ಅಮೆಜಾನ್ ಪ್ರೈಮ್’ನಲ್ಲಿ ಬಿಡುಗಡೆಯಾದ ‘ಪೊಣ್ ಮಗಳ್ ವಂದಾಲ್’ಗೆ ಗುಡ್ ರೆಸ್ಪಾನ್ಸ್

ಬೆಂಗಳೂರು, ಮೇ 30, 2020 (www.justkannada.in): ನಟ ಸೂರ್ಯ ನಿರ್ಮಾಣದ, ಜ್ಯೋತಿಕಾ ಅಭಿನಯದ ತಮಿಳು ಸಿನಿಮಾ ‘ಪೊಣ್ ಮಗಳ್ ವಂದಾಲ್’ ಸಿನಿಮಾ ಅಮೆಝೋನ್ ಪ್ರೈಮ್ ನಲ್ಲಿ ಬಿಡುಗಡೆಯಾಗಿದೆ.

ಈ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದರ ಜತೆಗೆ ಈ ಸಿನಿಮಾವನ್ನು ಥಿಯೇಟರ್ ನಲ್ಲಿ ಬಿಡುಗಡೆ ಮಾಡದ ಬಗ್ಗೆ ವಿತರಕರು, ಚಿತ್ರಮಂದಿರಗಳ ಮಾಲಿಕರಿಗೆ ಅಸಮಾಧಾನವೂ ಉಂಟಾಗಿದೆ.

ಈ ನಡುವೆ ಈಗ ಪೈರಸಿ ಕೋರರ ಕಾಟ ಶುರುವಾಗಿದೆ. ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ತಮಿಳು ರಾಕರ್ಸ್ ಈ ಸಿನಿಮಾದ ಪೈರಸಿ ಕಾಪಿಯನ್ನು ಪ್ರಸಾರ ಮಾಡಿದೆ.