ಜ.11 ರಂದು ಮೈಸೂರಿನಲ್ಲಿ  ಗ್ರಾಮಸೇವಕ್ ಸಮಾವೇಶ: ಸಿಎಂ ಬಿಎಸ್ ವೈರಿಂದ ಚಾಲನೆ- ರಾಜ್ಯ ಬಿಜೆಪಿ ಕಾರ್ಯದರ್ಶಿ ಅಶ್ವಥ್ ನಾರಾಯಣ್…

Promotion

ಮೈಸೂರು,ಜನವರಿ,9,2021(www.justkannada.in): ಮುಂಬರುವ ಜಿಲ್ಲಾ ತಾಲ್ಲೂಕು ಪಂಚಾಯತಿ ಚುನಾವಣೆಯಲ್ಲಿ ಬಿಜೆಪಿಯ ಗೆಲುವಿಗಾಗಿ ಜನಸೇವಕ್ ಸಮಾವೇಶ ನಡೆಸಲಾಗುವುದು‌. ಮೈಸೂರಿನಲ್ಲಿ ಈ ಕಾರ್ಯಕ್ರಮ ಆರಂಭವಾಗಲಿದ್ದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಚಾಲನೆ ನೀಡಲಿದ್ದಾರೆ ಎಂದು ಗ್ರಾಮ ಸೇವಕ್ ಸಮಾವೇಶದ ಸಂಚಾಲಕ, ರಾಜ್ಯ ಬಿಜೆಪಿ ಕಾರ್ಯದರ್ಶಿ  ಅಶ್ವಥ್ ನಾರಾಯಣ್ ಹೇಳಿದರು.jk-logo-justkannada-mysore

ಮೈಸೂರಿನ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ರಾಜ್ಯ ಬಿಜೆಪಿ ಕಾರ್ಯದರ್ಶಿ  ಅಶ್ವಥ್ ನಾರಾಯಣ್, ಕಳೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿದ್ದಾರೆ. ಇದರ ಬೆನ್ನಲ್ಲೇ ಮುಂಬರುವ ಜಿಲ್ಲಾ ತಾಲ್ಲೂಕು ಪಂಚಾಯತಿ ಚುನಾವಣೆಯಲ್ಲಿ ಬಿಜೆಪಿಯ ಗೆಲುವಿಗಾಗಿ ಜನಸೇವಕ್ ಸಮಾವೇಶ ನಡೆಸಲಾಗುವುದು‌. ಇದಕ್ಕಾಗಿ ಒಟ್ಟು ಐದು ತಂಡಗಳನ್ನು ರಚನೆ ಮಾಡಲಾಗುತ್ತಿದೆ. ಸಂಸದರು, ಶಾಸಕರನ್ನು ಒಳಗೊಂಡಂತೆ ಬಿಜೆಪಿ ಯ ಜನಪ್ರತಿನಿಧಿಗಳು, ಪರಾಜಿತ ಅಭ್ಯರ್ಥಿಗಳು, ನಿಗಮ ಮಂಡಳಿಗಳ ಅಧ್ಯಕ್ಷರು ಈ ಐದು ತಂಡಗಳಲ್ಲಿರಲಿದ್ದಾರೆ‌. Gramasevak -Conference - Mysore - 11th January-State BJP secretary -Ashwath Narayan.

ಒಟ್ಟು 30 ಜಿಲ್ಲೆಗಳಲ್ಲಿ ಗ್ರಾಮ ಸೇವಕ್ ಸಮಾವೇಶ ‌ನಡೆಯಲಿದ್ದು, ಪ್ರತಿದಿನ ಎರಡು ಜಿಲ್ಲೆಗಳಲ್ಲಿ ಸಮಾವೇಶ ನಡೆಯಲಿದೆ. ಬರುವ 11 ರಂದು ಮೈಸೂರಿನಲ್ಲಿ ಈ ಕಾರ್ಯಕ್ರಮ ಆರಂಭವಾಗಲಿದ್ದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಚಾಲನೆ ನೀಡಲಿದ್ದಾರೆ. ಸೋಮವಾರ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಸಮಾವೇಶ ನಡೆಯಲಿದೆ ಎಂದು ಅಶ್ವಥ್ ನಾರಾಯಣ್ ಮಾಹಿತಿ ನೀಡಿದರು.

Key words: Gramasevak -Conference – Mysore – 11th January-State BJP secretary -Ashwath Narayan.