ಹೆಚ್.ವಿಶ್ವನಾಥ್ ಗೆದ್ದರೇ ಹುಣಸೂರಿಗೆ ಅಧೋಗತಿ- ‘ಕೈ’ ಅಭ್ಯರ್ಥಿ ಹೆಚ್.ಪಿ ಮಂಜುನಾಥ್ ವಾಗ್ದಾಳಿ….

Promotion

ಮೈಸೂರು,ನ,16,2019(www.justkannada.in):  ಉಪಚುನಾವಣೆಯಲ್ಲಿ ಅನರ್ಹ ಶಾಸಕ ಹೆಚ್.ವಿಶ್ವನಾಥ್ ಗೆದ್ದರೇ ಹುಣಸೂರು ಅಧೊಗತಿಗೆ ತಲುಪುತ್ತದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಹೆಚ್.ಪಿ ಮಂಜುನಾಥ್ ವಾಗ್ದಾಳಿ ನಡೆಸಿದರು.

ಮಾಧ್ಯಮಗಳ ಜತೆ ಇಂದು ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಪಿ ಮಂಜುನಾಥ್, ವಿಶ್ವನಾಥ್ ಬೆಣ್ಣೆಯಂತೆ ಮಾತನಾಡ್ತಾರೆ.  ದಿ. ಡಿ.ದೇವರಾಜ್ ಅರಸು ಅವರ ಹೆಸರಿಗೆ ಮಸಿ ಬಳಿಯುವ ಯತ್ನ ಮಾಡುತ್ತಿದ್ದಾರೆ. ಹುಣಸೂರು ಕ್ಷೇತ್ರದ ಜನರಿಗೆ ಮೋಸ ಮಾಡಿದ್ದಾರೆ ಎಂದು ಮಂಜುನಾಥ್ ಹರಿಹಾಯ್ದರು.

ವಿಶ್ವನಾಥ್ ಗೆದ್ಧರೇ ಹುಣಸೂರು ಅಧೋಗತಿಗೆ ತಲುಪುತ್ತದೆ. ಹುಣಸೂರನ್ನ ನಾಶ ಮಾಡುತ್ತಾರೆ ಎಂದು ಹೆಚ್.ಪಿ ಮಂಜುನಾಥ್ ಕಿಡಿಕಾರಿದರು.

Key words: H. Vishwanath – Destroyed-hunsur- congress-candidate- HP Manjunath