ನಾಳೆ ಹಾಸನಾಂಬ ದೇಗುಲ ಓಪನ್: ಆನ್ಲೈನ್ ಮೂಲಕ ದರ್ಶನ…

kannada t-shirts

ಹಾಸನ,ನವೆಂಬರ್,04,2020(www.justkannada.in) :  ಕೊರೊನಾ ಸೋಂಕು ಹೆಚ್ಚಳದ ಹಿನ್ನೆಲೆಯಲ್ಲಿ ಈ ಬಾರಿ ಸಾರ್ವಜನಿಕರಿಗೆ ಆನ್‍ಲೈನ್ ಮುಖಾಂತರ ಹಾಸನಾಂಬಾ ದರ್ಶನ ಲಭ್ಯವಿದೆ.jk-logo-justkannada-logo

ನಾಳೆಯಿಂದ ದೇವಾಲಯ ತೆರೆಯಲು ತೀರ್ಮಾನಿಸಲಾಗಿದ್ದು, ಈ ಬಾರಿ ವಿವಿಐಪಿಗಳಿಗೆ ಮಾತ್ರ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ.

ಎಲ್‍ಇಡಿ ಪರದೆ ಮೇಲೆ ದೇವಿಯ ದರ್ಶನ

ಸಾರ್ವಜನಿಕರು ದೇವಾಲಯಕ್ಕೆ ಆಗಮಿಸಿ ನಗರದ ವಿವಿಧೆಡೆ ಅಳವಡಿಸಿರುವ ಎಲ್‍ಇಡಿ ಪರದೆ ಮೇಲೆ ದೇವಿಯ ದರ್ಶನ ಪಡೆಯಬಹುದಾಗಿದೆ. ಇದರ ಜತೆಗೆ ಹಾಸನಾಂಬಾ ಲೈವ್ 20-20 ಆನ್‍ಲೈನ್ ಮುಖಾಂತರವೂ ದೇವಿಯ ದರ್ಶನ ಪಡೆಯಬಹುದಾಗಿದೆ ಎಂದು ಜಿಲ್ಲಾಧಿಕಾರಿ ಗಿರೀಶ್ ತಿಳಿಸಿದ್ದಾರೆ.

ನಾಳೆ ಬೆಳಗ್ಗೆ 11 ಗಂಟೆಗೆ ದೇವಾಲಯದ ಬಾಗಿಲು ತೆರೆಯಲಾಗುವುದು. ಸಾರ್ವಜನಿಕರು ಹಾಗೂ ಭಕ್ತಾದಿಗಳಿಗೆ ಪ್ರಸಾದ ಲಭ್ಯವಿರುವುದಿಲ್ಲ. 12 ದಿನಗಳ ಕಾಲ ದೇವರ ದರ್ಶನವನ್ನು ಸ್ಕ್ರೀನಿಂಗ್ ಹಾಗೂ ವೆಬ್‍ಸೈಟ್‍ನಲ್ಲಿ ವೀಕ್ಷಿಸಬಹುದಾಗಿದೆ.

ವಿಶೇಷ ಆಹ್ವಾನಿತರಿಗೆ ಮಾತ್ರ ದೇವಿಯ ದರ್ಶನಕ್ಕೆ ಅವಕಾಶ

Hassanamba,Walkthrough,online,Decision,open,Temple tomorrow

ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಅವರು ನಾಳೆ ದೇವಾಲಯಕ್ಕೆ ಆಗಮಿಸಲಿದ್ದಾರೆ. ವಿಶೇಷ ಆಹ್ವಾನಿತರಿಗೆ ಮಾತ್ರ ದೇವಿಯ ದರ್ಶನಕ್ಕೆ ಅವಕಾಶವಿರಲಿದೆ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ಮಾಹಿತಿ ನೀಡಿದ್ದಾರೆ.

key words : Hassanamba-Walkthrough-online-Decision-open-Temple tomorrow

website developers in mysore