ಪತ್ರಕರ್ತರ ಹೆಲ್ತ್ ಕಾರ್ಡ್ ವಿತರಣೆಗೆ ಗ್ರೀನ್ ಸಿಗ್ನಲ್

ಬೆಂಗಳೂರು, ಆಗಸ್ಟ್, 30, 2020(www.justkannada.in) : ಪತ್ರಕರ್ತರಿಗೆ ಉಚಿತ ಆರೋಗ್ಯ ಕಾರ್ಡ್ ವಿತರಿಸಲು ವಿಳಂಬವಾಗಿದ್ದ ಸಮಸ್ಯೆಯನ್ನು ಪರಿಹರಿಸಲಾಗಿದೆ. ಶೀಘ್ರವೇ ಎಲ್ಲಾ ಜಿಲ್ಲೆಗಳಲ್ಲಿ ಪತ್ರಕರ್ತರಿಗೆ ಆರೋಗ್ಯ ಕಾರ್ಡ್ ವಿತರಿಸಲಾಗುವುದೆಂದು ವಾರ್ತಾ ಇಲಾಖೆಯ ಆಯುಕ್ತ ಡಾ.ಹರ್ಷ ಭರವಸೆ ನೀಡಿದ್ದಾರೆ.

jk-logo-justkannada-logo

ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮತ್ತು ಎಸ್ಸಿ, ಎಸ್ಟಿ ಸಂಪಾದಕರ ಸಂಘದ ಅಧ್ಯಕ್ಷ ಚೆಲುವರಾಜು ಅವರೊಂದಿಗೆ ಈ ಕುರಿತು ಮಾಹಿತಿ ನೀಡಿದ್ದಾರೆ.

Green-signal-journalists'-health-card-issuance

ಇದುವರೆವಿಗೂ ಸಾಫ್ಟ್ ವೇರ್ ಸಮಸ್ಯೆಯಾಗಿದೆ ಎಂದು ಹೇಳಲಾಗಿತ್ತು. ಆದರೆ, ಸಮಸ್ಯೆಯೇ ಬೇರೆ ಇತ್ತು. ಕೆಲವು ಪತ್ರಕರ್ತರ ಕೆಲ ಮಾಹಿತಿ, ಆಧಾರ್ ನಂಬರ್ ತಾಳೆಯಾಗಿಲ್ಲವೆಂದು ಇಡೀ ಜಿಲ್ಲೆಯ ಪತ್ರಕರ್ತರ ಕಾರ್ಡ್ ಗಳನ್ನು NIC ಯವರು ವಾಪಸ್ ಕಳುಹಿಸಿದ್ದರು. ಈಗ ವಾರ್ತಾ ಇಲಾಖೆಯೇ ಸರಿಪಡಿಸುವ ಮೂಲಕ ಇದ್ದ ಎಲ್ಲಾ ಅಡೆತಡೆಗಳನ್ನು ಸರಿಪಡಿಸಿದೆ ಎಂದು ಹೇಳಿದ್ದಾರೆ.

ವಾರ್ ಪುಟ್ ನಲ್ಲಿ ಕಾರ್ಡ್ ವಿತರಣೆ ಕಾರ್ಯ ನಡೆಯಲಿದೆ.  ಯಾವ ಜಿಲ್ಲೆಗಳಲ್ಲಿ ಕಾರ್ಡ್ ವಿತರಣೆ ನಡೆದಿಲ್ಲ ಅತಂಹ ಜಿಲ್ಲೆಗಳಿಗೆ ನಾನೇ ಖುದ್ದು ಬೇಟಿ ನೀಡಿ ಸರಿಪಡಿಸಲು  ನಿರ್ಧರಿಸಿದ್ದೇನೆ. ಅಸಡ್ಡೆ ಮಾಡದೆ ಶೀಘ್ರವಾಗಿ ಕಾರ್ಡ್ ನೀಡುವಂತೆ ಜಿಲ್ಲಾ ವಾರ್ತಾಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.

ಯಾವುದೇ ಲೋಪವಾದರೆ ಅಧಿಕಾರಿಗಳನ್ನೇ ಜವಬ್ದಾರನ್ನಾಗಿ ಮಾಡಲಾಗುವುದು. ಈ ಕೆಲಸ ಸುಸೂತ್ರವಾಗಿ ನಡೆಯಲು ಯಾವುದೇ ಸಮಸ್ಯೆಯಾದರೂ ಬಗೆಹರಿಸಲು ಸಂಪತ್ ಎಂಬ ನೋಡಲ್ ಅಧಿಕಾರಿಯನ್ನು ನೇವಿಸಲಾಗಿದೆ . ಈ ತಂಡದಲ್ಲಿ ಪತ್ರಕರ್ತರ ಸಂಘದ ಸದಸ್ಯರೊಬ್ಬರನ್ನು ಕೊಡುವಂತೆ ಶಿವಾನಂದ ತಗಡೂರು ರವರನ್ನು ಕೋರಿದರು.

key words ; Green-signal-journalists’-health-card-issuance