ಒಂದಕ್ಷರವನ್ನೂ ಬಿಡದಂತೆ, 2 ನಿಮಿಷ 30 ಸೆಕೆಂಡ್ ​ನಲ್ಲಿ ನಾಡಗೀತೆ ಹಾಡಲು ಸರ್ಕಾರ ಒಪ್ಪಿಗೆ.

Promotion

ಬೆಂಗಳೂರು,ಸೆಪ್ಟಂಬರ್,23,2022(www.justkannada.in):  ನಾಡಗೀತೆಯನ್ನು ಒಂದಕ್ಷರವೂ ಬಿಡದಂತೆ, ದಿ.ಮೈಸೂರು ಅನಂತಸ್ವಾಮಿ ರಾಗ ಸಂಯೋಜನೆ ದಾಟಿಯಲ್ಲಿ 2 ನಿಮಿಷ 30 ಸೆಕೆಂಡ್​ನಲ್ಲಿ ನಾಡಗೀತೆಯನ್ನು ಹಾಡಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ.

ನಾಡಗೀತೆಗೆ ನಿರ್ದಿಷ್ಟ ಸಮಯ ಮತ್ತು ದಾಟಿ ನಿಗದಿ ವಿಚಾರಕ್ಕೆ ಸಂಬಂಧಿಸಿದಂತೆ ಆಲಾಪ, ಪುನರಾವರ್ತನೆ ಇಲ್ಲದಂತೆ, 2 ನಿಮಿಷ 30 ಸೆಕೆಂಡ್ ​ನಲ್ಲಿ ನಾಡಗೀತೆ ಹಾಡಲು ಸರ್ಕಾರ  ಸಮ್ಮತಿ ಸೂಚಿಸಿದೆ.

S.R.ಲೀಲಾವತಿ ಸಮಿತಿ ಶಿಫಾರಸನ್ನು ಸರ್ಕಾರ ಅಧಿಕೃತಗೊಳಿಸಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಲ್ಲಿಸಿದ್ದ ಪ್ರಸ್ತಾಪಕ್ಕೆ ಸಿಎಂ ಒಪ್ಪಿಗೆ ನೀಡಿದ್ದಾರೆ. 2005 ರಿಂದಲೂ ನಾಡಗೀತೆ ದಾಟಿ ಹಾಗೂ ಕಾಲಮಿತಿ ನಿಗದಿ ಮಾಡುವ ವಿಚಾರ ನೆನೆಗುದಿಗೆ ಬಿದ್ದಿತ್ತು. 2006ರಲ್ಲಿ ಸಾಹಿತಿ ವಸಂತ ಕನಕಾಪುರೆ ನೇತೃತ್ವದಲ್ಲಿ ಸರ್ಕಾರ ಸಮಿತಿ ರಚಿಸಿತ್ತು.

ಬಳಿಕ ಎಸ್.ಆರ್. ಲೀಲಾವತಿ ಅಧ್ಯಕ್ಷತೆಯಲ್ಲಿ 18 ಸದಸ್ಯರ ಸಮಿತಿಯನ್ನು ಸರ್ಕಾರ ರಚಿಸಿತ್ತು. ಸಮಿತಿಯು ಮೈಸೂರು ಅನಂತಸ್ವಾಮಿ ರಾಗ ಸಂಯೋಜನೆಯಲ್ಲಿ 2 ನಿಮಿಷ 30 ಸೆಕೆಂಡ್ ಗಳಲ್ಲಿ ನಾಡಗೀತೆ ಹಾಡಬೇಕೆಂದು  ಸರ್ಕಾರಕ್ಕೆ ಶಿಫಾರಸು ಮಾಡಿತ್ತು.

Key words: government -agreed – sing –nadageethe-  2 minutes and 30 seconds