ಆಕ್ಸಿಜನ್ ಕೊರತೆಯಿಂದ ಒಂದೇ ಒಂದು ಜೀವ ಹೋದ್ರೂ ಸರ್ಕಾರವೇ ಹೊಣೆ- ಮಾಜಿ ಸಚಿವ ಹೆಚ್.ಕೆ ಪಾಟೀಲ್ ಎಚ್ಚರಿಕೆ….

ಬೆಂಗಳೂರು,ಆ,19,2020(www.justkannada.in): ರಾಜ್ಯದಲ್ಲಿ ಕೊರೋನಾ ದಿನೇ ದಿನೇ ಇನ್ನಷ್ಟು ಗಂಭೀರವಾಗುತ್ತಿದೆ. ಆಕ್ಸಿಜನ್ ಕೊರತೆಯಿಂದ ರಾಜ್ಯದಲ್ಲಿ ಕೊರೋನಾ ರೋಗಿಗಳ ಜೀವಕ್ಕೆ ಆಪತ್ತು ತಂದಿದೆ. ಆಕ್ಸಿಜನ್ ಕೊರತೆಯಿಂದ ಒಂದೇ ಒಂದು ಜೀವ ಹೋದರೂ ಸರ್ಕಾರವೇ ಹೊಣೆ ಎಂದು ಮಾಜಿ ಸಚಿವ ಹೆಚ್.ಕೆ ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.jk-logo-justkannada-logo

ಬೆಂಗಳೂರಿನಲ್ಲಿ ಇಂದು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಹೆಚ್.ಕೆ ಪಾಟೀಲ್,  ಸರ್ಕಾರದ ಅವ್ಯವಸ್ಥೆ, ಸಮಯೋಚಿತ ನಿರ್ಣಯಗಳ ಕೊರತೆ ಹಾಗೂ ಮುಂದಾಲೋಚನೆ ಇಲ್ಲದ ಸರ್ಕಾರದ ಕ್ರಮಗಳಿಂದ ಜನರು ತೊಂದರೆಗೆ ಸಿಲುಕಿದ್ದಾರೆ. ಒಂದು ಹಂತದಲ್ಲಿ ಅಂಬ್ಯುಲೆನ್ಸ್, ಬೆಡ್, ಸಿಬ್ಬಂದಿ ಸಮಸ್ಯೆ ಅಯಿತು. ನಂತರ ಖಾಸಗಿ ಆಸ್ಪತ್ರೆಗಳಲ್ಲಾದ ಸಮಸ್ಯೆ ಇನ್ನೂ ಬಗೆಹರಿಸಿಲ್ಲ. ಈಗ ಆಕ್ಸಿಜನ್ ಸಮಸ್ಯೆ ಎದುರಾಗಿದೆ. ಅದ್ಯಾವುದೋ ಗುಜರಾತ್ ನ ಮೆಹತಾ ಕಂಪನಿಗೆ ಟೆಂಡರ್ ಕೊಟ್ಟು ತೊಂದರೆ ಮಾಡಿಕೊಂಡರು. ಇನ್ನೂ ಆ ಮೆಹತಾ ಕಂಪನಿಯಿಂದ ಇನ್ನೂ ಆಕ್ಸಿಜನ್ ಬಂದಿಲ್ಲ. ದೂರದೃಷ್ಟಿಯಿಂದ ಸರ್ಕಾರ ವ್ಯವಸ್ಥೆ ಮಾಡಿಲ್ಲ ಎಂದು ಟೀಕಿಸಿದರು.government-responsible-one-life-oxygen-former-minister-hk-patil-warns

ರಾಜ್ಯದಲ್ಲಿ 24,500 ರೋಗಿಗಳಿಗೆ ಆಕ್ಸಿಜನ್ ಅಗತ್ಯ. ಇದರಲ್ಲಿ ಒಂದು ಸಾವಿರ ಜನರಿಗೆ ಆಕ್ಸಿಜನ್ ಕೊಡಲೇಬೇಕಾದ ಅತ್ಯಂತ ಅನಿವಾರ್ಯ ಸ್ಥಿತಿ ಇದೆ. ಆದರೆ ಸರ್ಕಾರ ಕೇವಲ 12 ಸಾವಿರ ಆಕ್ಸಿಜನ್ ಬೆಡ್ ಸಿದ್ದಪಡಿಸಿದೆ. ಎಲ್ಲೆಡೆ ಆಕ್ಸಿಜನ್ ಕೊರತೆ ಇದೆ. ನಾಲ್ಕು ತಿಂಗಳು ಲಾಕ್ ಡೌನ್ ನಂತರೂ ಸರ್ಕಾರ ಆಕ್ಸಿಜನ್ ವ್ಯವಸ್ಥೆ ಮಾಡಿಲ್ಲ. ಆಕ್ಸಿಜನ್ ವ್ಯವಸ್ಥೆಗೆಂದೇ ಸರ್ಕಾರ ಒಂದು ಟಾಸ್ಕ್ ಫೋರ್ಸ್ ರಚನೆ ಮಾಡಲಿ ಎಂದು ಹೆಚ್.ಕೆ ಪಾಟೀಲ್  ಒತ್ತಾಯಿಸಿದ್ದಾರೆ.

ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ಮಾಡಿ ಸುಗ್ರೀವಾಜ್ಞೆ ಹೊರಡಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಹೆಚ್.ಕೆ ಪಾಟೀಲ್. ರಾಜ್ಯ ಸರ್ಕಾರ ರೈತ ವಿರೋಧಿ ಸುಗ್ರೀವಾಜ್ಞೆ ಹೊರಡಿಸಿದೆ. ಇದು ಕರಾಳವಾದ ಸುಗ್ರೀವಾಜ್ಞೆ. ಇಂದಿನಿಂದ ಸುಗ್ರೀವಾಜ್ಞೆಯ ಕಾನೂನು ಜಾರಿಗೆ ಬರುತ್ತಿದೆ. ಇದು ರೈತರಿಗೆ ಮಾರಕ. ಆರ್ಥಿಕ ಸಂಕಷ್ಟದಲ್ಲಿರುವ ರೈತರ ಭೂಮಿ ಮಾರುವ ಕಾನೂನು ತಂದಿರುವುದು ಮಾರಕ. ಅಧಿವೇಶನದಲ್ಲಿ ಚರ್ಚೆ ಆಗದೇ ಸುಗ್ರೀವಾಜ್ಞೆ ಅನುಷ್ಠಾನ ಮಾಡೋದು ಸರಿಯಲ್ಲ ಎಂದು ಟೀಕಿಸಿದರು.

ಉತ್ತರ ಕರ್ನಾಟಕದಲ್ಲಿ ಪ್ರವಾಹ ಭೀತಿ ಪ್ರಾರಂಭವಾಗಿದೆ. ಮಲಪ್ರಭದಲ್ಲಿ 25 ಸಾವಿರ ಕ್ಯೂಸೆಕ್ಸ್ ನೀರು ಹರಿಯುತ್ತಿದೆ. ಇವತ್ತಿನ ಮಳೆ ಪ್ರಮಾಣ ನೋಡಿದರೆ ಪ್ರವಾಹದ ಭೀತಿ ತೀವ್ರವಾಗಿದೆ. ಕಳೆದ ವರ್ಷ ಸರ್ಕಾರ ಮುಂಜಾಗ್ರತಾ ಕ್ರಮ ಕೈಗೊಂಡಿರಲಿಲ್ಲ. ಬೋಟ್ ವ್ಯವಸ್ಥೆ, ಪುನರ್ ವಸತಿ ವ್ಯವಸ್ಥೆಯನ್ನು ಸರ್ಕಾರ ಮಾಡಿರಲಿಲ್ಲ. ಈ ವರ್ಷ ಹಾಗಾಗಬಾರದು, ಸರ್ಕಾದ ಮುಂಜಾಗ್ರತೆ ವಹಿಸಬೇಕು ಎಂದು ಹೆಚ್.ಕೆ ಪಾಟೀಲ್ ಒತ್ತಾಯಿಸಿದರು.

Key words:  government -responsible – one life – oxygen- Former minister -HK Patil- warns.