ಸರ್ಕಾರ ಸರಳ ದಸರಾ  ಹೆಸರಿನಲ್ಲಿ ಜನರ ಜೀವ ತೆಗೆಯಲು ಮುಂದಾಗಿದೆ – ರೈತ ಮುಖಂಡ ಕುರುಬೂರು ಶಾಂತಕುಮಾರ್

ಮೈಸೂರು,ಅಕ್ಟೋಬರ್,10,2020(www.justkannada.in) : ಜನರ ಜೀವ ಮೊದಲು ಎಂದು ಹೇಳಿದ ಸರ್ಕಾರವೇ ಸರಳ ದಸರಾ  ಹೆಸರಿನಲ್ಲಿ ಜನರ ಜೀವ ತೆಗೆಯಲು ಮುಂದಾಗಿದೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ರಾಜ್ಯ ಕಬ್ಬು ಬೆಳೆಗಾರರ ಸಂಘ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಆಕ್ರೋಶವ್ಯಕ್ತಪಡಿಸಿದ್ದಾರೆ.jk-logo-justkannada-logoಸರಕಾರವು ಕೊರೋನ ಆರಂಭವಾದಾಗ ಜನರ ಜೀವ ಮೊದಲು ನಂತರ ಜೀವನ ಅದಕ್ಕಾಗಿ ಮನೆಯಲ್ಲಿ ಇರಿ ಸುರಕ್ಷಿತವಾಗಿರಿ ಎಂದಿತ್ತು. ಇಂದು ಕೊರೋನಾ ಮಹಾಮಾರಿ ಪ್ರತಾಪ ಹೆಚ್ಚುತ್ತಿದೆ, ಜಿಲ್ಲೆಯಲ್ಲಿಯೇ ಸುಮಾರು 40 ಸಾವಿರಕ್ಕೂ ಹೆಚ್ಚು ಜನ ಕಾಯಿಲೆಗೆ ತುತ್ತಾಗಿದ್ದಾರೆ.  850ಕೂ ಹೆಚ್ಚು ಜನ  ಜನ ಸಾವನ್ನಪ್ಪಿದ್ದಾರೆ ಇದು ಸರ್ಕಾರಕ್ಕೆ ತಿಳಿದಿದ್ದರು ಒತ್ತಡಕ್ಕೆ ಮಣಿದು ಸರಳ ದಸರಾ ಹೆಸರಿನಲ್ಲಿ 20 ಕೋಟಿ ಹಣ ಖರ್ಚು ಮಾಡಿ ಆಕರ್ಷಣೆಯ ದಸರಾ ಆಚರಣೆ ನಡೆಸಲು ಮುಂದಾಗಿರುವುದು ಹಾಸ್ಯಸ್ಪದವಾಗಿದೆ  ಎಂದು ಟೀಕಿಸಿದ್ದಾರೆ.

ಕನಿಷ್ಠ 30 ಲಕ್ಷ ಲಕ್ಷ ರೂಪಾಯಿಗಳ ಪರಿಹಾರ ನೀಡಿ

overnment-taking-lives-people-name-simple- Dussehra-Farmer-leader-Kuruburu Shanthakumar

ಇಂತಹ ಸಂದಿಗ್ಧ ಸಮಯದಲ್ಲಿ ದಸರಾ ಹೆಸರಿನಲ್ಲಿ ಜನರನ್ನು ಆಕರ್ಷಿಸುವುದು 300 ಜನ ಸೇರುವುದು ಕೂಡ ಸೋಂಕು ಹರಡಲು ದಾರಿಮಾಡಿದಂತೆ. ಸರ್ಕಾರ ಜನರ ಭಾವನೆಗಳನ್ನು ಧಿಕ್ಕರಿಸಿ ಆಚರಣೆ ಮಾಡುವುದಾದರೆ, ಈ ಸಂದರ್ಭದಲ್ಲಿ ಕರೂನಾ ರೋಗ ತಗುಲಿ ಪ್ರಾಣ ಕಳೆದುಕೊಳ್ಳುವ ಜನರಿಗೆ ಕನಿಷ್ಠ 30 ಲಕ್ಷ ಲಕ್ಷ ರೂಪಾಯಿಗಳ ಪರಿಹಾರ ಕೊಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಅನಾವಶ್ಯಕ ಮೆರವಣಿಗೆ ಜನಾಕರ್ಷಣೆಯ ಕಾರ್ಯಕ್ರಮಗಳನ್ನು ರದ್ದುಗೊಳಿಸಿ

ಇದು ಸರ್ಕಾರದ ವೈಫಲ್ಯ ಆದ ಕಾರಣ ಪರಿಹಾರವನ್ನು ನೀಡಲೇ ಬೇಕಾಗುತ್ತದೆ ಕೇರಳ ರಾಜ್ಯದಲ್ಲಿ ಓಣಂ ಹಬ್ಬದ ಸಂದರ್ಭದಲ್ಲಿ ನಿರ್ಲಕ್ಷ ಮಾಡಿದ ಕಾರಣ ಸಹಸ್ರಾರು ಜನರು, ಸಾವು ನೋವಿಗೆ ತುತ್ತಾದರು. ಅದೇ ಪರಿಸ್ಥಿತಿ ಈ ರಾಜ್ಯದಲ್ಲಿ ಬರಬಾರದು, ಸರ್ಕಾರ ಚಾಮುಂಡಿಬೆಟ್ಟದಲ್ಲಿ ಅಥವಾ ಅರಮನೆಯಲ್ಲಿ ಸರಳ ಸಂಪ್ರದಾಯ ಪೂಜೆಗಳನ್ನು ನಡೆಸಿಕೊಳ್ಳಲಿ, ಅನಾವಶ್ಯಕ ಮೆರವಣಿಗೆ ಜನಾಕರ್ಷಣೆಯ ಕಾರ್ಯಕ್ರಮಗಳನ್ನು ರದ್ದುಗೊಳಿಸಲಿ ಇಲ್ಲದಿದ್ದರೆ ಇದು ಜನದ್ರೋಹಿ ಸರ್ಕಾರ ವಾಗುತ್ತದೆ ಎಂಬುದನ್ನು ಅರಿಯಲಿ ಎಂದು ಪ್ರಕಟಣೆಯ ಮೂಲಕ ದಸರಾ ಆಚರಣೆಗೆ ಕುರುಬೂರು ಶಾಂತಕುಮಾರ್ ವಿರೋಧವ್ಯಕ್ತಪಡಿಸಿದ್ದಾರೆ.

key words : government-taking-lives-people-name-simple- Dussehra-Farmer-leader-Kuruburu Shanthakumar