ಸರ್ಕಾರ ನಿರ್ಧಾರ ವಾಪಸ್ ಪಡೆಯದಿದ್ರೆ ಹೋರಾಟ: ಸಚಿವ ಸುಧಾಕರ್ ಖಾತೆ ಬದಲಾಯಿಸಲಿ-ನಿರ್ಮಾಪಕ ಕೆ.ಮಂಜು…

ಬೆಂಗಳೂರು,ಏಪ್ರಿಲ್,3,2021(www.justkannada.in):  ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಮಂದಿಗೆ ಮಾತ್ರ ಅವಕಾಶ ಕಲ್ಪಿಸಿ ನಿಯಮ ಜಾರಿ ಮಾಡಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ಇಡೀ ಕನ್ನಡ ಚಿತ್ರರಂಗ ಅಸಮಾಧಾನ ವ್ಯಕ್ತಪಡಿಸಿದೆ.Illegally,Sand,carrying,Truck,Seized,arrest,driver

ಸರ್ಕಾರದ ನಡೆ ವಿರುದ್ಧ ಸ್ಯಾಂಡಲ್ ವುಡ್ ನಿರ್ಮಾಪಕ ಕೆ.ಮಂಜು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರ ತಕ್ಷಣ ಶೇ.50ರ ನಿರ್ಧಾರ ಹಿಂಪಡೆಯಬೇಕು. ಇಲ್ಲದಿದ್ದರೇ ಸಿಎಂ ಯಡಿಯೂರಪ್ಪ ಹಾಗೂ ಸಚಿವ ಸುಧಾಕರ್ ನಿವಾಸದ ಎದುರು ಇಡೀ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ಸಚಿವ ಸುಧಾಕರ್ ಖಾತೆ ನಿಭಾಯಿಸುವ  ಅವರಿಗೆ ಬೇರೆ ಖಾತೆ ನೀಡಲಿ. ಅವರ ಖಾತೆ ಬದಲಾಯಿಸಲಿ. ಕೊರೊನಾ ನಿಯಂತ್ರಿಸಲು ಆರೋಗ್ಯ ಸಚಿವರಿಗೆ ಚಿತ್ರರಂಗ ಮಾತ್ರ ಕಾಣುತ್ತಿದೆಯೇ? ಚಿತ್ರರಂಗವೆಂದರೆ ಏನಂದುಕೊಂಡಿದ್ದೀರಾ? ಜಿಮ್, ಚಿತ್ರರಂಗ ಮಾತ್ರ ಯಾಕೆ ಟಾರ್ಗೆಟ್ ಮಾಡುತ್ತೀದ್ದೀರಾ? ಎಂದು ಕಿಡಿಕಾರಿದರು.

ಕೃಪೆ- internet

ನಿಯಮಗಳನ್ನು ಜಾರಿಗೆ ತರಲು  ರಾಜಕೀಯ ರ್ಯಾಲಿಗಳು ಕಾಣುತ್ತಿಲ್ಲವೇ? ಅಲ್ಲೆಲ್ಲ ಜನರು ತುಂಬಿ ತುಳುಕುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಚಿತ್ರಮಂದಿರಗಳಿಗೆ ಮಾತ್ರ ಯಾಕೆ ರೂಲ್ಸ್ ಮಾಡುತ್ತಿದ್ದೀರಾ?  ಎಂದು ನಿರ್ಮಾಪಕ ಕೆ. ಮಂಜು ಪ್ರಶ್ನಿಸಿದ್ದಾರೆ.

Key words: Government- decision- not – return-protest-Producer -K. Manju