ಬ್ಯಾಡ್ಮಿಂಟನ್ ಕೋಚ್ ಗೋಪಿಚಂದ್’ಗೆ ಜೀವಮಾನ ಸಾಧನೆ ಪ್ರಶಸ್ತಿ

ನವದೆಹಲಿ, ಫೆಬ್ರವರಿ 10, 2020 (www.justkannada.in): ಒಲಿಂಪಿಕ್ ಸಮಿತಿ ತರಬೇತುದಾರರ ಜೀವಮಾನ ಸಾಧನೆ ಪ್ರಶಸ್ತಿಗೆ ಪುರುಷರ ವಿಭಾಗದಲ್ಲಿ ಭಾರತ ಬ್ಯಾಡ್ಮಿಂಟನ್ ತಂಡದ ಮುಖ್ಯ ಕೋಚ್ ಪುಲ್ಲೇಲಾ ಗೋಪಿಚಂದ್ ಅವರು ಭಾಜನರಾಗಿದ್ದಾರೆ.

ದೇಶದ ಬ್ಯಾಡ್ಮಿಂಟನ್ ಕ್ರೀಡೆಗೆ ನೀಡಿರುವ ಕೊಡುಗೆಗಾಗಿ ಇವರಿಗೆ ಪುರಸ್ಕಾರ ನೀಡಲಾಗಿದೆ. 2019ರ ಐಒಸಿ ತರಬೇತುದಾರರ ಜೀವಮಾನ ಸಾಧನೆ ಪ್ರಶಸ್ತಿಗಳ ಪುರುಷ ವಿಭಾಗಕ್ಕಾಗಿ ಪುಲ್ಲೇಲಾ ಗೋಪಿಚಂದ್ ಅವರಿಗೆ ಗೌರವಾನ್ವಿತ ಉಲ್ಲೇಖವನ್ನು ನೀಡಲಾಗುತ್ತಿದೆ ಎಂದು ಐಒಸಿ ಕ್ರೀಡಾಪಟುಗಳ ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ.

ಭಾರತದ ಬ್ಯಾಡ್ಮಿಂಟನ್ ಅಭಿವೃದ್ಧಿಯಲ್ಲಿ ಅವರ ಪ್ರಯತ್ನ ಹಾಗೂ ಒಲಿಂಪಿಕ್‌ಸ್‌ ಕ್ರೀಡಾಕೂಟದ ಹಿನ್ನೆೆಲೆಯಲ್ಲಿ ಅಥ್ಲಿಟ್‌ಗಳಿಗೆ ಅವರು ನೀಡಿರುವ ಸಹಕಾರ ಹಾಗೂ ಬೆಂಬಲ ಅಪಾರವಾಗಿದೆ. ಹಾಗಾಗಿ, ಅವರ ಕಾರ್ಯವೈಖರಿಯನ್ನು ಗುರುತಿಸಲು ಸಮಿತಿ ನಿರ್ಧರಿಸಿದೆ.