ರಾಜ್ಯದಲ್ಲಿ ಜ.1 ರಿಂದ ‘ವಿದ್ಯಾಗಮ ಯೋಜನೆ’ ಪುನಾರಂಭ:  ಅಧಿಕೃತ ಆದೇಶ….

ಬೆಂಗಳೂರು,ಡಿಸೆಂಬರ್,16,2020(www.justkannada.in): ರಾಜ್ಯದಲ್ಲಿ ಸ್ಥಗಿತಗೊಂಡಿದ್ದ ವಿದ್ಯಾಗಮ ಯೋಜನೆ ಜನವರಿ 1 ರಿಂದ ಪರಿಷ್ಕೃತವಾಗಿ ಪುನರಾರಂಭವಾಗಲಿದೆ. ಈ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ  ಅಧಿಕೃತ ಆದೇಶ ಹೊರಡಿಸಲಾಗಿದೆ.Teachers,solve,problems,Government,bound,Minister,R.Ashok

ಆಗಸ್ಟ್ 8 ರಿಂದ ಆರಂಭಿಸಲಾಗಿದ್ದ ವಿದ್ಯಾಗಮ ಯೋಜನೆಯನ್ನು ಅಕ್ಟೋಬರ್ 10 ರಂದು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ವಿದ್ಯಾಗಮ ಕಾರ್ಯಕ್ರಮದಿಂದಾಗಿ ವಿದ್ಯಾರ್ಥಿಗಳು ಕೊರೋನಾ ಸೋಂಕು ತಗುಲಿತ್ತು. ಇದೇ ಕಾರಣದಿಂದಾಗಿ ತಾಂತ್ರಿಕ ಕಾರಣ ನೀಡಿ,  ವಿದ್ಯಾಗಮ ಕಾರ್ಯಕ್ರಮ ಸ್ಥಗಿತಗೊಳಿಸಿತ್ತು. ನಿನ್ನೆಯಷ್ಟೇ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪರಿಷ್ಕೃತ ರೂಪದಲ್ಲಿ ರಾಜ್ಯದಲ್ಲಿ ವಿದ್ಯಾಗಮ ಜಾರಿಯಾಗಲಿದೆ ಎಂಬುದಾಗಿ ತಿಳಿಸಿದ್ದರು.Government - restart –vidyagama- Jan 1- Official order.

ಇದರ ಬೆನ್ನಲ್ಲೇ ಇದೀಗ ಹೊಸ ರೂಪದಲ್ಲಿ ರಾಜ್ಯದಲ್ಲಿ ಜನವರಿ 1, 2021ರಿಂದ ವಿದ್ಯಾಗಮ ಕಾರ್ಯಕ್ರಮ ಜಾರಿಗೊಳಿಸಿ, ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕೃತವಾಗಿ ಆದೇಶ ಹೊರಡಿಸಿದೆ. ಈ ಕುರಿತು ಆದೇಶ ಹೊರಡಿಸಿರುವಂತ ಸಾರ್ವಜನಿಕ ಶಿಕ್ಷಣ ಇಲಾಖೆ, ಮಕ್ಕಳ ಶೈಕ್ಷಣಿಕ ಹಿತದೃಷ್ಟಿ ಮತ್ತು ಕಲಿಕೆಯ ನಿರಂತರತೆ ದೃಷ್ಟಿಯಿಂದ ಪರಿಷ್ಕೃತ ರೂಪದ ವಿದ್ಯಾಗಮ ಜ.1ರಿಂದ ಜಾರಿಗೆ ಬರಲಿದೆ. ಈ ಸಂಬಂಧ ಸುರಕ್ಷತಾ ಮಾರ್ಗಸೂಚಿ, ಎಸ್‌ಒಪಿಯನ್ನು ಅನುಸರಿಸಿ, ಹೊಸ ರೂಪದಲ್ಲಿ ವಿದ್ಯಾಗಮ ಕಾರ್ಯಕ್ರಮ ಜಾರಿಗೊಳಿಸಲಾಗುತ್ತಿದೆ ಎಂಬುದಾಗಿ ತಿಳಿಸಿದೆ.

Key words: Government – restart –vidyagama- Jan 1- Official order.