ಸರ್ಕಾರದಿಂದ ಚಳುವಳಿಗಾರರನ್ನ ಹಿಮ್ಮೆಟ್ಟಿಸುವ ಹುನ್ನಾರ: ನಾವು ಯಾವುದೇ ಕಾರಣಕ್ಕೂ ಕುಗ್ಗಲ್ಲ- ಬಡಗಲಪುರ ನಾಗೇಂದ್ರ.

ಮೈಸೂರು,ಜೂನ್,2,2022(www.justkannada.in): ನಮ್ಮ ಹಳೆ ಹೋರಾಟಗಾರ ಸ್ನೇಹಿತನನ್ನ ಬಳಸಿಕೊಂಡು ಸರ್ಕಾರದಿಂದ ಚಳುವಳಿಗಾರರನ್ನ ಹಿಮ್ಮೆಟ್ಟಿಸುವ ಹುನ್ನಾರ ನಡೀತ ಇದೆ. ನಾವು ಯಾವುದೇ ಕಾರಣಕ್ಕೂ ಕುಗ್ಗಲ್ಲ ,ನಮಗೆ ನೈತಿಕ ಬಲ ಇದೆ.  ಸ್ಪಷ್ಟತೆಯಿಂದ ನಾವು ಎದೆಗುಂದದೆ ಚಳುವಳಿಗಳನ್ನ ಮಾಡುತ್ತೇವೆ ಎಂದು ಕರ್ನಾಟಕ ರಾಜ್ಯ ರೈತರ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.

ಮೈಸೂರಿನಲ್ಲಿ ಇಂದು ಮಾತನಾಡಿದ ಬಡಗಲಪುರ ನಾಗೇಂದ್ರ,  ರಾಕೇಶ್ ಟಿಕಾಯತ್ ರವರ ಮೇಲಿನ ಹಲ್ಲೆ ವಿಶಾದಕರ. ದೆಹಲಿಯಲ್ಲಿ ನಡೆದ ರೈತ ಆಂದೋಲನ ಯಶಸ್ವಿ ಆಗಿದೆ. ಈ ಉದ್ದೇಶಕ್ಕೆ ಕೇಂದ್ರ  ಸರ್ಕಾರದ   ವೈಪಲ್ಯಗಳನ್ನ ಮರೆಮಾಚುತ್ತಿದೆ. ನಾವು ಸರ್ಕಾರ ಹಾಗೂ ಕಾರ್ಪೊರೇಟ್ ಸಂಸ್ಥೆಗಳ ಕುತಂತ್ರಕ್ಕೆ ಬಲಿಯಾಗಲ್ಲ. ಎದೆಗುಂದದೆ ಚಳುವಳಿಗಳನ್ನ ಮಾಡುತ್ತೇವೆ ಎಂದರು.

ಮೌಲ್ಯಯುತವಾದ ಹಸಿರು ಟವಲ್ ಅನ್ನು ದುರುಪಯೋಗ ಮಾಡಿಕೊಳ್ಳುತ್ತಿರವ ವ್ಯಕ್ತಿಗಳು ಹಾಗೂ ಗುಂಪನ್ನ ದೂರ ಇಟ್ಟು  ಹೋರಾಟ ಮುಂದುವರೆಸುತ್ತೇವೆ. ನಮ್ಮ ಗುರುಗಳು ನಂಜುಂಡ ಸ್ವಾಮಿ ಅವರು ಹೇಳಿದ್ರು . ಹಸಿರು ಟವೆಲ್  ಒಂದು ದಿನ ಗಾಂಧಿ ಟೋಪಿ ಅಗುತ್ತೆ ಅಂತ. ಕಳ್ಳರು ,ಸುಳ್ಳರು ಧಗಾಕೋರರು ನೀತಿಗೆಟ್ಟೋರೆಲ್ಲಾ ಹಸಿರು ಟವೆಲ್ ಹಾಕೋಕೆ ಶುರು ಮಾಡಿದ್ದಾರೆ. ಅದಕ್ಕಾಗಿ ನಾವೇ ಒಂದು ಲೋಗೋ ರೆಡಿ ಮಾಡಿಕೊಂಡಿದ್ದೇವೆ. ಇನ್ನು ಮುಂದೆ ಇದಿಕ್ಕೆಲ್ಲಾ ತಿಲಾಂಜಲಿ ಹಾಡುತ್ತೇವೆ. ಮಹಿಳೆ ,ವಿದ್ಯಾರ್ಥಿ ಸೇರಿದಂತೆ ಯುವಕರ ನೈತಿಕ ಬಲವನ್ನ ಕಟ್ಟುತ್ತೇವೆ ಎಂದರು.

ಸಂಘ ಪರಿವಾರದವರ ಕೈಗೊಂಬೆ ಆಗಬೇಡಿ ,ಈ ನಾಡಿನ ಸಾಹಿತಿಗಳ ಮಾತಿಗೆ ಗೌರವ ಕೊಡಿ .

ಪಠ್ಯ ಪರಿಷ್ಕರಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಬಡಗಲಪುರ ನಾಗೇಂದ್ರ, ಸರ್ಕಾರ ಬಂಡತನದಿಂದ ವರ್ತಿಸುತ್ತಿದೆ. ನೀವು ಏನೇ ಕೂಗಾಡಿಕೊಳ್ಳಿ ನಮ್ಮ ಯೋಜನೆ ಜಾರಿಗೆ ತಂದೇ ತರುತ್ತೇವೆ ಎಂದು ಬಂಡಾಟಕ್ಕೆ ಬಿದ್ದಿದೆ. ಮುಂದೊಂದು ದಿನ ಮಾಡಿದ್ದುಣ್ಣೋ ಮಾರಾಯ ಅಂತ ಸರ್ಕಾರ ಇದನ್ನ ಅನುಭವಿಸಬೇಕಾಗುತ್ತೆ. ಬಸವರಾಜ ಬೊಮ್ಮಾಯಿ ಅವರು ಉತ್ತಮ ಮನೆತನದಿಂದ ಬಂದವರು. ಸಂಘ ಪರಿವಾರದವರ ಕೈಗೊಂಬೆ ಆಗಬೇಡಿ ,ಈ ನಾಡಿನ ಸಾಹಿತಿಗಳ ಮಾತಿಗೆ ಗೌರವ ಕೊಡಿ ಎಂದು ಕಿವಿಮಾತು ಹೇಳಿದರು.

ಇದೇ ವೇಳೆ ಪ್ರತಾಪ್ ಸಿಂಹ ವಿರುದ್ದ ಕಿಡಿಕಾರಿದ ಬಡಗಲಪುರ ನಾಗೇಂದ್ರ, ನಮ್ಮ ಪ್ರತಾಪ್ ಸಿಂಹ ಅಪ್ರಭುತ್ವಿತ ವ್ಯಕ್ತಿ, ತಿಳುವಳಿಕೆ ಇಲ್ಲ. ಕೈಕಾಲು ನೆಟ್ಟಗಿಲ್ಲ ,ತಲೆನೂ ನೆಟ್ಟಗಿಲ್ಲ ಬೌದ್ದಿಕ ದಿವಾಳಿತನ ತೋರಿಸುತ್ತಿದ್ದಾರೆ. ಪಠ್ಯ ಪುಸ್ತಕ ವಿರೋಧ ಮಾಡುವ ಸಾಹಿತಿಗಳನ್ನ  ಕಾಂಗ್ರೆಸ್ ಏಜೇಂಟ್ ರಂತೆ ಬಿಂಬಿಸ್ತಾ ಇದ್ದಾರೆ. ಅವನಿಗೆ ಎಷ್ಟು ವಯಸ್ಸೋ ಗೊತ್ತಿಲ್ಲಾ , ಸಾಹಿತಿಗಳ ಬಗ್ಗೆ ಅವರ ಹೋರಾಟಗಳ ಬಗ್ಗೆ ಗೊತ್ತಿಲ್ಲಾ ಅವನಿಗೆ. ಕಾಂಗ್ರೇಸ್ ಏನ್ ಮಾಡಿತ್ತೋ ಅದರ ಎರಡರಷ್ಟು ಕೆಟ್ಟದನ್ನ ಮಾಡಿದ್ದಕ್ಕೆ ಬಿಜೆಪಿಯನ್ನ ವಿರೋಧಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ರಾಜ್ಯಸಭಾ ಚುನಾವಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಬಡಗಲಪುರ ನಾಗೇಂದ್ರ,  ಗುಂಪು ಗುಂಪಾಗಿ ಎಲ್ಲಾ ಮತಗಳನ್ನ ಕೇಳ್ತಿದ್ದಾರೆ. ನಾನು ಇದುವರೆಗೆ ಒಂದೂವರೆ ಲಕ್ಷ ಮತದಾರರನ್ನ ಭೇಟಿ ಮಾಡಿದ್ದೇವೆ. ನಾನು ಕೂಡ ಅಭ್ಯರ್ಥಿ ಪರ ಮತಯಾಚನೆ ಮಾಡಿದ್ದೇನೆ. ಎಲ್ಲಾ ಕಡೆ ಒಳ್ಳೆ ರೆಸ್ಪಾನ್ಸ್ ಇದೆ. ಮೊದಲನೇ ಪ್ರಾಶಸ್ತ್ಯ ದಲ್ಲೇ ಗೆಲ್ಲುವ ವಿಶ್ವಾಸವಿದೆ  ಎಂದು ವಿಶ್ವಾಸ ವ್ಯಕ್ತಪಡಿಸಿದರು.

Key words: government-against-mysore-farmer leader- Badagalpur Nagendra.