ಗ್ರಾಮ ಪಂಚಾಯಿತಿ ಚುನಾವಣೆ ಎನ್ನುವುದು ಕಾರ್ಯಕರ್ತರ ಚುನಾವಣೆಯಾಗಿದೆ- ಸಚಿವ ಬಿ.ಸಿ ಪಾಟೀಲ್

kannada t-shirts

ಹಾವೇರಿ,ನವೆಂಬರ್,30,2020(www.justkannada.in): ಗ್ರಾಮ ಪಂಚಾಯಿತಿಗಳು ಪ್ರಸಕ್ತ ಬಹಳ ಶಕ್ತಿಯುತವಾಗಿವೆ. ಗ್ರಾಮ ಪಂಚಾಯಿತಿ ಚುನಾವಣೆ ಎನ್ನುವುದು ಕಾರ್ಯಕರ್ತರ ಚುನಾವಣೆಯಾಗಿದೆ. ಕಾರ್ಯಕರ್ತರಿಗೆಂದೇ ಗ್ರಾಮಪಂಚಾಯಿತಿ ಚುನಾವಣೆಯಿದ್ದು, ಕಾರ್ಯಕರ್ತರಿಗೆ ಶಕ್ತಿ ನೀಡುವ ಮೂಲಕ ಗ್ರಾ.ಪಂಚಾಯಿತಿಗಳಲ್ಲಿ ಕಮಲ ಪಕ್ಷವನ್ನು ಅರಳಿಸಲು “ಗ್ರಾಮ ಸ್ವರಾಜ್ಯ” ಸಮಾವೇಶವನ್ನು ರಾಜ್ಯಾದ್ಯಂತ ಆಯೋಜಿಸಲಾಗಿದೆ ಎಂದು ಕೃಷಿ ಸಚಿವರೂ ಆಗಿರುವ ಕೊಪ್ಪಳ ಜಿಲ್ಲಾ ಉಸ್ತುವಾರಿ ಬಿ.ಸಿ.ಪಾಟೀಲ್ ಸ್ಪಷ್ಟಪಡಿಸಿದ್ದಾರೆ.logo-justkannada-mysore

ಮತಕ್ಷೇತ್ರ  ಹಿರೇಕೆರೂರು  ರಾಣೆಬೇನ್ನೂರು ಬ್ಯಾಡಗಿ ಸೇರಿದಂತೆ  ವಿವಿದೆಡೆ ಆಯೋಜಿಸಿದ್ದ ಗ್ರಾಮ ಸ್ವರಾಜ್ಯ ಸಮಾವೇಶ ವೇದಿಕೆ ಕಾರ್ಯಕ್ರಮವನ್ನುದ್ದೇಶಿಸಿ ಸಚಿವ ಬಿ.ಸಿ.ಪಾಟೀಲ್ ಮಾತನಾಡಿದರು.

ಬಿಜೆಪಿ ಎಂದೂ ವಿಭಾಗವಾಗಿಲ್ಲ. ದಲಿತ ನಾಯಕರು ರಾಷ್ಟ್ರಪತಿಯಾಗಿದ್ದಾರೆ. ಸಾಮಾನ್ಯ ಕಾರ್ಯಕರ್ತ ಪ್ರಧಾನಿಯಾಗಿದ್ದಾರೆಂದರೆ ಅದು ಬಿಜೆಪಿಯಿಂದ ಮಾತ್ರ ಸಾಧ್ಯ. ಎಲೆ ಮರೆ ಕಾಯಿಗಳನ್ನು ಗುರುತಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿರುವುದಕ್ಕೆ ಇತ್ತೀಚೆಗೆ ರಾಜ್ಯಸಭಾ ಚುನಾವಣೆಗೆ ಆಯ್ಕೆ ಮಾಡಿದ ಅಭ್ಯರ್ಥಿಗಳೇ ಸಾಕ್ಷಿ. ಹಣಬಲ ತೋಳ್ಬಲದಿಂದ ಚುನಾವಣೆ ಗೆಲ್ಲದೇ ರಾಜ್ಯ ಹಾಗೂ ಕೇಂದ್ರ ಬಿಜೆಪಿ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳು, ಜನಪರ ಯೋಜನೆಗಳನ್ನು ಜನರ ಮನೆಬಾಗಿಲಿಗೆ ತಲುಪಿಸುವ ಮೂಲಕ ಅಭಿವೃದ್ಧಿಯ ಮೂಲಮಂತ್ರದೊಂದಿಗೆ ಗ್ರಾಮಪಂಚಾಯಿತಿ ಚುನಾವಣೆಯನ್ನು ಗೆಲ್ಲಲು ಕಾರ್ಯಕರ್ತರು ಮುಂದಾಗಬೇಕೆಂದು ಬಿ.ಸಿ.ಪಾಟೀಲ್ ಕರೆ ನೀಡಿದರು.gram-panchayath-election-election-of-activists-minister-bc-patil

ಬಿಜೆಪಿಗೆ ಸೇರಿ  ನಾನು ಇಂದಿಗೆ 1 ವರ್ಷ 16 ದಿನಗಳಾಗಿವೆ. ಕಳೆದ ವರ್ಷ ಉಪಚುನಾವಣೆಯ ಪ್ರಚಾರದಲ್ಲಿದ್ದೆ. ಗ್ರಾಮ ಪಂಚಾಯಿತಿ ಚುನಾವಣೆಗಾಗಿ 6 ಬೂತ್ ಗಳನ್ನಾಗಿ ವಿಂಗಡಿಸಿ ಪ್ರತಿಯೊಂದು ಜಿಲ್ಲೆಯಲ್ಲಿ ಗ್ರಾ.ಪಂ. ಚುನಾವಣೆಯನ್ನು ಎದುರಿಸುವ ನಿಟ್ಟಿನಲ್ಲಿ ಗ್ರಾಮ ಸ್ವಾರಾಜ್ಯ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿದೆ. ಗ್ರಾ.ಪಂಚಾಯಿತಿ ಎನ್ನುವುದು ಪಕ್ಷಾತೀತ. ಗ್ರಾ.ಪಂಚಾಯಿತಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಅಧಿಕಾರಗಳನ್ನು ನೀಡಿದ್ದು, ಗ್ರಾಮಾಭಿವೃದ್ಧಿಯ ಶಕ್ತಿಯ ನೀಡಿದೆ. ರಾಷ್ಟ್ರಪತಿ ಮಹಾತ್ಮಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸನ್ನು ನನಸು ಮಾಡುವ ಪ್ರಯತ್ನ ನಡೆಯುತ್ತಿದೆ ಎಂದರು.

ಎರಡು ಹಂತದಲ್ಲಿ ಚುನಾವಣೆ ಘೋಷಿಸಲಾಗಿದ್ದು, ಹಿರೇಕೆರೂರಿನಲ್ಲಿ ಗ್ರಾಮ ಸ್ವರಾಜ್ಯ ಸಮಾವೇಶ ನಡೆಯುತ್ತಿರುವ ಸಂದರ್ಭದಲ್ಲಿ ಆಯೋಗ ಚುನಾವಣೆ ಘೋಷಿಸಿರುವುದು ಶುಭಸಂಕೇತವಾಗಿದೆ. ಯಡಿಯೂರಪ್ಪ ಮುಖ್ಯಮಂತ್ರಿಯಾದ ಬಳಿಕ ಹಲವಾರು ನೆರೆ, ಕೋವಿಡ್, ಬರದಂತಹ ಸಂಕಷ್ಟಗಳು ಎದುರಾದವು. ಈ ಎಲ್ಲಾ ಸಂಕಷ್ಟಗಳನ್ನು ಪರಿಹರಿಸಿ ರಾಜ್ಯದಲ್ಲಿ ಸಮರ್ಥಆಡಳಿತ ನೀಡಿದ್ದಾರೆ. ರಾಜ್ಯ ಸರ್ಕಾರ 1610 ಕೋ ರೂ. ಗಳನ್ನು ಕೋವಿಡ್ ಸಂಕಷ್ಟಕ್ಕೆ ಸರ್ಕಾರ ಘೋಷಿಸಿ, ಹೂವುಹಣ್ಣು ತರಕಾರಿ ಬೆಳೆದ ರೈತರಿಗೆ ಪರಿಹಾರ ಘೋಷಿಸಿದೆ. ಎನ್.ಡಿ.ಆರ್.ಎಫ್/ಎಸ್.ಡಿ.ಆರ್.ಎಫ್ ನಿಯಮ ಪ್ರಕಾರ ನೆರೆ ಸಂಕಷ್ಟದಲ್ಲಿ ನೆರವು ನೀಡಿ, ಎಪಿಎಂಸಿ ಕಾಯಿದೆಗೆ ತಿದ್ದುಪಡಿ ತರುವ ಮೂಲಕ ರೈತ ತನ್ನ ಬೆಳೆಯನ್ನು ಎಪಿಎಂಸಿ ಸೇರಿದಂತೆ ಎಲ್ಲಿ ಬೇಕಾದರೂ ಮಾರಾಟ ಮಾಡುವ ಪೂರ್ಣ ಹಕ್ಕನ್ನು ನೀಡಿದೆ. ಇದಕ್ಕೆ ವಿರೋಧ ಪಕ್ಷಗಳು ಅಪಪ್ರಚಾರ ನಡೆಸಿದವು. ಭೂ ಸುಧಾರಣಾ ಕಾಯಿದೆಗೆ ತಿದ್ದುಪಡಿ ತರುವ ಮೂಲಕ ರೈತರಿಗೆ ಅನುಕೂಲವನ್ನು ಕಲ್ಪಿಸಲಾಗಿದೆ.  ಮನಮನೋಹನ್ ಸಿಂಗ್ ಅವರೇ ಹಿಂದೆ ಈ ಕಾಯಿದೆಗಳಿಗೆ ತಿದ್ದುಪಡಿ ತರಲು ಬಯಸಿದ್ದರು. ಈಗ ಬಿಜೆಪಿ ಸರ್ಕಾರ ಕಾಯಿದೆಗಳಿಗೆ ತಿದ್ದುಪಡಿ ತಂದರೆ ಕಾಂಗ್ರೆಸ್ ವಿರೋಧಿಸುತ್ತಿರುವುದೇಕೆ? ರೈತನ ಸ್ವಾತಂತ್ರ್ಯವನ್ನು ಪ್ರಶ್ನಿಸುವ ವಿಪಕ್ಷಗಳು ರೈತನ ಪರವಾಗಿ ಇರದೇ ದಳ್ಳಾಳಿಗಳ ಪರವಾಗಿದೆ ಎಂದು ಸಚಿವ ಬಿ.ಸಿ ಪಾಟೀಲ್  ಟೀಕಿಸಿದರು.

ಗ್ರಾಮ ಸ್ವರಾಜ್ಯ ಸಮಾವೇಶದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಮಹಿಳಾ ಮಕ್ಕಳ ಇಲಾಖೆಯ ಸಚಿವೆ ಶಶಿಕಲಾ ಜೋಲ್ಲೆ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು ಬಿ ಬಣಕಾರ್ ಲೋಕಸಭಾ ಸದಸ್ಯರಾದ ಶಿವಕುಮಾರ ಉದಾಸಿ,, ಅಣ್ಣಾಸಾಹೆಬ ಜೋಲ್ಲೆ, ಶಾಸಕರಾದ ವಿರೂಪಾಕ್ಷಪ್ಪಾ ಬಳ್ಳಾರಿ ಅರುಣ ಕುಮಾರ ಪೂಜಾರ್, ವಿಧಾನ ಪರಿಷತ್ ಸದ್ಯಸ ಆರ್.ಶಂಕರ್ ರಾಜ್ಯ ಬಿಜೆಪಿ ಉಪಾಧ್ಯಕ್ಷ ಎಂ ರಾಜೆಂದ್ರ, ಬಿಜೆಪಿ ಪ್ರಧಾನ ಕಾರ್ಯದರ್ಶಿ  ಸಿದ್ದರಾಜು, ಯುವ ಮೊರ್ಚಾ ಅಧ್ಯಕ್ಷ ಸಂದೀಪ್,  ಸಿದ್ದರಾಜ ಕಲಕೋಟಿ ಸೇರಿದಂತೆ ಮತ್ತಿತ್ತರರು ಪಾಲ್ಗೊಂಡಿದ್ದರು.

Key words: Gram panchayath- election – election of activists-Minister- BC Patil.

website developers in mysore