ಮಾನವ ಜನ್ಮವನ್ನು ಸದುಪಯೋಗಪಡಿಸಿಕೊಳ್ಳಲು ಗುರುವಿನ ಅನುಗ್ರಹ ಬೇಕು- ಡಿ.ಟಿ ಪ್ರಕಾಶ್.

ಮೈಸೂರು,ಜುಲೈ,13,2022(www.justkannada.in): ಮಾನವ ಜನ್ಮವನ್ನು ವ್ಯರ್ಥಮಾಡಿಕೊಳ್ಳದೆ ಸದುಪಯೋಗ ಪಡಿಸಿಕೊಳ್ಳಬೇಕಾದರೆ ಗುರುವಿನ ಅನುಗ್ರಹ ಬೇಕು ಎಂದು  ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ ಪ್ರಕಾಶ್  ಅಭಿಪ್ರಾಯಪಟ್ಟರು.

ಅಗ್ರಹಾರದ ಬಸವೇಶ್ವರ ರಸ್ತೆಯಲ್ಲಿ ಮೈಸೂರು ಅವಧೂತ ದತ್ತ ಶಾಹಿ ಪೀಠಕಾ ಜನಸೇವ ಟ್ರಸ್ಟ್ ವತಿಯಿಂದ ಗುರುಪೂರ್ಣಿಮೆ ಹಾಗೂ ಗುರುಗಳ ಸಮಾನರಾದ ವೆಂಕಟಾಚಲ ಅವಧೂತ ಮಹಾರಾಜರ ಸ್ಮರಣಾರ್ಥ ಅಂಗವಾಗಿ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ಗೋವುಗಳಿಗೆ ಪೂಜೆ ಸಲ್ಲಿಸಿ ಮೇವು ನೀಡಿ ಬಳಿಕ ಮಾತನಾಡಿದರು.  ದೇಶದ ಸನಾತನ ಪರಂಪರೆಯನ್ನು ಗುರುಶಿಷ್ಯರ ಬಹಳ ಮಹತ್ವವಿದೆ .ನಮ್ಮಲ್ಲಿರುವ ಚಂಚಲವಾದ ಬುದ್ಧಿ ಹಾಗೂ ಹೋಗಲಾಡಿಸಲು ಗುರುಗಳ ಧ್ಯಾನ ಮಾಡುತ್ತಾ ಆತ್ಮ ಚಿಂತನೆಯನ್ನು ಮಾಡಬೇಕು ಎಂದರು.

ಇದೇ ಸಂದರ್ಭದಲ್ಲಿ  ಇಳೈ ಆಳ್ವಾರ್ ಸ್ವಾಮೀಜಿ ,ಮೈಸೂರು ನಗರ ಬಿಜೆಪಿ ಹಿಂದುಳಿದ ವರ್ಗ ಮೋರ್ಚಾ ಅಧ್ಯಕ್ಷ ಜೋಗಿ ಮಂಜು, ಖ್ಯಾತ ವೈದ್ಯರಾದ ಡಾ.ಲಕ್ಷ್ಮಿ ,ಮೈಸೂರು ಅವಧೂತ ದತ್ತ ಶಾಹಿ ಪೀಠಕಾ ಜನಸೇವ ಟ್ರಸ್ಟ್ ನ ಸಂಚಾಲಕ ರಿಷಿ  ವಿಶ್ವಕರ್ಮ ,ಮಾಜಿ ನಗರ ಪಾಲಿಕಾ ಸದಸ್ಯರಾದ ಸೌಭಾಗ್ಯ ಮೂರ್ತಿ ,ಶ್ರೀಕಾಂತ್ ಕಶ್ಯಪ್, ಸುಚೀಂದ್ರ ,ಶಿವು ,ಮಹದೇವ್ ಪ್ರಸಾದ್ ,ಶರತ್ ಬಂದಾರಿ,ಚಕ್ರಪಾಣಿ ,ಲಿಂಗರಾಜು , ರಂಗಣ್ಣ ,ಸುನೀಲ್ ,ನಾಗಶ್ರೀ ,ಹಾಗೂ ಇನ್ನಿತರರು ಹಾಜರಿದ್ದರು.

Key words: guru purnime-Mysore- good – human- DT Prakash