ರಾಜ್ಯದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಕಾಲೇಜುಗಳ ಆರಂಭಕ್ಕೆ ಸರ್ಕಾರ ಗ್ರೀನ್ ಸಿಗ್ನಲ್…

ಬೆಂಗಳೂರು, ಅಕ್ಟೋಬರ್,23,2020(www.justkannada.in):  ರಾಜ್ಯದಲ್ಲಿ ಕೊರೋನಾ ಮಹಾಮಾರಿ ಹರಡುವಿಕೆ, ಮತ್ತು ಲಾಕ್ ಡೌನ್ ನಿಂದಾಗಿ ಕಳೆದ ಐದಾರು ತಿಂಗಳಿನಿಂದ ಬಂದ್ ಆಗಿದ್ದ ಪದವಿ ಮತ್ತು ಸ್ನಾತಕೋತ್ತರ ಪದವಿ ಕಾಲೇಜುಗಳ ಆರಂಭಕ್ಕೆ ರಾಜ್ಯ ಸರ್ಕಾರ  ಗ್ರೀನ್ ಸಿಗ್ನಲ್ ನೀಡಿದೆ.jk-logo-justkannada-logo

ನವೆಂಬರ್ 17 ರಿಂದ ಪದವಿ ಮತ್ತು ಸ್ನಾತಕೋತ್ತರ ಪದವಿ ಕಾಲೇಜುಗಳನ್ನು ಆರಂಭ ಮಾಡಲಾಗುತ್ತದೆ. ಕೊರೋನಾ ಮಾರ್ಗಸೂಚಿ ಮತ್ತು ಮುಂಜಾಗ್ರತಾ ಕ್ರಮದೊಂದಿಗೆ ಕಾಲೇಜು ಆರಂಭಿಸಲಾಗುತ್ತದೆ ಎಂದು ಡಿಸಿಎಂ ಹಾಗೂ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ಘೋಷಣೆ ಮಾಡಿದ್ದಾರೆ.

ಕೊರೋನಾ ಸೋಂಕಿನ ಸಂಕಷ್ಟದ ನಡುವೆಯೂ ರಾಜ್ಯದಲ್ಲಿ ನವೆಂಬರ್ 17ರಿಂದ ಡಿಗ್ರಿ ಕಾಲೇಜು ತೆರೆಯಲು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಮಹತ್ವದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಕಾಲೇಜು ಆರಂಭಿಸುವ ಕುರಿತು ಇಂದು ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ತಜ್ಞರ ಮಹತ್ವದ ಸಭೆ ನಡೆಯಿತು.

ಸಭೆ ಬಳಿಕ ಮಾತನಾಡಿದ ಡಿಸಿಎಂ ಅಶ್ವಥ್ ನಾರಾಯಣ್,  ರಾಜ್ಯಾದ್ಯಂತ ನವೆಂಬರ್ 17ರಿಂದ ಡಿಗ್ರಿ ಕಾಲೇಜ್ ಆರಂಭಕ್ಕೆ ಇಂದಿನ ಸಿಎಂ ನೇತೃತ್ವದಲ್ಲಿ ನಡೆದಂತ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಹೈಬ್ರಿಡ್ ಮಾದರಿಯಲ್ಲಿ ರಾಜ್ಯದಲ್ಲಿ ಡಿಗ್ರಿ ಕಾಲೇಜ್ ತೆರೆಯಲು ನಿರ್ಧರಿಸಲಾಗಿದೆ. ತರಗತಿಗೆ ಹಾಜರಾಗಿಯಾದರೂ ಕಲಿಯಬಹುದು. ಇಲ್ಲವೇ ಆನ್ ಲೈನ್ ತರಗತಿಯಲ್ಲಿ ಹಾಜರಾಗಿಯಾದರೂ ವಿದ್ಯಾರ್ಥಿಗಳು ಕಲಿಕೆ ಮುಂದುವರೆಸಬಹುದು ಎಂಬುದಾಗಿ ತಿಳಿಸಿದರು.Government - green signal - opening –UG –PG-colleges –DCM –Ashwath narayan

ಮೊದಲಿಗೆ ಪದವಿ, ಇಂಜಿನಿಯರಿಂಗ್  ಡಿಪ್ಲೋಮೊ ಕಾಲೇಜುಗಳನ್ನ ಆರಂಭಸಿಲಾಗುತ್ತದೆ. ಕೊರೋನಾ ಮಾರ್ಗಸೂಚಿ ಮತ್ತು ಮುಂಜಾಗ್ರತಾ ಕ್ರಮದೊಂದಿಗೆ ಕಾಲೇಜು ಆರಂಭಿಸಲಾಗುತ್ತದೆ. ಯುಜಿಸಿ ಗೈಡ್ ಲೈನ್ಸ್ ಪ್ರಕಾರ ಕಾಲೇಜು ಆರಂಭಿಸುತ್ತೇವೆ. ಮಾಸ್ಕ್ ,ಸ್ಯಾನಿಟೈಸರ್, ಸ್ಕ್ರೀನಿಂಗ್ ಕಡ್ಡಾಯವಾಗಿರುತ್ತದೆ ಎಂದು ತಿಳಿಸಿದ್ದಾರೆ.

Key words: Government – green signal – opening –UG –PG-colleges –DCM –Ashwath narayan