ಮಲೆನಾಡು ಭಾಗದಲ್ಲಿ ಮುಂದುವರಿದ ಕಾಡಾನೆಗಳ ಹಾವಳಿ: ಒಂಟಿ ಸಲಗದ ದಾಳಿ ದೃಶ್ಯ ಮೊಬೈಲ್ ನಲ್ಲಿ ಸೆರೆ….

ಹಾಸನ,ಮಾ,2,2020(www.justkannada.in):  ಮಲೆನಾಡು ಭಾಗದಲ್ಲಿ ಕಾಡಾನೆಗಳ ಕಾಟ ಮುಂದುವರಿದಿದ್ದು. ಮನೆಯ ದನದ ಕೊಟ್ಟಿಗೆಗೆ ದಾಳಿ ನಡೆಸಿದ ಒಂಟಿಸಲಗ ಕೊಟ್ಟಿಗೆಗೆ ಹಾಕಿದ್ದ ಶೀಟ್ ಗಳನ್ನೇ  ಧ್ವಂಸಗೊಳಿಸಿದ ಘಟನೆ ಹಾಸನ ಹಿಲ್ಲೆ ಸಕಲೇಸಪುರದಲ್ಲಿ ನಡೆದಿದೆ.

ಸಕಲೇಶಪುರ ತಾಲೂಕಿನ ಹೆಗ್ಗೋವೆ ಗ್ರಾಮದಲ್ಲಿ  ಈ ಘಟನೆ ನಡೆದಿದೆ. ಒಂಟಿ ಸಲಗ ದಾಳಿ ನಡೆಸುವ ವೀಡಿಯೋ ಮೊಬೈಲ್ ನಲ್ಲಿ ಸೆರೆಯಾಗಿದೆ. ಕಾಫಿ ತೋಟದೊಳಗಿದ್ದ ಆನೆ ನೋಡಿ ನಾಯಿ ಬೊಗಳಿದ್ದು, ನಾಯಿ ಅಟ್ಟಿಸಿಕೊಂಡು  ಕಾಡಾನೆ ಮನೆಯತ್ತ ನುಗ್ಗಿದೆ. ಈ ವೇಳೆ ನಾಯಿ ಹೆದರಿ ದನದ ಕೊಟ್ಟಿಗೆಯೊಳಗೆ ಬಚ್ಚಿಟ್ಟುಕೊಂಡಿದೆ. ಈ ಸಮಯದಲ್ಲಿ ಕಾಡಾನೆ ಕೊಟ್ಟಿಗೆಯ ಶೀಟ್ ದ್ವಂಸಗೊಳಿಸಿ ಆಕ್ರೋಶ ವ್ಯಕ್ತಪಡಿಸಿದೆ.

ಇದೇ ವೇಳೆ ಆನೆ ಕಂಡ ಜನರು ಕೂಗಾಡಿದ್ದು, ಜನರ ಕೂಗಾಟಕ್ಕೆ ಹೆದರಿ ಆನೆ ಮತ್ತೆ ತೋಟ ಸೇರಿತು. ಹೀಗೆ ಪ್ರತಿನಿತ್ಯ ಮನೆ ಆವರಣಕ್ಕೆ ಬಂದು ಕಾಡಾನೆಗಳು ಆತಂಕ ಸೃಷ್ಟಿಸುತ್ತಿದ್ದು, ಪ್ರತಿನಿತ್ಯ ಮಲೆನಾಡಿನ ಗ್ರಾಮಸ್ಥರು ಆತಂಕದಲ್ಲೇ ಜೀವನ ನಡೆಸುತ್ತಿದ್ದಾರೆ. ಸಮಸ್ಯೆ ಪರಿಹರಿಸುವಂತೆ ಜನರ ಆಗ್ರಹಿಸಿದ್ದು, ಸ್ಥಳಕ್ಕೆ ಅರಣ್ಯಾಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Key words: Hassan- elephant- attack- dog