ಶ್ರೀಲಂಕಾದ ಅಧ್ಯಕ್ಷರಾಗಿ ಗೋತಬಯ ರಾಜಪಕ್ಸೆ ಆಯ್ಕೆ

kannada t-shirts

ಕೊಲೊಂಬೊ, ನವೆಂಬರ್ 17, 2019 (www.justkannada.in): ಗೋತಬಯ ರಾಜಪಕ್ಸೆ ಶ್ರೀಲಂಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಅಭೂತಪೂರ್ವ ಜಯ ದಾಖಲಿಸಿದ್ದಾರೆ.

ದಿ ಲಿಬರೇಷನ್​ ಟೈಗರ್ಸ್​ ಆಫ್​ ತಮಿಳು ಇಳಂ (ಎಲ್​ಟಿಟಿಇ) ಪ್ರತ್ಯೇಕವಾದಿಗಳ ವಿರುದ್ಧದ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿದ್ದ ಗೋತಬಯ ರಾಜಪಕ್ಸೆ ಶ್ರೀಲಂಕಾ ಅಧ್ಯಕ್ಷರಾಗುತ್ತಿದ್ದಾರೆ.

ನಿವೃತ್ತ ಲೆಫ್ಟಿನೆಂಟ್​ ಕರ್ನಲ್​ ಹಾಗೂ ಕೌಟುಂಬಿಕವಾಗಿ ‘ಟರ್ಮಿನೇಟರ್​’ ಎಂದೇ ಪ್ರಖ್ಯಾತರಾಗಿರುವ ರಾಜಪಕ್ಸೆ, ಚುನಾವಣೆಯಲ್ಲಿ ಶೇ.53-54 ಮತವನ್ನು ಗಳಿಸಿರುವುದಾಗಿ ಅವರ ಮಾಧ್ಯಮ ವಕ್ತಾರ ಭಾನುವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.

ರಾಜಪಕ್ಸೆ ಅವರ ಪ್ರಮುಖ ಎದುರಾಳಿ ಆಡಳಿತಾರೂಢ ಸಂಯುಕ್ತ ರಾಷ್ಟ್ರೀಯ ಪಕ್ಷದ (ಯುಎನ್​ಪಿ) ಹಾಗೂ ನವಪ್ರಜಾಸತ್ತಾತ್ಮಕ ರಂಗದ (ಎನ್​ಡಿಎಫ್) ಉಪನಾಯಕ ಸಜಿತ್ ಪ್ರೇಮದಾಸ ಸೋಲನುಭವಿಸಿದ್ದಾರೆ.

website developers in mysore