ಗರಿಷ್ಠ ಮಟ್ಟ ತಲುಪಿದ ಕಬಿನಿ ಜಲಾಶಯ….

kannada t-shirts

ಮೈಸೂರು,ಆ,13,2020(www.justkannada.in):  ರಾಜ್ಯದಲ್ಲಿ ಉತ್ತಮ ಮಳೆಯಾದ ಹಿನ್ನೆಲೆ ನದಿಗಳು ತುಂಬಿ ಹರಿಯುತ್ತಿದ್ದು ಈ ನಡುವೆ ಜಿಲ್ಲೆಯ ಹೆಚ್. ಡಿ. ಕೋಟೆ ತಾಲ್ಲೂಕಿನ ಬೀಚನಹಳ್ಳಿ ಗ್ರಾಮದಲ್ಲಿರುವ ಕಬಿನಿ ಜಲಾಶಯದ ನೀರಿನ ಮಟ್ಟ ಗರಿಷ್ಟ ಮಟ್ಟ ತಲುಪಿದೆ.jk-logo-justkannada-logo

ಜಲಾಶಯದ ಗರಿಷ್ಠ ಮಟ್ಟ 2284.00 ಅಡಿಯಾಗಿದ್ದು ಇಂದಿನ ನೀರಿನ ಮಟ್ಟ 2282.97 ಅಡಿ ಇದೆ. ಜಲಾಶಯ ಭರ್ತಿಯಾಗಲು ಕೇವಲ ಒಂದು ಅಡಿ ಮಾತ್ರ ಬಾಕಿ ಉಳಿದಿದೆ. ಅಣೆಕಟ್ಟೆಯ ಸುರಕ್ಷತೆ ದೃಷ್ಟಿಯಿಂದ ಒಳಹರಿವಿನ ಪ್ರಮಾಣವನ್ನಾಧರಿಸಿ ನೀರು ಹೊರಕ್ಕೆ ಬಿಡಲಾಗುತ್ತದೆ.hd-kote-kabini-dam-reached-highest-water

ಕಬಿನಿ ಜಲಾಶಯದ ಇಂದಿನ ಒಳಹರಿವು 22, 912 ಕ್ಯೂಸೆಕ್ ಇದ್ದು 24063 ಕ್ಯೂಸೆಕ್ ನೀರನ್ನ ಹೊರಕ್ಕೆ ಬಿಡಲಾಗುತ್ತಿದೆ. ಒಟ್ಟು 19.52 ಟಿ.ಎಂ.ಸಿ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ ಪ್ರಸ್ತುತ 18.84 ಟಿ. ಎಂ. ಸಿ. ನೀರು ಸಂಗ್ರಹವಾಗಿದೆ.

Key words: hd kote -Kabini dam- reached-highest-water

website developers in mysore