ಜಾಕ್​ ಕಾಲಿಸ್, ಅಬ್ಬಾಸ್, ಲೀಸಾ ಸ್ಟಾಲೇಕರ್​​ಗೆ ಹಾಲ್​​ ಆಫ್​​ ಫೇಮ್​​​​​ ಗೌರವ

ಬೆಂಗಳೂರು, ಆಗಸ್ಟ್ 24, 2020 (www.justkannada.in): 2020ನೇ ಸಾಲಿನ ಐಸಿಸಿ ಹಾಲ್​ ಆಫ್​ ಫೇಮ್ ಪ್ರಶಸ್ತಿಗೆ, ದಕ್ಷಿಣ ಆಫ್ರಿಕಾ ತಂಡದ ಮಾಜಿ ಆಲ್​ರೌಂಡರ್​ ಜಾಕ್​ ಕಾಲಿಸ್​, ಪಾಕಿಸ್ತಾನದ ಸ್ಟೈಲಿಶ್ ಬ್ಯಾಟ್ಸ್​ಮನ್​ ಜಹೀರ್​ ಅಬ್ಬಾಸ್, ಭಾರತದ ಪುಣೆ ಮೂಲದ ಆಸ್ಟ್ರೇಲಿಯಾ ತಂಡದ ಮಾಜಿ ಕ್ರಿಕೆಟ್ ಆಟಗಾರ್ತಿ ಲೀಸಾ ಸ್ಟಾಲೇಕರ್​ ಐಪಿಸಿ ಹಾಲ್​ ಆಫ್​ ಫೇಮ್​​ ಗೌರವಕ್ಕೆ ಭಾಜನರಾಗಿದ್ದಾರೆ.

ಅಂತರಾಷ್ಟ್ರೀಯ ಕ್ರಿಕೆಟ್​​ನಲ್ಲಿ ಈ ಮೂವರು ಆಟಗಾರರ ಜೀವಮಾನ ಸಾಧನೆಗೆ ಹಾಲ್​​​​​ ಆಫ್​ ಫೇಮ್ ಲಭಿಸಿದೆ. ಕೊರೊನಾ ಆತಂಕದಿಂದಾಗಿ ವರ್ಚುವಲ್ ಮೂಲಕ ಕಾರ್ಯಕ್ರಮವನ್ನ ಐಸಿಸಿ ಆಯೋಜಿಸಿತ್ತು.

ಭಾರತದ ಮಾಜಿ ಕ್ರಿಕೆಟಿಗ ಸುನೀಲ್ ಗವಾಸ್ಕರ್​​, ಸೌತ್​​ ಆಫ್ರಿಕಾದ ಮಾಜಿ ಬೌಲರ್​ ಶಾನ್ ಪೊಲಾಕ್, ವಾಸೀಂ ಅಕ್ರಮ್, ಗ್ರೇಮ್​ಸ್ಮಿತ್​ ಉಪಸ್ಥಿತರಿದ್ದರು. ಈ ಬಗ್ಗೆ ಜಾಕ್​ ಕಾಲಿಸ್​ ಹಾಲ್​​ ಆಫ್​ ಫೇಮ್ ಗೌರವಕ್ಕೆ ಪಾತ್ರರಾಗಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.