ಗುಜರಾತ್‌  ಹೈಕೋರ್ಟ್ ಆದೇಶದ ಪ್ರಕಾರ ವೀರ್ಯ ಸಂಗ್ರಹಿಸಿದ ಒಂದು ದಿನದ ನಂತರ ಆಸ್ಪತ್ರೆಯಲ್ಲಿದ್ದ ರೋಗಿ ಮರಣ.

ಬೆಂಗಳೂರು, ಜುಲೈ 23, 2021 (www.justkannada.in): ಗುಜರಾತ್‌ ನ ಉಚ್ಛ ನ್ಯಾಯಾಲಯದ ಆದೇಶದ ಪ್ರಕಾರ ವಡೋದರಾದಲ್ಲಿರುವ ಆಸ್ಪತ್ರೆಯಲ್ಲಿದ್ದಂತಹ ಕೋವಿಡ್-19 ರೋಗಿಯೊಬ್ಬರ ವೀರ್ಯವನ್ನು ಸಂಗ್ರಹಿಸಿದ ಒಂದು ದಿನದ ನಂತರ ರೋಗಿ ಮೃತಪಟ್ಟಿರುವ ಸುದ್ದಿ ವರದಿಯಾಗಿದೆ. ರೋಗಿಯ ಪತ್ನಿ ವೀರ್ಯ ಸಂಗ್ರಹಿಸುವಂತೆ ಉಚ್ಛ ನ್ಯಾಯಾಲಯಕ್ಕೆ ಮೊರೆ ಹೋಗಿದ್ದರಂತೆ.jk

ಮೃತ ರೋಗಿಯ ಪತ್ನಿಯ ಪರ ವಕೀಲರು ಈ ಮಾಹಿತಿಯನ್ನು ಒದಗಿಸಿದ್ದಾರೆ. ಕೋವಿಡ್-19 ಸೋಂಕಿತ 32-ವರ್ಷ-ವಯಸ್ಸಿನ ವ್ಯಕ್ತಿಯೊಬ್ಬರು ವಡೋದರಾದ ಸ್ಟೆರ್ಲಿಂಗ್ ಆಸ್ಪತ್ರೆಯಲ್ಲಿ ಬಹು ಅಂಗಾಂಗ ವೈಫಲ್ಯದಿಂದಾಗಿ ಲೈಫ್ ಸಪೋರ್ಟ್ ನಲ್ಲಿದ್ದರು.

ಮೃತನ ಪತ್ನಿ ನಿಲೇ ಪಟೇಲ್ ಅವರ ಪರ ವಕೀಲರು ತಿಳಿಸಿರುವಂತೆ, ಮೃತನ ಪತ್ನಿ ತನ್ನ ಪತಿಯ ವೀರ್ಯವನ್ನು ಸಂಗ್ರಹಿಸುವಂತೆ ಉಚ್ಛ ನ್ಯಾಯಾಲಯಕ್ಕೆ ಮೊರೆ ಹೋಗಿದ್ದು, ನ್ಯಾಯಾಲಯ ಅದಕ್ಕೆ ಅನುಮತಿ ನೀಡಿದ ನಂತರ ಆಸ್ಪತ್ರೆಯಲ್ಲಿ ವೀರ್ಯವನ್ನು ಸಂಗ್ರಹಿಸಲಾಗಿಯಿತಂತೆ.

ರೋಗಿಯ ಪತ್ನಿ ತನ್ನ ಪತಿ ಆಸ್ಪತ್ರೆಯಲ್ಲಿದ್ದು ಚಿಂತಾಜನಕ ಸ್ಥಿತಿಯಲ್ಲಿರುವುದಾಗಿಯೂ, ಆಕೆ ಐವಿಎಫ್/ಎಆರ್‌ಟಿ ವಿಧಾನದ ಮೂಲಕ ಮಗುವನ್ನು ಹೊಂದಲು ಬಯಸಿರುವುದಾಗಿಯೂ, ಅದರೆ ವೀರ್ಯ ಸಂಗ್ರಹಿಸಲು ಆಕೆಯ ಪತಿ ಅನುಮತಿ ನೀಡುವ ಪರಿಸ್ಥಿತಿಯಲ್ಲಿ ಇಲ್ಲದಿರುವುದಾಗಿಯೂ, ವೈದ್ಯರ ಪ್ರಕಾರ ಆತ ಉಳಿಯುವ ಅವಕಾಶಗಳು ಬಹಳ ಕಡಿಮೆ ಇರುವುದಾಗಿಯೂ ನ್ಯಾಯಾಲಯದ ಮೊರೆ ಹೋಗಿದ್ದಳು.

ಈ ಹಿನ್ನೆಲೆಯಲ್ಲಿ ಐವಿಎಫ್‌ ಗಾಗಿ ಪತಿ ವೀರ್ಯವನ್ನು ಸಂಗ್ರಹಿಸಲು ಆಸ್ಪತ್ರೆಯನ್ನು ಕೋರಿದ್ದಳು. ಆದರೆ ಅದಕ್ಕೆ ನ್ಯಾಯಾಲಯದ ಅನುಮತಿ ಅಗತ್ಯವಿರುವುದಾಗಿ ತಿಳಿಲಾಗಿತ್ತು. ತುರ್ತು ಅನುಮತಿ ನೀಡಬೇಕಾಗಿದ್ದ ಕಾರಣ ಗುಜರಾತ್ ಉಚ್ಛ ನ್ಯಾಯಾಲಯದ ಮಾನ್ಯ ನ್ಯಾಯವಾದಿ ಜಸ್ಟೀಸ್ ಅಶುತೋಶ್ ಜೆ. ಶಾಸ್ತ್ರಿ ಅವರು ವಿಚಾರಣೆ ನಡೆಸಿ ರೋಗಿಯ ವೀರ್ಯ ಸಂಗ್ರಹಿಸಿ ಸೂಕ್ತ ರೀತಿಯಲ್ಲಿ ಶೇಖರಿಸಿಡುವಂತೆ ಆಸ್ಪತ್ರೆಗೆ ಸೂಚನೆ ನೀಡಿದರು.

ರೋಗಿ ದಾಖಲಾಗಿದ್ದಂತಹ ಸ್ಟೆರ್ಲಿಂಗ್  ಆಸ್ಪತ್ರೆಯ ಪ್ರಾಂತೀಯ ನಿರ್ದೇಶಕ ಅನಿಲ್ ನಂಬಿಯಾರ್ ಅವರು ಈ ಕುರಿತು ಪತ್ರಕರ್ತರಿಗೆ, ಉಚ್ಛ ನ್ಯಾಯಾಲಯದ ಆದೇಶ ಬಂದ ಕೆಲವೇ ಗಂಟೆಗಳಲ್ಲಿ ವೀರ್ಯವನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾಗಿರುವ ಮಾಹಿತಿ ಒದಗಿಸಿದರು.

“ರೋಗಿಯ ಕುಟುಂಬಸ್ಥರು ಈ ಕೆಲಸವನ್ನು ಕೋರಿದ್ದರು. ಆದರೆ ನಿಯಮದ ಪ್ರಕಾರ ನಮಗೆ ನ್ಯಾಯಾಲಯದ ಆದೇಶದ ಅಗತ್ಯವಿತ್ತು. ಏಕೆಂದರೆ ಆತ ಚಿಂತಾಜನಕ ಸ್ಥಿತಿಯಲ್ಲಿದ್ದು, ಅನುಮತಿ ನೀಡದಿರುವ ಪರಿಸ್ಥಿತಿಯಲ್ಲಿದ್ದರು,” ಎಂದು ನಂಬಿಯಾರ್ ಅವರು ತಿಳಿಸಿದ್ದರು.

ಈ ಸಂಬಂಧ ಐವಿಎಫ್/ಎಆರ್‌ಟಿ ವಿಧಾನಕ್ಕೆ ಅನುಮತಿ ನೀಡುವುದಕ್ಕೆ ಸಂಬಂಧಪಟ್ಟ ವಿಚಾರಣೆಯನ್ನು ಶುಕ್ರವಾರಕ್ಕೆ ನಿಗಧಿಪಡಿಸಲಾಗಿದೆ.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: Gujarat -High Court –order-patient-died – after -sperm -collected.