ಕೊರೋನಾ ವಾರಿಯರ್ಸ್ ಗೆ ಗೌರವ ಧನ ಚೆಕ್ ವಿತರಣೆ: ಇನ್ಸಪೆಕ್ಟರ್ ಕಿರಣ ಕುಮಾರ್  ಕುಟುಂಬಕ್ಕೆ  ಸಾಂತ್ವಾನ ಹೇಳಿದ ಸಚಿವ ಗೋಪಾಲಯ್ಯ….

ಹಾಸನ,ಆ,4,2020(www.juskannada.in0:  ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ದ ಕೊವಿಡ್-19  ಕೊರೊನಾ ವೈರಸ್ ಸೋಂಕು ನಿಯಂತ್ರಣಕ್ಕೆ ತರಲು ಹಗಲಿರುಳೆನ್ನದೆ ಶ್ರಮಿಸುತ್ತಿರುವ ಕೊರೊನಾ ವಾರಿಯರ್ಸ್ ಗಳಾದ ಸುಮಾರು 150  ಆಶಾ ಕಾರ್ಯಕರ್ತೆಯರಿಗೆ ಹೇಮಾವತಿ ಸಕ್ಕರೆ ಕಾರ್ಖಾನೆ ಯಿಂದ ನೀಡಲಾಗಿದ್ದ 3000 ರೂಪಾಯಿ ಮೊತ್ತದ ಗೌರವ ಧನ ದ ಚೆಕ್ ಅನ್ನು ಹಾಸನ ಜಿಲ್ಲೆಯ ಉಸ್ತುವಾರಿ  ಹಾಗೂ ಆಹಾರ ನಾಗರಿಕ ಪೂರೈಕೆ ಸರಬರಾಜು ಇಲಾಖೆಯ ಸಚಿವರಾದ ಕೆ ಗೋಪಾಲಯ್ಯ ರವರು ಚೆಕ್ ಗಳನ್ನೂ ವಿತರಿಸಿದರು.jk-logo-justkannada-logo

ನಂತರ ಮಾತನಾಡಿದ ಸಚಿವ ಗೋಪಾಲಯ್ಯ,  ಆಶಾ ಕಾರ್ಯಕರ್ತೆಯರು ತಮ್ಮ ಜೀವದ ಹಂಗು ತೊರೆದು ಕುಟುಂಬ ವನ್ನು ಲೆಕ್ಕಿಸದೇ  ಹಗಲಿರುಳು ಕೆಲಸ ಮಾಡುತ್ತಿರುವ ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸಿದರು.

ಇದೇ ರೀತಿ ಬೆಂಗಳೂರಿನ ನನ್ನ ಮತ ಕ್ಷೇತ್ರವಾದ ಮಹಾಲಕ್ಷ್ಮಿಲೇಔಟ್ ನಲ್ಲಿ  ಸಹ ಪ್ರತಿ ಭೂತ ಮಟ್ಟದಲ್ಲಿ ಮನೆ ಮನೆಗೆ ಹೋಗಿ  ಇದೇ ರೀತಿ ಕೆಲಸವನ್ನ ಅಲ್ಲಿನ ನಮ್ಮ ಕೊರೊನಾ ವಾರಿಯರ್ಸ್ ಗಳಾದ ಆಶಾ ಕಾರ್ಯಕರ್ತೆಯರು ಮಾಡುತ್ತಿದ್ದಾರೆ. ನಾನು  ಹಾಸನ ಜಿಲ್ಲೆಗೆ ಉಸ್ತುವಾರಿಯಾಗಿ ಬಂದ ಮೇಲೆ ಜಿಲ್ಲೆಯ ಎಲ್ಲಾ ಅಧಿಕಾರಿವರ್ಗ ಜಿಲ್ಲಾಧಿಕಾರಿ ಜಿಲ್ಲಾ ಕಾರ್ಯನಿರ್ವಹಣಾ ಅಧಿಕಾರಿ ಪೊಲೀಸ್ ಇಲಾಖೆ ಸೇರಿದಂತೆ ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತ್ ಮತ್ತು ಎಲ್ಲಾ ರೀತಿಯ ಆಡಳಿತಾಧಿಕಾರಿಗಳು  ಸಹಕಾರ ನೀಡಿ ಸಾಕಷ್ಟು ಶ್ರಮ ವಹಿಸಿ ಕೆಲಸ ಮಾಡುತ್ತಿದ್ದಾರೆ ಎಂದರು.

ಮೃತ ಪಿಎಸ್ ಐ ಕುಟುಂಬಕ್ಕೆ ಸಾಂತ್ವಾನ……

ಜಿಲ್ಲೆಯ ಹೆಮ್ಮೆಯ ಪೊಲೀಸ್ ಅಧಿಕಾರಿ ಕಿರಣ ಕುಮಾರ್ ಅವರ ಆತ್ಮಹತ್ಯೆ  ಮಾಡಿಕೊಂಡಿರುವ  ಪ್ರಕರಣದ ಬಗ್ಗೆ ಸಭೆಯಲ್ಲಿ 1 ನಿಮಿಷ ಅವರ ಗೌರವಾರ್ಥ ಮೌನಾಚರಣೆ ಮಾಡಿ ಈ ಪ್ರಕರಣದಲ್ಲಿ ಯಾವುದೇ ಪಕ್ಷ ಇರಲಿ ಅದು ಜೆಡಿಎಸ್, ಬಿಜೆಪಿ ಕಾಂಗ್ರೆಸ್ ಇರಲಿ ಇದರಲ್ಲಿ ಯಾವುದೇ ಕಾರಣಕ್ಕೂ ರಾಜಕೀಯ ಮಾಡದೆ ನಿಷ್ಪಕ್ಷಪಾತವಾದ ತನಿಖೆ ಮಾಡುವಂತೆ  ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು. hassan-minister-gopalaiah-corona-worriors-hemavati-sugar-factory

ಇನ್ಸ್ಪೆಕ್ಟರ್ ಕಿರಣ್ ಕುಮಾರ್ ರವರಿಗೆ ಸಭೆಯಲ್ಲಿ 1 ನಿಮಿಷ ಮೌನಾಚರಣೆ ಮಾಡಿ ಗೌರವ  ಸೂಚಿಸಲಾಯಿತು.  ನಂತರ  ಇನ್ಸಪೆಕ್ಟರ್ ಕಿರಣ ಕುಮಾರ್ ಅವರ ಮನೆಗೆ ತೆರಳಿ ಕುಟುಂಬಕ್ಕೆ  ಸಾಂತ್ವನ ಹೇಳಿ ಅವರ ನಷ್ಟವನ್ನು ಭರಿಸುವ ಶಕ್ತಿಯನ್ನು ಆ ಕುಟುಂಬಕ್ಕೆ ದೇವರು ಶಕ್ತಿಯನ್ನು ನೀಡಲಿ ಎಂದು ಹೇಳಿ  ಸರ್ಕಾರದಿಂದ ಅವರ ಕುಟುಂಬಕ್ಕೆ ಬರಬೇಕಾದ ಎಲ್ಲ ಸವಲತ್ತುಗಳನ್ನು ಮುಂದಿನ ಕೆಲವೇ ದಿನಗಳಲ್ಲಿ ಕೊಡಿಸುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಶಾಸಕ ಬಾಲಕೃಷ್ಣ, ಜಿಲ್ಲಾಧಿಕಾರಿಗಳಾದ ಡಾ, ಗಿರೀಶ್, ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಭಟ್, ಸಚಿವರ ಆಪ್ತ ಕಾರ್ಯದರ್ಶಿ ಗಳಾದ ಕಾಂತರಾಜ್ ರವರು ಸೇರಿದಂತೆ ಹಲವಾರು ಉಪಸ್ಥಿತರಿದ್ದರು.

Key words: Hassan- minister- gopalaiah-corona worriors- Hemavati Sugar Factory.