ಗುಡ್ ನ್ಯೂಸ್: ಜೂನ್ 8 ರಿಂದ ರಾಜ್ಯದಲ್ಲಿ ನಾನಾ ಚಟುವಟಿಕೆಗಳಿಗೆ ಅವಕಾಶ ಸಾಧ್ಯತೆ

ಬೆಂಗಳೂರು, ಮೇ 31, 2020 (www.justkannada.in): ಜೂನ್ 8 ರಿಂದ ರಾಜ್ಯದಲ್ಲಿ ವಿವಿಧ ಚಟುವಟಿಕೆಗಳಿಗೆ ಅವಕಾಶ ನೀಡುವ ಸಾಧ್ಯತೆ ಇದೆ.

ಜೂನ್ 30 ರವರೆಗೆ ಲಾಕ್ ಡೌನ್ ಮುಂದುವರೆದಿದ್ದು ಕರ್ಫ್ಯೂ ಅವಧಿಯನ್ನು ರಾತ್ರಿ 9 ರಿಂದ ಬೆಳಗ್ಗೆ 5 ಗಂಟೆಯವರೆಗೆ ನಿಗದಿ ಮಾಡಲಾಗಿದೆ. ಹೀಗಾಗಿ ರಾತ್ರಿ 9 ಗಂಟೆಯವರೆಗೆ ಮದ್ಯದಂಗಡಿಗಳಿಗೆ ಅವಕಾಶ ನೀಡುವ ಸಾಧ್ಯತೆಯಿದೆ.

ಫಿಟ್ನೆಸ್ ಪ್ರಿಯರಿಗೆ ಸಿಹಿ ಸುದ್ದಿ ಸಿಗಲಿದ್ದು, ಜಿಮ್ ಓಪನ್ ಮಾಡಲು ಅವಕಾಶ ನೀಡಲಾಗುವುದು. ಪಾರ್ಕ್ ಅವಧಿಯನ್ನು ಕೂಡ ವಿಸ್ತರಿಸುವ ಸಾಧ್ಯತೆ ಇದೆ. ಬೆಳಗ್ಗೆ 5 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ನಿಯಮಾನುಸಾರ ವಿವಿಧ ಚಟುವಟಿಕೆಗಳಿಗೆ ಅವಕಾಶ ನೀಡಲಾಗುವುದು ಎಂದು ಹೇಳಲಾಗಿದೆ.