ಲಾಕ್ ಡೌನ್ ಎಫೆಕ್ಟ್ : ಮೈಸೂರು ವಿಜ್ಞಾನಿ ಜತೆಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಚೀನಾ ಸಂಶೋಧಕರ ತಂಡ..

 

ಮೈಸೂರು, ಏ.30, 2020 : ( www.justkannada.in news ) : ದೇಶದಲ್ಲಿ ಲಾಕ್ ಡೌನ್ ಜಾರಿಯಲ್ಲಿರುವ ಕಾರಣ ನಗರದ ರಸಾಯನಶಾಸ್ತ್ರ ವಿಜ್ಞಾನಿ ಜತೆಗೆ ಚೀನಾ ದೇಶವು ಸಂಶೋಧನೆ ಮತ್ತು ಅಭಿವೃದ್ಧಿ ಸಂಬಂಧ ಗುರುವಾರ ವಿಡಿಯೋ ಕಾನ್ಫರೆನ್ಸ್ ನಡೆಸಿದೆ.

ಪ್ರತಿಷ್ಠಿತ ಮೈಸೂರು ವಿವಿ ವಿಶ್ರಾಂತ ಕುಲಪತಿ, ಇಂಡಿಯನ್ ಸೈನ್ಸ್ ಕಾಂಗ್ರೆಸ್ ಅಧ್ಯಕ್ಷ ಪ್ರೊ.ಕೆ.ಎಸ್.ರಂಗಪ್ಪ ಅವರ ಜತೆಗೆ ಚೀನಾದ ಸಂಶೋಧಕರು ವಿಡಿಯೋ ಕಾನ್ಫರೆನ್ಸ್ ಮೂಲಕ ರಿಸರ್ಚ್ ಅಂಡ್ ಡೆವಲೆಪ್ಮೆಂಟ್ ಬಗೆಗೆ ಸುದೀರ್ಘ ಚರ್ಚೆ ನಡೆಸಿದ್ದು.

ಈ ಸಂಬಂದ ಜಸ್ಟ್ ಕನ್ನಡ ಡಾಟ್ ಇನ್ ಗೆ ಮಾಹಿತಿ ನೀಡಿರುವ ರಾಸಾಯನಶಾಸ್ತ್ರಜ್ಞ ಪ್ರೊ.ಕೆ.ಎಸ್.ರಂಗಪ್ಪ ಅವರು ಹೇಳಿದಿಷ್ಟು…

ನನ್ನ ಸಂಶೋಧಕರ ತಂಡ ಮತ್ತು ಚೀನೀ ಸಂಶೋಧಕರ ತಂಡ ಕ್ಯಾನ್ಸರ್ ಕ್ಷೇತ್ರದಲ್ಲಿ ಸಹಕಾರದ ಪ್ರಸ್ತಾವನೆಗಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕ ಗುರುವಾರ ಚರ್ಚಿಸಿದರು. ಅಂದಾಜು ಸುಮಾರು ಇನ್ನೂರು ಕೋಟಿ ರೂ. ವೆಚ್ಚದಲ್ಲಿ ಆರ್ ಮತ್ತು ಡಿ ಸ್ಥಾಪಿಸಲು ಈ ಚರ್ಚೆ ನಡೆಯಿತು.

ಚೀನಾದ ಶಾಂಘೈ ನಗರದ ನಿಂಗ್ಬೊ ಸಿಟಿಯಲ್ಲಿ ಈ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರ ಸ್ಥಾಪನೆಗೆ ಚೀನಾ ಮುಂದಾಗಿದೆ. ಇದಕ್ಕೆ ಪೂರಕವಾಗಿ ಕಳೆದ ಹಲವಾರು ತಿಂಗಳುಗಳಿಂದ ಚರ್ಚೆ ನಡೆಯುತ್ತಿತ್ತು. ಇಂದು ನಡೆದ ವಿಡಿಯೋ ಕಾನ್ಫರೆನ್ಸ್ ಈ ಚರ್ಚೆಯ ಅಂತಿಮ ಘಟ್ಟ. ಸದ್ಯದಲ್ಲೇ ಬೀಜಿಂಗ್ ನ ಉನ್ನತ ಮಟ್ಟದ ತಂಡ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಯೋಜನೆ ಮುಖ್ಯಸ್ಥರಾದ ಪ್ರೊ.ಕೆ.ಎಸ್.ರಂಗಪ್ಪ ತಿಳಿಸಿದ್ದಾರೆ.

key words : group of researchers- Chinese group- applied for colloborative proposal- in the field of Cancer- prof.k.s.rangappa-mysore-uiniversity-vc

ENGLISH SUMMARY :

group of researchers- Chinese group- applied for colloborative proposal- in the field of Cancer- prof.k.s.rangappa-mysore-uiniversity-vc

This. Is what my group of researchers and Chinese group applied for colloborative proposal in the field of Cancer for approximately two hundred crores setting up R and D at NINGBO CITY NEAR BY SHANGAI . THE VEDIO CONFERENCE from Beijing High level decision makers and it was final meeting. The result yet to be announced. The project Head is prof KSR