ಸರ್ಕಾರಿ ವೈದ್ಯರು ಖಾಸಗಿ ಕ್ಲಿನಿಕ್ ನಡೆಸ್ತಿದ್ರೆ ಹುಷಾರ್-ಖಡಕ್ ವಾರ್ನಿಂಗ್ ಕೊಟ್ಟ ಆರೋಗ್ಯ ಸಚಿವ ಶ್ರೀರಾಮುಲು…

kannada t-shirts

ಬೆಂಗಳೂರು,ಸೆ,9,2019(www.justkannada.in): ಸರ್ಕಾರಿ ವೈದ್ಯರು ಖಾಸಗಿ ಕ್ಲಿನಿಕ್  ನಡೆಸುವಂತಿಲ್ಲ. ಖಾಸಗಿ ಕ್ಲೀನಿಕ್ ನಡೆಸುವಂತಹ ಸರ್ಕಾರಿ ವೈದ್ಯರನ್ನ ವಜಾ ಮಾಡಲಾಗುತ್ತದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಎಚ್ಚರಿಕೆ ನೀಡಿದರು.

ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಆರೋಗ್ಯ ಸಚಿವ ಶ್ರೀರಾಮುಲು ಖಾಸಗಿ ಕ್ಲಿನಿಕ್ ನಡೆಸುವ ಸರ್ಕಾರಿ ವೈದ್ಯರ ವಿರುದ್ದ ಕ್ರಮ ಕೈಗೊಳ್ಳಲಾಗುತ್ತದೆ. ಖಾಸಗಿ ಕ್ಲಿನಿಕ್ ನಡೆಸುವ ಸರ್ಕಾರಿ ವೈದ್ಯರನ್ನು ಡಿಸ್ ಮಿಸ್ ಮಾಡುವ ಕ್ರಮ ತೆಗೆದುಕೊಳ್ಳುತ್ತೇನೆ. ಸರ್ಕಾರಿ ವೈದ್ಯರ ಖಾಸಕಿ ಕ್ಲಿನಿಕ್ ನಿಂದ ಬಡವರಿಗೆ ಸಮಸ್ಯೆ ಆಗ್ತಿದೆ. ನಾನು ಬಡವರ ಪರ ಇರೋನು. ಬಡವರಿಗೆ ಸಮಸ್ಯೆ ಮಾಡುವ ಸರ್ಕಾರಿ ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇನೆ ಎಂದು ಖಡಕ್ ವಾರ್ನಿಂಗ್ ಕೊಟ್ಟರು.

ಸರ್ಕಾರಿ ಆಸ್ಪತ್ರೆಗಳಲ್ಲಿ ವಾಸ್ತವ್ಯ..

ಸರ್ಕಾರಿ ಆಸ್ಪತ್ರೆಗಳಲ್ಲಿನ ಸ್ಥಿತಿ ಗತಿ, ಸಿಬ್ಬಂದಿಗಳ ಕೊರತೆ, ರೋಗಿಗಳ ಸಮಸ್ಯೆಗಳನ್ನು ಆಲಿಸಲು ಸರ್ಕಾರಿ ಆಸ್ಪತ್ರೆಗಳಲ್ಲಿ ವಾಸ್ತವ್ಯ ಹೂಡುತ್ತೇನೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಘೋಷಣೆ ಮಾಡಿದರು.

ರಾಜ್ಯದ ಕೆಲವೊಂದು ಸರ್ಕಾರಿ ಆಸ್ಪತ್ರೆಗಳ ಪಟ್ಟಿ ಮಾಡ್ಕೊಂಡಿದ್ದೇನೆ. ಅಂಥ ಆಸ್ಪತ್ರೆಗಳಲ್ಲಿ ವಾಸ್ತವ್ಯ ಹೂಡ್ತೇನೆ. ಸರ್ಕಾರಿ ಆಸ್ಪತ್ರೆಗಳ ಚಿಕಿತ್ಸಾ ಗುಣಮಟ್ಟ ಹೆಚ್ವಳಕ್ಕೆ ಕ್ರಮ ತೆಗೆದುಕೊಳ್ಳುತ್ತೇವೆ. ಲೀಸ್ಟ್ ಮಾಡಿರುವ ಎಲ್ಲಾ ಆಸ್ಪತ್ರೆಗಳಿಗೆ ಭೇಟಿ ಕೊಟ್ಟು ಅಲ್ಲೇ ರಾತ್ರಿ ವಾಸ್ತವ್ಯ ಹೂಡುತ್ತೇನೆ. ಅಲ್ಲಿನ ಸ್ಥಿತಿ ಗತಿ, ಸಿಬ್ಬಂದಿಗಳ ಕೊರತೆ, ರೋಗಿಗಳ ಸಮಸ್ಯೆಗಳನ್ನು ಆಲಿಸುತ್ತೇನೆ. ನಮ್ಮ ಸ್ಥಳೀಯ ಶಾಸಕರು ಕೂಡ ಸ್ಥಳೀಯ ಆಸ್ಪತ್ರೆಗಳಲ್ಲಿ ವಾಸ್ತವ್ಯ ಇರುವಂತೆ ಮನವಿ ‌ಮಾಡುತ್ತೇನೆ ಎಂದರು.

ಸರ್ಕಾರದಲ್ಲಿ ಯಾವುದೇ ರೀತಿಯ ಹಣಕಾಸಿನ ಕೊರತೆ ಇಲ್ಲ…

ಸರ್ಕಾರದಲ್ಲಿ ಯಾವುದೇ ರೀತಿಯ ಹಣಕಾಸಿನ ಕೊರತೆ ಇಲ್ಲ. ನೆರೆ ಸಂತ್ರಸ್ತರಿಗೆ ಸರ್ಕಾರ ಸೂಕ್ತ ಪರಿಹಾರ ‌ನೀಡುತ್ತಿದೆ. ನೆರೆ ಸಂತ್ರಸ್ತರಿಗೆ ‌ಪರಿಹಾರ ಕೊಡಲು ಸರ್ಕಾರಕ್ಕೆ ಯಾವುದೆ ರೀತಿಯ ಹಣಕಾಸಿನ ಸಮಸ್ಯೆ ಇಲ್ಲ. ಆರ್ಥಿಕ ಪರಿಸ್ಥಿತಿ ‌ಕೂಡ‌ ಸದೃಢವಾಗಿದೆ. ಹೊಸ ಕಾಮಗಾರಿಗಳಿಗೆ ಹಣ ಬಿಡುಗಡೆಗೆ ಸಮಸ್ಯೆ ಇಲ್ಲ. ಯಾವುದೇ ಕಾಮಾಗಾರಿಗಳು‌‌ ನಿಂತಿಲ್ಲ. ನಮ್ಮ ಸರ್ಕಾರದಲ್ಲಿ ಕಾಮಗಾರಿಗಳು‌ ನಡೆಯುತ್ತಿವೆ ಎಂದು ಸಚಿವ ಶ್ರೀರಾಮುಲು ತಿಳಿಸಿದರು.

ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿಕೆಗೆ ಟಾಂಗ್…

ಬಿಎಸ್ ವೈ ಸಂಪುಟದಲ್ಲಿ ಯಾವೊಬ್ಬ ಸಚಿವರೂ ಪ್ರಾಮಾಣಿಕವಾಗಿ ಇಲ್ಲ ಎಂದು ಹೇಳಿಕೆ ನೀಡಿದ್ದ  ಮಾಜಿ ಸಿಎಂ ಕುಮಾರಸ್ವಾಮಿಗೆ ತಿರುಗೇಟು ಕೊಟ್ಟ ಸಚಿವ ಶ್ರೀರಾಮುಲು, ಕಾಮಾಲೆ ಕಣ್ಣಿಗೆ ಜಗತ್ತೆಲ್ಲೆವೂ ಕೂಡ ಹಳದಿ ಕಾಣುತ್ತದೆ. ಆ ಮನುಷ್ಯನಿಗೆ ಅಧಿಕಾರ ಕಳೆದು ಕೊಂಡ ಹಪಾಹಪಿಯಿಂದಾಗಿ ಈ ರೀತಿ ಮಾತಾಡ್ತಿದ್ದಾರೆ. ಈ ಸರ್ಕಾರ ಅಧಿಕಾರಕ್ಕೆ ಬಂದಿರೋದು ಅವರಿಗೆ ಸಹಿಸಿಕೊಳ್ಳೋಕೆ ಆಗ್ತಿಲ್ಲ. ಹೀಗಾಗಿ ‌ಏನಾದ್ರು ಒಂದು ನೆಪವೊಡ್ಡಿ ಆರೋಪ ಮಾಡ್ತಿದ್ದಾರೆ ಎಂದು ಟಾಂಗ್ ಕೊಟ್ಟರು.

ಎರಡು ಬಾರಿ ಕುಮಾರಸ್ವಾಮಿ ಸಿಎಂ  ಆದರೂ ಅವರ ಪಕ್ಷದ ಶಾಸಕರನ್ನು ಹಿಡಿದಿಟ್ಟುಕೊಳ್ಳೋಕೆ ಆಗಿಲ್ಲ. ಸಿಎಂ ಆಗುವ ಮುನ್ನ ಒಂದು ರೀತಿ ಮಾತಾಡೋದು, ಸಿಎಂ ಆದ ನಂತರ ಒಂದು ರೀತಿಯ ಮಾತಿನಿಂದ ಅವರ ಶಾಸಕರು ಸಿಡಿದಿದ್ದು ಬಂದಿದ್ದಾರೆ. ಹೀಗಾಗಿ ಅವರು ಅಧಿಕಾರ ಕಳೆದುಕೊಂಡು ಹತಾಶರಾಗಿ ಅವರು ಈ ರೀತಿ ಹೇಳ್ತಿದ್ದಾರೆ ಎಂದು ಕಿಡಿಕಾರಿದರು.

ಸಂಚಾರ ನಿಯಮ ಉಲ್ಲಂಘನೆಗೆ ದುಬಾರಿ ಫೈನ್ ವಿಚಾರ: ಸಿಎಂ, ಹೋಂ ಮಿನಿಸ್ಟರ್ ಜತೆ ಮಾತಾಡ್ತೀನಿ..

ಸಂಚಾರ ನಿಯಮ ಉಲ್ಲಂಘನೆಗೆ ದುಬಾರಿ ಫೈನ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಶ್ರೀರಾಮುಲು,  ಪೊಲೀಸರು ಸಿಕ್ಕ ಸಿಕ್ಕಲ್ಲಿ ವಾಹನ ಸವಾರರನ್ನು ಹಿಡಿಯುತ್ತಿದ್ದಾರೆ. ಸಾರ್ವಜನಿಕರಿಗೆ ಪೊಲೀಸರಿಂದ ತೊಂದರೆ ಆಗ್ತಿದೆ. ಇತ್ತೀಚೆಗೆ ಸಂಚಾರಿ ಪೊಲೀಸರ ಹಾವಳಿ ಜಾಸ್ತಿಯಾಗಿದೆ. ಬಡವರು, ಕೆಳ ಮಧ್ಯಮವರ್ಗದವ್ರು ಜನ ಸ್ಕೂಟರ್ ಗಳಲ್ಲಿ ಓಡಾಡ್ತಾರೆ. ಒಂದು ಸರ್ಕಲ್ ದಾಟಿ ಮತ್ತೊಂದು ಸರ್ಕಲ್ ಗೆ ಹೊಗುವಷ್ಟರಲ್ಲಿ ಅಲ್ಲೂ ಇರ್ತಾರೆ ಪೊಲೀಸರು. ಸಂಚಾರಿ ಪೊಲೀಸರಿಂದ ಜನ ನೋವು ಅನುಭವಿಸ್ತಿದಾರೆ. ಇದರ ಬಗ್ಗೆ ನಾನು ಸಿಎಂ, ಹೋಂ ಮಿನಿಸ್ಟರ್ ಜತೆ ಮಾತಾಡ್ತೀನಿ. ನಾನೂ ಸಾರ್ವಜನಿಕ ಜೀವನದಲ್ಲಿರೋನು. ಜನ ಅನುಭವಿಸುವ ಕಷ್ಟ ನನಗೂ ಗೊತ್ತು ಎಂದು ಶ್ರೀರಾಮುಲು ಹೇಳಿದರು.

Key words: Government- Doctors- Private- Clinic –health minister- Shriramulu-Warning.

website developers in mysore