ಹತ್ರಾಸ್​ ನಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ, ಕೊಲೆ ವಿಚಾರ : ಯುಪಿ ಸರ್ಕಾರದ ವಿರುದ್ಧ ಮಾಜಿ ಸಿಎಂ ಸಿದ್ಧರಾಮಯ್ಯ ಕಿಡಿ…

ಬೆಂಗಳೂರು,ಸೆಪ್ಟಂಬರ್,30,2020(www.justkannada.in): ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ದಲಿತ ಯುವತಿ ಮೇಲೆ ನಾಲ್ವರು ಕಾಮುಕರಿಂದ ಅತ್ಯಾಚಾರ ಕೊಲೆ ವಿಚಾರಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಯೋಗಿ ಸರ್ಕಾರದ ವಿರುದ್ಧ ಮಾಜಿ ಸಿಎಂ ಸಿದ್ಧರಾಮಯ್ಯ ಕಿಡಿಕಾರಿದ್ದಾರೆ.

ಇದು ನಾಚಿಕೆಗೇಡಿನ ವಿಚಾರ. ಅಲ್ಲಿ ಬಿಜೆಪಿ ಸರ್ಕಾರವೇ ಇದೆ. ಆದರೂ ಯಾಕೆ ಇಂತಹ ತಪ್ಪುಗಳು ಆಗ್ತಿವೆ. ಯುಪಿಯಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಹರಿಹಾಯ್ದಿದ್ದಾರೆ.

ಈ ಕುರಿತು ಇಂದು ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ದೆಹಲಿಯಲ್ಲಿ ಶಿಲಾದೀಕ್ಷಿತ್ ಇದ್ರು, ಆದರೂ ನಿರ್ಭಯಾ ಅತ್ಯಾಚಾರ ಪ್ರಕರಣದಲ್ಲಿ ಏನೇನಾಯ್ತು..? ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಎಲ್ಲಿವರೆಗೆ ಉತ್ತರ ಪ್ರದೇಶದಲ್ಲಿರುತ್ತಾರೋ, ಅಲ್ಲಿಯವರೆಗೆ ಹೆಣ್ಣು ಮಕ್ಕಳು ಸುರಕ್ಷಿತರಲ್ಲ. ಯುಪಿಯಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ. ಬಿಜೆಪಿಯವರನ್ನ ಯಾರೂ ಪ್ರಶ್ನೆ ಮಾಡೋಕೆ ಆಗುತ್ತಿಲ್ಲ. ಬಿಜೆಪಿಯವರು ಮಾಧ್ಯಮಗಳ ಬಾಯಿಮುಚ್ಚಿಸುವ ಕೆಲಸ ಮಾಡ್ತಿದ್ದಾರೆ. ಮಾಧ್ಯಮಗಳನ್ನೇ ಕೊಂಡುಕೊಳ್ತೇವೆ ಅನ್ನೋ ಮಟ್ಟಕ್ಕೆ ಹೋಗಿದ್ದಾರೆ. ಮಾಧ್ಯಮಗಳ ಸ್ವಾತಂತ್ರ್ಯಕ್ಕೂ ಆಡ್ಡಿ ಎದುರಾಗಿದೆ ಎಂದು ಆರೋಪ ಮಾಡಿದರು.hatras-gang rape-case- Former CM -Siddaramaiah –outrage- against- UP government

ಘಟನೆ ಹಿನ್ನೆಲೆ….

ಉತ್ತರ ಪ್ರದೇಶದ ಹತ್ರಾಸ್​ ನಲ್ಲಿ ಸೆ. 14ರಂದು ಯುವತಿಯು ತಮ್ಮ ಜಮೀನಿನಲ್ಲಿ ಮೇವು ತರಲು  ಹೋಗಿದ್ದ ವೇಳೆ ನಾಲ್ವರು ದುರುಳರು ಆಕೆಯನ್ನು  ಎಳೆದೊಯ್ದು ಅತ್ಯಾಚಾರವೆಸಗಿದ್ದರು. ಅಲ್ಲದೆ ಆಕೆಯ ನಾಲಿಗೆಯನ್ನು ಕತ್ತರಿಸಿ ಆಕೆಯ ಬೆನ್ನುಮೂಳೆ ಮತ್ತು ಕುತ್ತಿಗೆಗೆ ಹಾನಿ ಮಾಡಿದ್ದರು. ಗಂಭೀರ ಗಾಯಗೊಂಡು ದೆಹಲಿಯ ಸಫ್ದಾರ್​ ಜಂಗ್​ ಆಸ್ಪತ್ರೆಗೆ ದಾಖಲಾಗಿದ್ದ ಸಂತ್ರಸ್ತ ಯುವತಿ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಮೃತಪಟ್ಟಿದ್ದರು.hatras-gang rape-case- Former CM -Siddaramaiah –outrage- against- UP government

ನಂತರ ಸಂತ್ರಸ್ತೆ ಯುವತಿಯ  ಅಂತ್ಯಕ್ರಿಯೆಯನ್ನು ಪೊಲೀಸರೇ ರಾತ್ರೋ-ರಾತ್ರಿ ನೆರೆವೇರಿಸಿದ್ದು, ಇದಕ್ಕೆ ಭಾರಿ ಆಕ್ರೋಶ ವ್ಯಕ್ತವಾಗಿದೆ.  ಅಂತ್ಯಕ್ರಿಯೆ ವೇಳೆ ಯುವತಿಯ ಕುಟುಂಬ ಮತ್ತು ಸಂಬಂಧಿಕರಿಗೂ ಅವಕಾಶ ನೀಡಿಲ್ಲ ಎಂಬ ಆರೋಪ ಕೇಳಿ ಬಂದಿದೆ.

Key words: hatras-gang rape-case- Former CM -Siddaramaiah –outrage- against- UP government