ನನ್ನ ಸಾವಿಗೆ ಸರ್ಕಾರವೇ ಕಾರಣ: ವಿಧಾನಸೌಧದಲ್ಲಿ ಆತ್ಮಹತ್ಯೆಗೆ ಯತ್ನಕ್ಕೂ ಮುನ್ನ ರೇವಣ್ಣ ಕುಮಾರ್ ಬರೆದಿಟ್ಟಿರುವ ಪತ್ರದಲ್ಲೇನಿದೆ ಗೊತ್ತೆ..?

ಬೆಂಗಳೂರು,ಜೂ,24,2019(www.justkannada.in):  ವಿಧಾನಸೌಧದಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಚಿಕ್ಕಬಳ್ಳಾಪುರ ಜಿಲ್ಲೆಯ ಆನೂರು ಗ್ರಾಮದ  ರೇವಣ್ಣ ಕುಮಾರ್ ತಾವು ಆತ್ಮಹತ್ಯೆಗೆ ಯತ್ನಿಸಲು ಕಾರಣವೇನೆಂಬುದನ್ನ ಪತ್ರದಲ್ಲಿ ಬರೆದಿಟ್ಟಿದ್ದು ಪತ್ರ ಲಭ್ಯವಾಗಿದೆ.

ವಿಧಾನಸೌಧದಲ್ಲಿ  ಆತ್ಮಹತ್ಯೆ ಪ್ರಯತ್ನಕ್ಕೂ ರೇವಣ್ಣಕುಮಾರ್ ಮುನ್ನ ಪತ್ರ ಬರೆದಿದ್ದು,  ಆ ಪತ್ರವನ್ನು ವಿಧಾನಪರಿಷತ್ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿಯವರಿಗೂ ಕಳಿಸಿದ್ದರು ಎನ್ನಲಾಗಿದೆ. ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಕೊಠಡಿ ಸಂಖ್ಯೆ 332ರ ಶೌಚಾಲಯದಲ್ಲಿ ಕುತ್ತಿಗೆ ಕೊಯ್ದು ಆತ್ಮಹತ್ಯೆಗೆ ಯತ್ನಿಸಿದ ರೇವಣ್ಣ ಚಿಂತಾಮಣಿ ತಾಲೂಕಿನ ಅನೂರು ಗ್ರಾಮ ಪಂಚಾಯತ್ ನಲ್ಲಿ ತಾತ್ಕಾಲಿಕ ಸಹಾಯಕ ಗ್ರಂಥಪಾಲಕರಾಗಿ ಕೆಲಸ ಮಾಡುತ್ತಿದ್ದರು.  ರೇವಣ್ಣ ಕುಮಾರ್, ರಾಜ್ಯಾದ್ಯಂತ 6 ಸಾವಿರಕ್ಕೂ ಹೆಚ್ಚು ಗ್ರಂಥಪಾಲಕರು ಖಾಯಂ ಆಗುತ್ತದೆ ಎಂದು ಕಾಯುತ್ತಿದ್ದಾರೆ. ಆದರೇ ಇದುವರೆಗೂ ಖಾಯಂ ಆಗಿಲ್ಲ. ಹೀಗಾಗಿ ತನ್ನ ಆತ್ಮಹತ್ಯೆ. ಅಂತವರನ್ನು ಖಾಯಂ ಮಾಡುವುದಕ್ಕಾಗಿ ಬಲಿದಾನವಾಗಲಿ ಎಂದು ಡೆತ್ ನೋಟ್ ನಲ್ಲಿ ಬರೆದಿಟ್ಟಿದ್ದಾರೆ.

ಹುದ್ದೆ ಖಾಯಮಾತಿ ಆಗ್ತಿಲ್ಲ ಅದಕ್ಕಾಗಿ ಸಾಯುತ್ತೇನೆ. 6 ಸಾವಿರ ಕುಟುಂಬಗಳ ರಕ್ಷಣೆಗೆ ಸರ್ಕಾರ ಮುಂದಾಗ್ತಿಲ್ಲ. ಹೀಗಾಗಿ ನನ್ನ ಸಾವಿಗೆ ಸರ್ಕಾರವೇ ಕಾರಣ. ಇದು ಕೊಲೆಯನ್ನ ಬಲಿದಾನ ಎಂದು ಪತ್ರದಲ್ಲಿ ರೇವಣ್ಣ ಬರೆದಿದ್ದಾರೆ.

ಜತೆಗೆ ತನ್ನ ಕೊನೆಯಾಸೆಯನ್ನೂ ಹೇಳೀಕೊಂಡಿರುವ ರೇವಣ್ಣ ಕುಮಾರ್, ಅಂತ್ಯಸಂಸ್ಕಾರ ಸಿಎಂ ಅವರಿಂದಲೇ ಆಗಬೇಕು. ಇದು ನನ್ನ ಕೊನೆಯಾಸೆ. ಸಾವಿನ ನಂತರ ಮನೆಯಲ್ಲಿ ಫೋಟೋ ಹಾಕಬಾರದು, ಅಳಬಾರದು. ವಿಧಿವಿಧಾನ ಬೇಡ. ನಮ್ಮೂರ ಕೆರೆಯಲ್ಲಿ ಸೀಮೆಎಣ್ಣೆ, ಕಟ್ಟಿಗೆ, ಬೆಂಕಿ ಪೊಟ್ಟಣ ಸಾಕು ಹೂವು ಹಣ್ಣು ಬೇಡ.ಎಂದು ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.

ವಿಧಾನಸೌಧದಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ ಹಿನ್ನೆಲೆ ಗೃಹ ಸಚಿವ ಎಂ ಬಿ ಪಾಟೀಲ್ ಅವರು  ಬೆಂಗಳೂರು ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಗೆ ದೂರವಾಣಿ ಕರೆ ಮಾಡಿ ಪ್ರಕರಣದ ಮಾಹಿತಿ ಪಡೆದ ಮಾಹಿತಿ ಪಡೆದಿದ್ದಾರೆ.

Key words: government – responsible – my death- vidhanasoudha-attempt -commit suicide-Revanna Kumar.