ಕೋವ್ಯಾಕ್ಸಿನ್ ತುರ್ತು ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಗ್ರೀನ್ ಸಿಗ್ನಲ್.

kannada t-shirts

ಬೆಂಗಳೂರು,ನವೆಂಬರ್,3,2021(www.justkannada.in): ಕೋವ್ಯಾಕ್ಸಿನ್ ಲಸಿಕೆ ತುರ್ತುಬಳಕೆಗೆ   ವಿಶ್ವ ಆರೋಗ್ಯ ಸಂಸ್ಥೆಯು ಅನುಮತಿ ನೀಡಿದೆ. ಈ ಮೂಲಕ ಭಾರತದ ಕೋವ್ಯಾಕ್ಸಿನ್ ಗೆ ಜಾಗತಿಕ ಮನ್ನಣೆ ಸಿಕ್ಕಿದೆ.

ಭಾರತ ಬಯೋಟೆಕ್ ನ ಕೋವ್ಯಾಕ್ಸಿನ್ ಲಸಿಕೆಯನ್ನ ದೇಶದಲ್ಲಿ ನೀಡಲಾಗುತ್ತಿದೆ. ಈ ಮಧ್ಯೆ ಡಬ್ಲ್ಯು ಹೆಚ್ ಒನ ತಾಂತ್ರಿಕ ಸಲಹಾ ಸಮಿತಿ  ಕೋವ್ಯಾಕ್ಸಿನ್ ತುರ್ತು ಬಳಕೆಗೆ ಗ್ರೀನ್ ಸಿಗ್ನಲ್ ನೀಡಿದೆ.  ಲಸಿಕೆಯ ಅಪಾಯ-ಪ್ರಯೋಜನ ಮೌಲ್ಯಮಾಪನ ನಡೆಸುವ ಸಲುವಾಗಿ ಕೋವ್ಯಾಕ್ಸಿನ್ ಲಸಿಕೆ ತಯಾರಕ ಭಾರತ್ ಬಯೋಟೆಕ್ʼನಿಂದ ಹೆಚ್ಚುವರಿ ಸ್ಪಷ್ಟೀಕರಣಗಳನ್ನ ಡಬ್ಲ್ಯೂಹೆಚ್‌ಒ ಕೋರಿತ್ತು.

ವಿಶ್ವ ಆರೋಗ್ಯ ಸಂಸ್ಥೆಯ ತಾಂತ್ರಿಕ ಸಮಿತಿಯು ಕೊವ್ಯಾಕ್ಸಿನ್ʼಗೆ ತುರ್ತು ಬಳಕೆ ಪಟ್ಟಿಯಲ್ಲಿ ಸೇರಿಸುವ ನಿರ್ಧಾರಕ್ಕೆ ಸಂಬಂಧಿಸಿದಂತೆ ಇಂದು ಸಭೆ ಸೇರಿತ್ತು. ಸಧ್ಯ ಕೋವ್ಯಾಕ್ಸಿನ್‌ ಲಸಿಕೆಯ ಜಾಗತಿಕ ಬಳಕೆಗೆ ಡಬ್ಲ್ಯೂಹೆಚ್‌ಒ ಅನುಮೋದನೆ ನೀಡಿದೆ. ಎರಡು ಡೋಸ್ ಲಸಿಕೆ ಪಡೆದವರು ವಿದೇಶಕ್ಕೆ ತೆರಳಬಹುದು.

Key words: Green signal-  World Health Organization – emergency -use -covaccine.

 

website developers in mysore