ಹಾಸನದಲ್ಲಿ ಏ.18,19 ರಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ :  ಸಚಿವ ಕೆ.ಗೋಪಾಲಯ್ಯ

ಹಾಸನ,ಏಪ್ರಿಲ್,09,2021(www.justkannada.in) : ಹಾಸನದಲ್ಲಿ ಏ.18,19 ರಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯಲಿದ್ದು, ಜಿಲ್ಲೆಯಲ್ಲಿ ಮೊದಲ ಬಾರಿಗೆ ನಡೆಯುತ್ತಿರುವ ಕಾರ್ಯಕಾರಿಣಿ ಸಭೆಯಲ್ಲಿ ಪಕ್ಷಕಟ್ಟುವ ನಿಟ್ಟಿನಲ್ಲಿ ಚರ್ಚೆ ನಡೆಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಹೇಳಿದರು.Illegally,Sand,carrying,Truck,Seized,arrest,driverರಾಜ್ಯ ಕಾರ್ಯಕಾರಿಣಿ ಸಭೆ ಹಿನ್ನೆಲೆ, ಟೆಂಟ್ ಹೌಸ್ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ, ಮಾತನಾಡಿದ ಅವರು, 338 ಮಂದಿ ಕೋರ್ ಕಮಿಟಿ ಸದಸ್ಯರು ಸಭೆಯಲ್ಲಿ ಭಾಗಿಯಾಗಲಿದ್ದಾರೆ.  ಇದಕ್ಕೆ ಅವಕಾಶ ಮಾಡಿಕೊಟ್ಟಿರುವ ಎಲ್ಲರಿಗೂ ಧನ್ಯವಾದಗಳು. ಕೊರೊನಾ ನಿಯಮಾವಳಿ ಪಾಲಿಸಿ ಕಾರ್ಯಕ್ರಮ ಮಾಡಲಾಗುವುದು ಎಂದಿದ್ದಾರೆ.

ಪ್ರತಿಯೊಬ್ಬರನ್ನು ಇಲ್ಲೇ ಉಳಿಸಿಕೊಳ್ಳುವ ವ್ಯವಸ್ಥೆ ಮಾಡಲಾಗುವುದು. ರಾಷ್ಟ್ರೀಯ ನಾಯಕರಾದ ಅರುಣ್ ಸಿಂಗ್, ಸಿಎಂ ಆದಿಯಾಗಿ ಅನೇಕರು ಭಾಗಿಯಾಗಲಿದ್ದು, ನಾವು ಜನರಿಗೆ ಮತ್ತಷ್ಡು ಹತ್ತಿರವಾಗಲು ಸಭೆಯಲ್ಲಿ ಚರ್ಚಿಸಲಾಗುವುದು ಎಂದರು.

ಯಡಿಯೂರಪ್ಪ ಅವರೇ ಸಿಎಂ ಆಗಿ ಮುಂದುವರಿಯುತ್ತಾರೆ

ಮೇ 2ರ ನಂತರ ಸಿಎಂ‌ ಬದಲಾವಣೆ ವಿಚಾರ ಅಲ್ಲಗಳೆದ ಗೋಪಾಲಯ್ಯ. ಯಡಿಯೂರಪ್ಪ ಅವರೇ ಸಿಎಂ ಆಗಿ ಮುಂದುವರಿಯುತ್ತಾರೆ. ಯತ್ನಾಳ್ ವಿಚಾರದಲ್ಲಿ ಹೈಕಮಾಂಡ್ ವೀಕ್ ಆಗಿದೆ ಎಂಬ ಆರೋಪ ಸುಳ್ಳು. ಹಾಸನ ಕಾರ್ಯಕಾರಿಣಿ ಸಭೆಯಿಂದ ರಾಜ್ಯಕ್ಕೆ ಒಂದು ಸಂದೇಶ ಹೋಗಲಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಸಿಎಂಗೆ ಹಣಕಾಸು ಬಿಡುಗಡೆ ಮಾಡುವ ಪರಮಾಧಿಕಾರ ಇದೆ

ರಾಜ್ಯದ ಸಿಎಂಗೆ ಹಣಕಾಸು ಬಿಡುಗಡೆ ಮಾಡುವ ಪರಮಾಧಿಕಾರ ಇದೆ. ನಮ್ಮ ಪಕ್ಷದೊಳಗಿನ ಸಮಸ್ಯೆಯನ್ನು ನಾಲ್ಕು ಗೋಡೆ ಮಧ್ಯೆ ಬಗೆಹರಿಸಿಕೊಳ್ಳುತ್ತೇವೆ. ಮೂರು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲಿದೆ. ಚಾಕೇನಹಳ್ಳಿ ಸ್ಫೋಟ ಪ್ರಕರಣ, ಸಿಎಂ, ಗಣಿ ಸಚಿವರ ಜೊತೆ ಮಾತನಾಡಿದ್ದೇನೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ, ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ಭರವಸೆ ನೀಡಿದ್ದು, ಅಕ್ರಮ ಗಣಿಗಾರಿಕೆ ಬಗ್ಗೆ ಕ್ರಮ ವಹಿಸಲು ಅಧಿಕಾರಿಗಳಿ ಸೂಚಿಸಿದ್ದೇನೆ ಎಂದು ಎಂದು ಮಾಹಿತಿ ನೀಡಿದರು.

ಸಾರಿಗೆ ನೌಕರರ ಬೇಡಿಕೆ, ಉದ್ದೇಶಪೂರ್ವಕವಾಗಿ ಒತ್ತಡ ಹೇರುವುದು ಸರಿಯಲ್ಲ 

Hassan-April.18,19-BJP-State-Executive-Meeting-Minister-K.Gopalya

ಸಾರಿಗೆ ನೌಕರರ ಮುಷ್ಕರ ವಿಚಾರ, ಅವರ ಬಹು ಬೇಡಿಕೆ ಈಡೇರಿಸಿದೆ. ಉಳಿದ ಭರವಸೆ ಈಡೇರಿಸಲು ಸಮಯ ಕೇಳಿದೆ. ಉದ್ದೇಶಪೂರ್ವಕವಾಗಿ ಒತ್ತಡ ಹೇರುವುದು ಸರಿಯಲ್ಲ. ಸೌಹಾರ್ದಯುತವಾಗಿ ಬಗೆ ಹರಿಸಿಕೊಳ್ಳಲು ಮುಂದಾಗುವಂತೆ ಮನವಿ ಮಾಡುತ್ತೇನೆ.

ಖಾಸಗಿಯವರಿಂದ ದುಪ್ಪಟ್ಟು ದರ ವಸೂಲಿ ಆರೋಪ. ನಿಗದಿತ ದರ ತೆಗೆದುಕೊಳ್ಳುವಂತೆ ‌ಖಾಸಗಿಯವರಿಗೆ ಸೂಚಿಸಲು ಅಧಿಕಾರಿಗಳಿಗೆ ಹೇಳುವೆ. ಗಾಂಜಾ, ಅಫೀಮು, ಡ್ರಗ್ಸ್ ಮಟ್ಟಹಾಕಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

key words : Hassan-April.18,19-BJP-State-Executive-Meeting-Minister-K.Gopalya