ಕಬ್ಬು ಬೆಳೆಗಾರರಿಗೆ ಗುಡ್ ನ್ಯೂಸ್: ಕೇಂದ್ರ ಸರ್ಕಾರದಿಂದ 3500 ಕೋಟಿ ರೂ ಸಬ್ಸಿಡಿ ಘೋಷಣೆ….

ನವದೆಹಲಿ,ಡಿಸೆಂಬರ್,16,2020(www.justkannada.in): ನೂತನ ಕೃಷಿ ಕಾಯ್ದೆ ವಿರೋಧಿಸಿ ರೈತರು ನವದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಬೆನ್ನಲ್ಲೆ ಕೇಂದ್ರ ಸರ್ಕಾರ  ಅನ್ನದಾತರ ಪರವಾಗಿ ಹೆಜ್ಜೆ ಇಟ್ಟಿದ್ದು ಇದೀಗ ಕಬ್ಬು ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ.siddaramaiah-forgot-community-becoming-cm-mysore-naleen-kumar-kateel

ಕಬ್ಬು ಬೆಳಗಾರರಿಗೆ 3,500 ಕೋಟಿ ಮೊತ್ತದ ಸಬ್ಸಿಡಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಕೇಂದ್ರ ಸಚಿವ ಸಂಪುಟ ಸಭೆ ಬಳಿಕ ಮಾತನಾಡಿದ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್,  ಕಬ್ಬು ಬೆಳೆಗಾರರಿಗೆ ರೂ.3,500 ಕೋಟಿ ಸಬ್ಸಿಡಿ ನೀಡಲು ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಅನುಮೋದನೆ ನೀಡಿದೆ. ಸಚಿವ ಸಂಪುಟದ ನಿರ್ಧಾರದಿಂದ 5 ಕೋಟಿ ಕಬ್ಬು ಬೆಳೆಗಾರರಿಗೆ ಲಾಭವಾಗಲಿದೆ. ಸಬ್ಸಿಡಿ ಮೊತ್ತ ನೇರವಾಗಿ ರೈತರ ಖಾತೆಗೆ ಸೇರಲಿದೆ ಎಂದು ಅವರು ಹೇಳಿದರು.good-news-sugarcane-growers-3500-crores-subsidy-announced-central-government

ಹಾಗೆಯೇ ಈ ವರ್ಷ 310 ಲಕ್ಷ ಟನ್  ಸಕ್ಕರೆ ಉತ್ಪಾದನೆ ಮಾಡಲಾಗಿದೆ.   60 ಲಕ್ಷ ಟನ್ ಸಕ್ಕರೆ ರಫ್ತು ಮಾಡಲಾಗುವುದು. ಇನ್ನು ಕಬ್ಬುಬೆಳೆಗಾರರಿಗೆ ಸಬ್ಸಿಡಿ ಘೋಷಣೆಯಿಂದ ಸಕ್ಕರೆ ಉತ್ಪಾದನೆಗೆ ಅನುಕೂಲವಾಗಲಿದೆ ಎಂದು ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ.

english summary….

Good news to sugarcane growers: Centre announces Rs.3,500 crore subsidy
New Delhi, Dec. 16, 2020 (www.justkannada.in): Even as the farmers have continued their protest against the new agriculture bill in New Delhi, the Government of India has taken a supporting step by announcing a special package to sugarcane growers.good-news-sugarcane-growers-3500-crores-subsidy-announced-central-government
The Govt. of India has approved a sum of Rs.3,500 crore subsidy to sugarcane growers. This decision was taken in the cabinet meeting held under the leadership of Prime Minister Narendra Modi.
Speaking to the media men after the cabinet meeting Central Minister Prakash Javadekar informed that the Financial Affairs Cabinet Committee has approved the Rs.3,500 crore subsidy. About 5 crore sugarcane growers will be benefitted from this. The subsidy amount will be deposited directly into the bank accounts of the farmers,” he said.
Keywords: Sugarcane growers/ Rs.3,500 crore subsidy/ Govt. of India/ Prakash Javadekar

Key words: Good news -sugarcane growers-3,500 crores- subsidy -announced – central government.