾಣೆಯಿಂದ ಇಂದು ವಿಶೇಷ ತಪಾಸಣಾ ಕಾರ್ಯ ನಡೆಯಿತು. ಪಿ ಎಸ್ ಐ ನಾಯಕ್ ಹಾಗೂ‌ ತಂಡ ಇಂದು ತಪಾಸಣೆ ನಡೆಸಿ ಸಂಚಾರ ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸಿದರು.

ಹೆಲ್ಮೆಟ್ ಹಾಕಿದ ಬೈಕ್ ಸವಾರರಿಗೆ ಗುಲಾಬಿ ಹೂ ನೀಡುವುದರ ಮೂಲಕ  ವಿಶೇಷ ತಪಾಸಣೆ  ಮಾಡಲಾಯಿತು. ಹೆಲ್ಮೆಟ್ ಹಾಕಿ ನಿಯಮ ಪಾಲಿಸಿ ಎಂದು ಗುಲಾಬಿ ಹೂ ನೀಡುವುದರ ಮೂಲಕ  ಬೈಕ್ ಸವಾರರಿಗೆ ಉತ್ತೇಜನ ನೀಡಲಾಯಿತು.

ವಿಶೇಷ ತಪಾಸಣೆಯ ಮೊದಲ‌ ದಿನವೇ ನಿಯಮ ಉಲ್ಲಂಘನೆ ಮಾಡಿದ ಸವಾರರಿಂದ ಕೇವಲ ಅರ್ಧ ಗಂಟೆಯ ತಪಾಸಣೆಯಲ್ಲಿ ಹೆಲ್ಮೆಟ್ ಇಲ್ಲದ‌ ಸವಾರರಿಂದ 25 ಸಾವಿರ ರೂ ದಂಡ ವಸೂಲಿ ಮಾಡಿದರು. ಡಿ ಎಲ್ ಇಲ್ಲದ ಬೈಕ್ ಸವಾರರಿಗೆ 5ಸಾವಿರ ರೂ ದಂಡ ವಿಧಿಸಿದರು. ಹೆಚ್ ಡಿ ಕೋಟೆ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಪರಿಷ್ಕೃತ ದಂಡಗಳ ಬಗ್ಗೆ ಅರಿವು ಮೂಡಿಸಲಾಯಿತು.

ವಿಶೇಷ ತಪಾಸಣೆಯಲ್ಲಿ. ಪಿ ಎಸ್ ಐ ನಾಯಕ್  ಹೆಡ್ ಕಾನ್ಸ್ ಟೆಬಲ್‌  ಗೋವಿಂದರಾಜು ಹೈವೇ ಪೆಟ್ರೋಲ್   ಎ ಎಸ್ ಐ ಜವರಪ್ಪ ಭಾಗಿಯಾಗಿದ್ದರು.

Key words: HD kote-police-  Special inspection – giving –rose- helmet biker

website developers in mysore