ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ 125ನೇ ಚಿತ್ರ ‘ವೇದಾ’ ಮೋಷನ್ ಪೋಸ್ಟರ್ ರಿವೀಲ್ !

ಬೆಂಗಳೂರು, ಜೂನ್ 24, 2022 (www.justkannada.in): ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಅಭಿನಯದ 125ನೇ ಚಿತ್ರ ‘ವೇದಾ’ ಸಿನಿಮಾದ ಮೋಷನ್ ಪೋಸ್ಟರ್​ ಅನಾವರಣವಾಗಿದೆ.

ವೇದಾ ಚಿತ್ರವನ್ನು ಝೀ-ಸ್ಟುಡಿಯೋಸ್​ ಜೊತೆಗೂಡಿ ಗೀತಾ ಸ್ಟುಡಿಯೋಸ್ ಮೂಲಕ ಗೀತಾ ಶಿವರಾಜ್ ಕುಮಾರ್ ನಿರ್ಮಿಸುತ್ತಿದ್ದಾರೆ.

ಚಿತ್ರಕ್ಕೆ ಭಜರಂಗಿ ಎ.ಹರ್ಷ ಆಯಕ್ಷನ್ ಕಟ್ ಹೇಳಲಿದ್ದಾರೆ. ಹಾಗೆಯೇ ಇದು ಶಿವರಾಜ್‌ಕುಮಾರ್-ಹರ್ಷ ಜೋಡಿಯ 4ನೇ ಚಿತ್ರ ಎಂಬುದು ವಿಶೇಷ.

ವೇದಾ ಚಿತ್ರವು 1960ರ ದಶಕದಲ್ಲಿ ನಡೆಯುವ ಕ್ರೂರ ಕಥಾ ಹಂದರ ಹೊಂದಿದೆ. ಮೋಷನ್ ಪೋಸ್ಟರ್ ಅನ್ನು ಟ್ವಿಟರ್‌ನಲ್ಲಿ ಎ ಹರ್ಷಾ ಹಂಚಿಕೊಂಡಿದ್ದಾರೆ.

ಚಿತ್ರದಲ್ಲಿ ಶಿವಣ್ಣನ ಮಗಳಾಗಿ ಅರುಣ್ ಸಾಗರ್ ಅವರ ಪುತ್ರಿ ಅದಿತಿ ಸಾಗರ್​ ಕಾಣಿಸಿಕೊಳ್ಳುತ್ತಿದ್ದಾರೆ. ನಾಯಕಿಯಾಗಿ ಮಗಳು ಜಾನಕಿ ನಟಿ ಗಾನವಿ ನಟಿಸುತ್ತಿದ್ದಾರೆ.