ಯಾರು ಈ ಸೀಸನ್ ಐಪಿಎಲ್ ಸುಲ್ತಾನ?!: ಇಂದು ಗುಜರಾತ್ ಟೈಟಾನ್ಸ್- ರಾಜಸ್ಥಾನ್ ರಾಯಲ್ಸ್ ಫೈನಲ್ ಫೈಟ್

Promotion

ಬೆಂಗಳೂರು, ಮೇ 29, 2022 (www.justkannada.in): ಇಂದು ರಾತ್ರಿ ಐಪಿಎಲ್ ಈ ಸೀಸನ್ ಹೊಸ ಸುಲ್ತಾನ ಯಾರು ಎಂಬುದು ಗೊತ್ತಾಗಲಿದೆ.

ಗುಜರಾತ್‌ ಟೈಟಾನ್ಸ್‌ ಹಾಗೂ ರಾಜಸ್ಥಾನ್‌ ರಾಯಲ್ಸ್‌ ತಂಡಗಳು ಇಂದು ಐಪಿಎಲ್ ಕಪ್ ಗಾಗಿ ಅಂತಿಮ ಹಣಾಹಣಿಯಲ್ಲಿ ಸೆಣೆಸಾಡುತ್ತಿವೆ.

ಐಪಿಎಲ್‌ ನಲ್ಲಿ ಈ ಬಾರಿ ಯಾರೂ ನಿರೀಕ್ಷಿಸಿರದ ತಂಡಗಳೆರಡು ಫೈನಲ್‌ಗೆ  ಬಂದಿವೆ. ಹೊಸತಾಗಿ ಪ್ರವೇಶ ಪಡೆದ ಗುಜರಾತ್‌ ಟೈಟಾನ್ಸ್‌ ಹಾಗೂ  2008ರ ಚೊಚ್ಚಲ ಐಪಿಎಲ್‌ನಲ್ಲಿ ಪ್ರಶಸ್ತಿಯನ್ನೆತ್ತಿದ ರಾಜಸ್ಥಾನ್‌ ರಾಯಲ್ಸ್‌ ಫೈಟ್ ಸಾಕಷ್ಟು ಕುತೂಹಲ ಮೂಡಿಸಿದೆ.

ರವಿವಾರ ರಾತ್ರಿ ಕಪ್‌ ಯಾರು ಗೆಲ್ಲಬಹುದು ಎಂಬುದು ಎಲ್ಲರ ಸಹಜ ಕುತೂಹಲ ಮೂಡಿಸಿದೆ. ಈಗಾಗಲೇ 4 ಶತಕ ಸಿಡಿಸಿರುವ ಇಂಗ್ಲಿಷ್‌ಮ್ಯಾನ್‌ ಜಾಸ್‌ ಬಟ್ಲರ್‌ ರಾಜಸ್ಥಾನ್‌ ತಂಡದ ಅಪಾಯಕಾರಿ ಬ್ಯಾಟರ್‌ ಆಗಿದ್ದಾರೆ.

ಗುಜರಾತ್‌ ಟೈಟಾನ್ಸ್‌ ಓಪನಿಂಗ್‌ನಲ್ಲಿ ಯಶಸ್ಸು ಕಾಣಬೇಕಿದೆ. ಗಿಲ್‌, ಸಾಹಾ, ವೇಡ್‌ ಪವರ್‌ ಪ್ಲೇಯಲ್ಲಿ ಉತ್ತಮ ಮೊತ್ತ ಪೇರಿಸಿದರೆ ದೊಡ್ಡ ಮೊತ್ತಕ್ಕೇನೂ ಕೊರತೆ ಇಲ್ಲ. ನಾಯಕ ಹಾರ್ದಿಕ್‌ ಪಾಂಡ್ಯ ಎಲ್ಲ ವಿಭಾಗಗಳಲ್ಲೂ ಪ್ರಬುದ್ಧತೆ ತೋರುತ್ತಿದ್ದಾರೆ. ಹೀಗಾಗಿ ಐಪಿಎಲ್ ಫೈನಲ್ ಹಣಾಹಣಿ ಸಾಕಷ್ಟು ಕುತೂಹಲ ಮೂಡಿಸಿದೆ.