ಹಳೆಯ ವಾಹನಗಳಿಗೆ ಬೀಳಲಿದೆ ಬ್ರೇಕ್‌

kannada t-shirts

ನವದೆಹಲಿ:ಮೇ-31: 2000 ಇಸವಿಗೂ ಹಿಂದಿನ ಹಳೆಯ ವಾಹನಗಳು (ಅದರಲ್ಲೂ ಕಮರ್ಷಿಯಲ್‌ ವೆಹಿಕಲ್ಸ್‌) ನಿಮ್ಮ ಬಳಿ ಇವೆಯೇ? ಸದ್ಯದಲ್ಲಿಯೇ ಅವುಗಳಿಗೆ ಹೆಚ್ಚಿನ ತೆರಿಗೆ ತೆರುವುದು ಅನಿವಾರ್ಯವಾಗಲಿದೆ. ಜೊತೆಗೆ ಆಗಾಗ ವಾಹನ ದೃಢೀಕರಣ ಪರೀಕ್ಷೆಗಳಿಗೂ ಒಳಪಡಿಸಬೇಕಾಗುತ್ತದೆ. ಹಳೆಯ ಡೀಸೆಲ್‌ ಮತ್ತು ಪೆಟ್ರೋಲ್‌ ವಾಹನಗಳ ಮರು ನೋಂದಣಿ ಮತ್ತು ನವೀಕರಣದ ಶುಲ್ಕಗಳು ಶೇ.15ರಿಂದ 20ರಷ್ಟು ಹೆಚ್ಚಾಗಲಿವೆ.

ಮಾಲಿನ್ಯಕಾರಿ ವಾಹನಗಳನ್ನು ನಿಯಂತ್ರಿಸುವ ಕರಡನ್ನು ಸರಕಾರವು ಅಂತಿಮಗೊಳಿಸಿದ್ದು, ಅದು ಜಾರಿಗೆ ಬಂದರೆ ಹಳೆಯ ವಾಹನಗಳ ನಿರ್ವಹಣೆ ಕಷ್ಟವಾಗಲಿದೆ. ಹೊಸ ವಾಹನಗಳಿಗೆ ಹೋಲಿಸಿದರೆ ಹಳೆಯ ವಾಹನಗಳು 25 ಪಟ್ಟು ಮಾಲಿನ್ಯವನ್ನು ಹೆಚ್ಚು ಸೃಷ್ಟಿಸುತ್ತವೆ ಎನ್ನುವುದು ನಾನಾ ಅಧ್ಯಯನಗಳಿಂದ ದೃಢಪಟ್ಟಿದೆ. ಹಳೆಯ ವಾಣಿಜ್ಯ ವಾಹನಗಳನ್ನು ಮಾಲೀಕರೇ ಸ್ವಯಂಪ್ರೇರಿತರಾಗಿ ಗುಜರಿಗೆ ಸೇರಿಸಬೇಕು ಎನ್ನುವುದು ಸರಕಾರದ ಉದ್ದೇಶ. ಈ ನಿಟ್ಟಿನಲ್ಲಿ ವಾಹನ ಮಾಲೀಕರನ್ನು ಉತ್ತೇಜಿಸುವ ಕಾರ್ಯಕ್ರಮವನ್ನು ಸರಕಾರವು ಮುಂದಿನ 3-4 ತಿಂಗಳಲ್ಲಿ ಜಾರಿಗೊಳಿಸಲಿದೆ.

ಹಳೆಯ ವಾಹನಗಳ ಬದಲಿಗೆ ಹೊಸ ವಾಹನಗಳನ್ನು ಖರೀದಿಸುವ ಜನರಿಗೆ ನೋಂದಣಿ ಶುಲ್ಕ ಮನ್ನಾ ಮಾಡುವ ಪ್ರಸ್ತಾವನೆಯೂ ಸರಕಾರದ ಮುಂದಿದೆ.
ಕೃಪೆ:ವಿಜಯವಾಣಿ

ಹಳೆಯ ವಾಹನಗಳಿಗೆ ಬೀಳಲಿದೆ ಬ್ರೇಕ್‌
govt readies blueprint for phasing out pre 2000 vehicles

website developers in mysore