ರಾಜ್ಯಪಾಲರಿಂದಲೇ ಕುದುರೆ ವ್ಯಾಪಾರಕ್ಕೆ ಕುಮ್ಮಕ್ಕು: ಬಿಜೆಪಿ ಸರ್ಕಾರ ರಚನೆ ಕುರಿತು ಮಾಜಿ ಸಂಸದ ವಿ.ಎಸ್ ಉಗ್ರಪ್ಪ ಆಕ್ರೋಶ..

ಬೆಂಗಳೂರು,ಜು,26,2019(www.justkannada.in): ಬಿಜೆಪಿ ವಾಮಮಾರ್ಗದ ಮೂಲಕ ಅಧಿಕಾರ ಹಿಡಿಯುತ್ತಿದ್ದಾರೆ. ಅಲ್ಪಮತ ಇರುವ ಬಿಜೆಪಿಗೆ ಸರ್ಕಾರ ರಚನೆಗೆ  ರಾಜ್ಯಪಾಲರು ಅವಕಾಶ ನೀಡಿದ್ದಾರೆ. ಈ ಮೂಲಕ ರಾಜ್ಯಪಾಲರೇ ಕುದುರೆ ವ್ಯಾಪಾರಕ್ಕೆ ಸಾಥ್ ಕೊಟ್ಟಂತೆ ಆಗಿದೆ ಎಂದು ಮಾಜಿ ಸಂಸದ ವಿ.ಎಸ್ ಉಗ್ರಪ್ಪ ಕಿಡಿಕಾರಿದರು.

ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಸಂಸದ ವಿ.ಎಸ್ ಉಗ್ರಪ್ಪ,ಚಂದ್ರಪ್ಪ, ಮಾಜಿ ಶಾಸಕರಾದ ಆಶೋಕ್ ಪಟ್ಟಣ್ ,ನಾಡಗೌಡ, ಪರಿಷತ್ ಸದಸ್ಯ ಪ್ರಕಾಶ್ ರಾಥೋಡ್ ಜಂಟಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಮಾತನಾಡಿದ ಕಾಂಗ್ರೆಸ್ ಮುಖಂಡ ವಿ.ಎಸ್ ಉಗ್ರಪ್ಪ, ಬಿಜೆಪಿ ಮತ್ತು ರಾಜ್ಯಪಾಲರು ಸೇರಿ ಪ್ರಜಾಪ್ರಭುತ್ವಕ್ಕೆ ಅಪಚಾರ ಮಾಡುವ ಕೆಲಸ ಮಾಡುತ್ತಿದ್ದಾರೆ. ಸದನ ನಡೆಯುವಾಗ ವಿಶ್ವಾಸ ನಿರ್ಣಯದ ಬಗ್ಗೆ ತರಾತುರಿ ತೋರಿದ್ರು. ಈಗ ಹೊಸ ಸರ್ಕಾರ ರಚನೆ ಮಾಡುವುದರಲ್ಲೂ ತರಾತುರಿ ತೋರುತ್ತಿದ್ದಾರೆ. ನಮ್ಮ ಸರ್ಕಾರ ವಿಶ್ವಾಸಮತಯಾಚನೆ ವೇಳೆ ರಾಜ್ಯಪಾಲರು ತರಾತುರಿಯಲ್ಲಿ ಪತ್ರ ಬರೆದಿದ್ರು. ವಿಶ್ವಾಸಮತಯಾಚನೆ ಗೆ ಒತ್ತಡ ಹಾಕಿದ್ದರು. ಈಗ ಬಿಜೆಪಿಗೆ ಹೇಗೆ ಅವಕಾಶ ನೀಡಿದ್ದಾರೆ ಎಂದು ಗುಡುಗಿದರು.

ಸರ್ಕಾರ ರಚನೆ ಮಾಡೋಕೆ 111 ಸ್ಥಾನ ಇರಬೇಕು. ಬಿಜೆಪಿಗೆ ಇರೋದು 105 ಸಂಖ್ಯಾಬಲ 13 ಶಾಶಕರ ರಾಜೀನಾಮೆ ಇನ್ನೂ ಅಂಗೀಕಾರವಾಗಿಲ್ಲ. ಅಲ್ಪ ಮತ ಇರುವ ಬಿಜೆಪಿಗೆ  ರಾಜ್ಯಪಾಲರು ಅವಕಾಶ ನೀಡಿದ್ದಾರೆ. ಬಿಜೆಪಿ ವಾಮಮಾರ್ಗದ ಮೂಲಕ ಅಧಿಕಾರ ಹಿಡಿಯುತ್ತಿದ್ದಾರೆ.  ರಾಜ್ಯಪಾಲರು ಬಿಜೆಪಿಗೆ ಕುದುರೆ ವ್ಯಾಪಾರ ಮಾಡಲು ಅವಕಾಶ ನೀಡಿದ್ದಾರೆ ಎಂದು ವಿ.ಎಸ್ ಉಗ್ರಪ್ಪ ಆರೋಪಿಸಿದರು.

112 ಸದಸ್ಯರ ಬಲ ಇದ್ರೆ ಮಾತ್ರ ಸರ್ಕಾರ ರಚನೆಗೆ ಅಹ್ವಾನ ಮಾಡಬಹುದು.. ಅದ್ರೆ 105 ಸಂಖ್ಯೆ ಬಲ ಇರುವ ಬಿಜೆಪಿಗೆ ಅಹ್ವಾನ ಕೊಟ್ಟಿದ್ದು ಸರಿಯಲ್ಲ. ಹೊಸ ಸಂಪ್ರದಾಯ ರಾಜ್ಯಪಾಲರು ಶುರು ಮಾಡಿದ್ದಾರೆ. 112 ಆಗಬೇಕು ಅಂದ್ರೆ ಕುದರೆ ವ್ಯಾಪಾರ ಮಾಡುವುದು ಒಂದೇ ಇವರ ಮುಂದೆ ಇರುವ ದಾರಿ. ಇದಕ್ಕೆ  ರಾಜ್ಯಪಾಲರೇ ಕುಮ್ಮಕ್ಕು ಕೊಡುತ್ತಿದ್ದಾರೆ.  ಹೊಸ ಸಂಪ್ರದಾಯ ಮಾಡುವುದು ಬಿಟ್ಟು ಜನಾದೇಶಕ್ಕೆ ಹೋಗೋಣ ಬನ್ನಿ ಎಂದು ವಿ.ಎಸ್ ಉಗ್ರಪ್ಪ ತಿಳಿಸಿದರು.

Summary…

VSU: How are you (BJP) going to muster the strength?

VSU: None of this was possible without horse-trading.

VSU: The invitation extended by the Governor to Mr BS Yeddyurappa is unconstitutional.

VSU: The governor has become a part of the conspiracy.

VSU: The governor also has some vested interest.

VSU: As of today, BJP has only 105. Where will they get 7 from?

VSU: It is very, very clear that governor has given BSY a chance to indulge in horse-trading.

 

Key words: governor – horse trade- Former MP -VS Ugrappa- outrage