ರಿಯಲ್‌ ಎಸ್ಟೇಟ್‌ ಉದ್ಯಮಿಗಳ ಲಾಬಿಗೆ ಮಣಿದ ಸರ್ಕಾರ: ಇದು ರೈತರಿಗೆ ಮಾಡಿರುವ ದೊಡ್ಡ ದ್ರೋಹ-ಮಾಜಿ ಸಿಎಂ ಸಿದ್ಧರಾಮಯ್ಯ ಆಕ್ರೋಶ…

kannada t-shirts

ಮೈಸೂರು,ಜು,30,2020(www.justkannada.in): ರಿಯಲ್‌ ಎಸ್ಟೇಟ್‌ ಉದ್ಯಮಿಗಳ ಲಾಬಿಗೆ ಸರ್ಕಾರ ಮಣಿದಿದೆ: ಇದು ರೈತರಿಗೆ ಮಾಡಿರುವ ದೊಡ್ಡ ದ್ರೋಹ ಎಂದು ರಾಜ್ಯ ಬಿಜೆಪಿ ಸರ್ಕಾರದ ವಿರುದ್ದ ಮಾಜಿ ಸಿಎಂ ಸಿದ್ಧರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.jk-logo-justkannada-logo

ಮೈಸೂರಿನಲ್ಲಿ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ,  ಕೇಂದ್ರದಿಂದ 1800ಕೋಟಿ ಕೊಟ್ಟಿದ್ದಕ್ಕೆ ರಾಜಾಹುಲಿ ಎಂದು ಬೀಗಿದ್ರು. ಈ ನೆರೆ ಪರಿಹಾರಕ್ಕೆ‌ ನಾವು ಸಾಧನೆ ಅಂತ ಕರೀಬೇಕಾ.? ನೆರೆ ಪೀಡಿತರಿಗೆ ಈವರೆಗೂ ಸರಿಯಾದ ಮನೆ ಆಗಿಲ್ಲ. ಈ ನಿರ್ವಹಣೆಯಲ್ಲಿ  ಸರ್ಕಾರ ಟೋಟಲಿ ಫೇಲ್ ಆಗಿದೆ. ಇದರ ಮಧ್ಯೆ ಉಪ ಚುನಾವಣೆಯಲ್ಲಿ ಯದ್ವಾತದ್ವಾ ದುಡ್ಡು ಖರ್ಚು ಮಾಡಿದ್ರು. ಒಂದೊಂದು ಉಪ‌ಚುನಾವಣೆಗೆ 20, 25ಕೋಟಿ ಖರ್ಚು ಮಾಡಿದ್ದಾರೆ. ಇನ್ನು ಕೆಲವು ಕಡೆ 50 ರಿಂದ 60ಕೋಟಿ ಖರ್ಚು ಮಾಡಿದ್ದಾರೆ. ಇದನ್ನೆಲ್ಲ ಬಿಜೆಪಿ ಅವರು ಸಾಧನೆ ಅಂತಿದ್ದಾರೆ ಎಂದು ಟೀಕಿಸಿದರು.

ನೋಡಿ ಎಷ್ಟು ಭಯ ಇದೆ ಅವ್ರಿಗೆ ಅಂತ….

ಕೊರೋನಾ ಹಗರಣದ ನಗ್ಗೆ ನಾನು ಡಿಕೆಶಿ ಇಬ್ಬರು ಪ್ರೆಸ್ಮೀಟ್ ಮಾಡಿದ್ವಿ. ಆ‌ ಸಂಜೆಯೇ ಐವರು ಸಚಿವರು ಬಂದು‌ ಪ್ರೆಸ್ಮೀಟ್ ಮಾಡಿದ್ರು. ನೋಡಿ ಎಷ್ಟು ಭಯ ಇದೆ ಅವ್ರಿಗೆ ಅಂತ ಎಂದು ಬಿಜೆಪಿ ಸಚಿವರ ಬಗ್ಗೆ ಮಾಜಿ ಸಿಎಂ ಸಿದ್ಧರಾಮಯ್ಯ ವ್ಯಂಗ್ಯವಾಡಿದರು.

ಅಂದು ಎಲ್ಲ ಇಲಾಖೆಯ ಅಧಿಕಾರಿಗಳನ್ನ ಒಗ್ಗೂಡಿಸಿ ಪ್ರೆಸ್ಮೀಟ್ ಮಾಡಿದ್ರು. ಪ್ರೆಸ್ಮೀಟ್ ವೇಳೆ‌ ಬಿಜೆಪಿ ಹೇಳಿದ ಲೆಕ್ಕವೇ ಬೇರೆ. ಅದಕ್ಕೂ ಮುನ್ನ ಬಿಜೆಪಿ ಹೇಳಿದ ಲೆಕ್ಕವೇ ಬೇರೆ ಎಂದು ಬಿಜೆಪಿ ಕೊರೋನಾ‌ ಲೆಕ್ಕದ ಅಕ್ರಮದ ಬಗ್ಗೆ ಮತ್ತೇ ಆರೋಪಿಸಿದರು.

ಶ್ರೀಮಂತರು ಜಮೀನು ಖರೀದಿಸೋದು ಬೆಳೆ ಬೆಳೆಯೋಕಾ..?

ಕೊರೋನ ಸಂಕಷ್ಟದ ನಡುವೆ ಜನವಿರೋಧಿ ಕಾಯ್ದೆ ಜಾರಿಗೆ ತಂದಿದ್ದಾರೆ. ಸುಗ್ರಿವಾಜ್ಞೆ ಮೂಲಕ ಎಪಿಎಂಸಿ, ಆಹಾರ ಸಂರಕ್ಷಣಾ ಕಾಯ್ದೆಗಳಿಗೆ ತಿದ್ದುಪಡಿ ತಂದಿದ್ದಾರೆ. ಭೂಸುಧಾರಣಾ ಕಾಯ್ದೆ ತುಂಬಾ ಐತಿಹಾಸಿಕವಾದದ್ದು. ಇಂತಹ ಜನಪರವಾದ ಕಾಯ್ದೆಗೆ ತಿದ್ದುಪಡಿ ತಂದಿದ್ದಾರೆ. ಭೂ ಸುಧಾರಣೆ ಕಾಯ್ದೆಯಡಿ 13814 ಕೇಸ್‌ಗಳು ವೇರಿಯಸ್ ಕೋರ್ಟ್‌ಗಳಲ್ಲಿ ಪೆಂಡಿಂಗ್ ಇದ್ದವು. ಬೆಂಗಳೂರು ಗ್ರಾಮಾಂತರದಲ್ಲಿಯೇ 1800 ಕೇಸ್‌ಗಳಿದ್ದವು. ಯಾವುದೇ ಕಾನೂನು‌ ಮಾಡಬೇಕಾದರೆ ಕಾರಣ ಬೇಕಲ್ಲವೇ. ಈ ಕಾಯ್ದೆಗೆ ಜನರು ಒತ್ತಾಯಿಸಿದ್ದರೇ,ಹಾಗಿದ್ರೆ ನಿಮ್ಮ ಉದ್ದೇಶ ಏನು..? ಬಹು ರಾಷ್ಟ್ರೀಯ ಕಂಪನಿಗಳಿಗೆ ಮಣೆ ಹಾಕಲು ಈ ರೀತಿ ಮಾಡ್ತಿದ್ದೀರಿ. ಶ್ರೀಮಂತರು ಜಮೀನು ಖರೀದಿಸೋದು ಬೆಳೆ ಬೆಳೆಯೋಕಾ..? ಅವರು ರಿಯಲ್ ಎಸ್ಟೇಟ್,ಫಾರ್ಮ್ ಹೌಸ್ ಮಾಡ್ತಾರೆ. ರಿಯಲ್‌ ಎಸ್ಟೇಟ್‌ ಉದ್ಯಮಿಗಳ ಲಾಬಿಗೆ ಸರ್ಕಾರ ಮಣಿದಿದೆ. ಇದು ರೈತರಿಗೆ ಮಾಡಿರುವ ದೊಡ್ಡ ದ್ರೋಹ ಎಂದು ಕಿಡಿಕಾರಿದರು.government-lobby-real-estate-former-cm-siddaramaiah-mysore

ಕೈಗಾರಿಕೋದ್ಯಮಿ, ಶ್ರೀಮಂತರು, ಬಂಡವಾಳಶಾಹಿಗಳ‌ ಪರ ಇರುವ ಸರ್ಕಾರ ಇದು. ರೈತರಿಗೆ ತಮ್ಮ‌ ಜಮೀನು ಇರೋದೆ ಒಂದು ಸ್ವಾಭಿಮಾನ. ಈ ಕಾಯ್ದೆ ತಿದ್ದಪಡಿಯಿಂದ ಮತ್ತೆ ಜಮೀನ್ದಾರಿ, ಮಹಲ್ವಾರಿ ಪದ್ದತಿ ವಾಪಾಸ್ ಬಂದಂತಾಗಿದೆ ಎಂದು ಸಿದ್ಧರಾಮಯ್ಯ ಹರಿಹಾಯ್ದರು.

ಆದ್ರೆ ಕೊರೊನಾ ವಿಚಾರದಲ್ಲಿ ಲೂಟಿ‌ ಮಾಡುವವರಿಗೆ ನಾನು ಸಹಕಾರ ಕೊಡೋಲ್ಲ.

ಕೊರೋನಾ ಸಂದರ್ಭದಲ್ಲಿ ಲೆಕ್ಕಕೊಡಿ ಅಭಿಯಾನ ವಿಚಾರ ಕುರಿತು ಪ್ರತಿಕ್ರಿಯಿಸಿದ ಮಾಜಿ ಸಿಎಂ ಸಿದ್ಧರಾಮಯ್ಯ, ಕೊರೋನಾ ಸಂದರ್ಭದಲ್ಲಿ ಮಧ್ಯಪ್ರದೇಶದಲ್ಲಿ ಸರ್ಕಾರ ಬಿಳಿಸಿದ್ದು ಸರಿನಾ…? ಮಹಾರಾಷ್ಟ್ರದಲ್ಲಿ ಸರ್ಕಾರ ಅಲುಗಾಡಿಸಿದ್ದು ಸರಿನಾ. ಇಂತಹವರಿಗೆ ಸಹಕಾರ ಕೊಡ್ಬೇಕಾ. ಕೊರೊನಾ ರೋಗ ನಿಯಂತ್ರಣಕ್ಕೆ ಸಹಕಾರ ಇದ್ದೆ ಇದೆ. ಆದ್ರೆ ಕೊರೊನಾ ವಿಚಾರದಲ್ಲಿ ಲೂಟಿ‌ ಮಾಡುವವರಿಗೆ ನಾನು ಸಹಕಾರ ಕೊಡೋಲ್ಲ ಎಂದರು.

ದೆಹಲಿಯಲ್ಲಿ ಕೊರೊನಾ ಕಂಟ್ರೋಲ್ ಮಾಡಿದ್ದಾರೆ. ಮಹಾರಾಷ್ಟ್ರದಲ್ಲಿ‌ ಕೊರೊನಾ ನಿಯಂತ್ರಣ ಮಾಡಿದ್ದಾರೆ. ಕರ್ನಾಟಕದಲ್ಲಿ ಯಾಕೇ ಸಾಧ್ಯವಾಗಲಿಲ್ಲ. ನೂರಾರು ಕೋಟಿ ಹಣ ಖರ್ಚು ಮಾಡಿದ್ದೀರಿ. ಯಾಕೇ ಕಂಟ್ರೋಲ್ ಮಾಡಲು ಆಗ್ತಿಲ್ಲ. ಲೆಕ್ಕ ಕೊಡಿ ಅಂದ್ರೆ ಸುಳ್ಳು ಹೇಳ್ತಿರಾ. ಇದನ್ನ ಪ್ರಶ್ನೆ ಮಾಡಿದ್ರೆ ಸಿದ್ದರಾಮಯ್ಯ ಸಹಕಾರ ನೀಡ್ತಿಲ್ಲ ಅಂತೀರಾ. ನಾವು ಹೇಳಿದ ಒಂದೆ ಒಂದು ಸಲಹೆ ಸ್ವೀಕರಿಸಿಲ್ಲ ಎಂದು ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದರು.

ಇವರು ದುಡ್ಡು ಹೊಡೆಯಲು ಶುರು ಮಾಡಿದಾಗ ನಾನು ಮಾತನಾಡಿದೆ. ಜುಲೈ 3 ತಾರಿಖಿನವರೆಗು ಕೊರೊನಾ ಬಗ್ಗೆ ಮಾತನಾಡಿರಲಿಲ್ಲ. ಕರ್ನಾಟಕ ಈಗ ಸೂತಕದ ಮನೆಯಲ್ಲಿದೆ. ಇಂತಹ ಸಂದರ್ಭದಲ್ಲಿ ಸಂಭ್ರಮಾಚರಣೆ ಬೇಕಿತ್ತಾ..? ಎಂದು ಸಿದ್ಧರಾಮಯ್ಯ ಪ್ರಶ್ನಿಸಿದರು.

ಕುಮಾರಸ್ವಾಮಿ ಬಗ್ಗೆ ಈಗ ಮಾತನಾಡೋಲ್ಲ.

ಸಂವಾದಲ್ಲಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಬಗ್ಗೆ  ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಕುಮಾರಸ್ವಾಮಿ ಬಗ್ಗೆ ಈಗ ಮಾತನಾಡೋಲ್ಲ. ನಾನು ಯಾರಿಗೂ ಹೆದರಿಕೊಂಡು ಹೋಗೋದಿಲ್ಲ. ಎಲ್ಲದಕ್ಕು ಉತ್ತರ ಕೊಡ್ತಿನಿ. ಕುಮಾರಸ್ವಾಮಿ ವಿಚಾರಕ್ಕೂ ಉತ್ತರ ಕೊಡ್ತಿನಿ. ಆದ್ರೆ ಈಗಲ್ಲ ಮುಂದೆ ಎಲ್ಲದಕ್ಕೂ ಉತ್ತರ ಕೊಡ್ತಿನಿ ಎಂದು ಹೇಳಿದರು.

Key words:  government- lobby -real estate -Former CM- Siddaramaiah -mysore

website developers in mysore