ರೆಸಾರ್ಟ್ ನಿರ್ಮಾಣಕ್ಕೆ 800 ಕ್ಕೂ ಹೆಚ್ಚು ಮರಗಳ ಕಟಾವು ಪ್ರಕರಣ: ಕೊಡಗು ಡಿಸಿಎಫ್ ಸಸ್ಪೆಂಡ್….

ಕೊಡಗು,ಜೂ,14,2019(www.justkannada.in): ರೆಸಾರ್ಟ್ ನಿರ್ಮಾಣಕ್ಕೆ 800 ಕ್ಕೂ ಹೆಚ್ಚು ಮರಗಳ ಕಟಾವು ವಿಚಾರಕ್ಕೆ ಸಂಬಂಧಿಸಿದಂತ ಕರ್ತವ್ಯ ಲೋಪ ಆರೋಪದ ಮೇಲೆ ಕೊಡಗು ಡಿಸಿಎಫ್ ಮಂಜುನಾಥ್ ರನ್ನ  ಅಮಾನತು ಮಾಡಲಾಗಿದೆ.

ಕೊಡಗಿನ ಕೆ.ನಿಡುಗಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರೆಸಾರ್ಟ್‌ ನಿರ್ಮಾಣಕ್ಕಾಗಿ 800 ಮರಗಳನ್ನು ಕಡಿಯಲು ಅರಣ್ಯ ಇಲಾಖೆಯೇ ಅನುಮತಿ ನೀಡಿದೆ ಎನ್ನಲಾಗಿತ್ತು. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಗಳಲ್ಲಿ ವರದಿ ಪ್ರಸಾರವಾಗಿತ್ತು. ಈ ಬಗ್ಗೆ ಅರಿತ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕೂಡಲೇ ಮರಗಳನ್ನು ಕಡಿಯುವುದನ್ನು ನಿಲ್ಲಿಸುವಂತೆ ಸೂಚಿಸಿ ಅರಣ್ಯ ಅಧಿಕಾರಿಗಳಿಗೆ ವರದಿ ನೀಡುವಂತೆ ಆದೇಶಿಸಿದ್ದರು.

ಈ ಸಂಬಂಧ ಇದೀಗ ಕರ್ತವ್ಯ ಲೋಪ ಹಿನ್ನಲೆ ಕೊಡಗು  ಡಿಸಿಎಫ್ ಮಂಜುನಾಥ್ ಅವರನ್ನ ಅಮಾನತು ಮಾಡಿ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಆದೇಶ ಹೊರಡಿಸಿದ್ದಾರೆ.  ಮಂಜುನಾಥ್ ಜಾಗಕ್ಕೆ ಮಾರಿಯಾ ಕ್ರಿಸ್ಟು ರಾಜ ನೇಮಕ ಮಾಡಲಾಗಿದೆ.

Key words: Harvesting – over- 800 trees- Kodagu- DCF-suspend.