ಮಕ್ಕಳ ಆರೋಗ್ಯದ ಬಗ್ಗೆ ಸರ್ಕಾರಕ್ಕೆ ನಿಗಾ ಇದೆ: ಶಾಲೆ ಆರಂಭಕ್ಕೆ ತರಾತುರಿ ಇಲ್ಲ- ಸಚಿವ ಸುಧಾಕರ್ ಸ್ಪಷ್ಟನೆ.

ಬೆಂಗಳೂರು,ಜೂನ್,22,2021(www.justkannada.in):   ಹಂತ ಹಂತವಾಗಿ ಶಾಲಾ-ಕಾಲೇಜು ಆರಂಭಕ್ಕೆ ಡಾ.ದೇವಿಶೆಟ್ಟಿ ಸಮಿತಿ ಸಲಹೆ ನೀಡಿರುವ ಹಿನ್ನೆಲೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಶಾಲೆ ಆರಂಭಕ್ಕೆ ತರಾತುರಿ ಇಲ್ಲ ಎಂದಿದ್ದಾರೆ.jk

ಈ ಬಗ್ಗೆ ಇಂದು ಮಾಧ್ಯಮಗಳ ಜತೆ ಮಾತನಾಡಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಶಾಲೆ ಆರಂಭ ತುಂಬಾ ಸೂಕ್ಷ್ಮ ವಿಚಾರವಾಗಿದೆ. ಈ ಬಗ್ಗೆ ತುಂಬಾ ಯೋಚಿಸಿ ನಿರ್ಧಾರ ಕೈಗೊಳ್ಳಬೇಕಿದೆ. ದೇವಿಶೆಟ್ಟಿ ಸಮಿತಿ ಸಲಹೆ ಬಗ್ಗೆ ಚರ್ಚಿಸಲಾಗುತ್ತದೆ. ಕೂಲಂಕುಷವಾಗಿ ಚರ್ಚಿಸಿ ನಂತರ ನಿರ್ಧಾರ ಕೈಗೊಳ್ಳಲಾಗುತ್ತದೆ. ಇನ್ನು ಮಕ್ಕಳ ಆರೋಗ್ಯದ ಬಗ್ಗೆ ಸರ್ಕಾರಕ್ಕೆ ನಿಗಾ ಇದೆ ಎಂದರು.

3ನೇ ಅಲೆ ಹೇಗೆ ನಿಯಂತ್ರಣ ಮಾಡಬೇಕು. ಹೇಗೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ಡಾ. ದೇವಿಶೆಟ್ಟಿ ಸಮಿತಿ ವರದಿ ನೀಡ್ತಾರೆ ಎಂದು ಸಚಿವ ಸುಧಾಕರ್ ತಿಳಿಸಿದರು.

ENGLISH SUMMARY…..

Govt. has concern about health of children: No hurry to start schools: Minister Sudhakar clarifies
Bengaluru, June 22, 2021 (www.justkannada.in): Responding to the suggestion of the committee led by Dr. Deviprasad Shetty to open schools and colleges in phases, Health and Medical Education Minister Dr. K.
Sudhakar has clarified that the government is not in a hurry to commence the schools and colleges.
Speaking to the media persons today in Bengaluru Dr. K. Sudhakar explained that commencing schools is a very sensitive matter and a decision regarding this should be arrived at only after enough contemplation. “We are discussing the Committee recommendations. We will arrive at a decision only after discussing every angle. The government is also having a lot of concern and focus on the health of children,” he explained.
Further, he also informed that the Dr. Deviprasad Shetty committee will also submit a report on how to control 3rd wave of the COVID-19 Pandemic and precautionary measures that have to be taken.
Keywords: Health and Medical Education Minister/ Dr. K. Sudhakar/ State Govt./ no hurry/ commencing of schools-colleges

Key words: government – health –children-start -school – Minister -Sudhakar