ದೀಪದ ಹಬ್ಬದ ಸಂಭ್ರಮದಲ್ಲಿರುವ ಚಿನ್ನಾಭರಣ ಪ್ರಿಯರಿಗೆ ಸಿಹಿ ಸುದ್ದಿ !

ಬೆಂಗಳೂರು, ನವೆಂಬರ್ 16, 2020 (www.justkannada.in): ಚಿನ್ನಾಭರಣ ಪ್ರಿಯರಿಗೆ ಸಿಹಿ ಸುದ್ದಿ !

ಹೌದು. ದೀಪಾವಳಿ ಹಬ್ಬದ ಹೊತ್ತಲ್ಲಿ ಆಭರಣ ಪ್ರಿಯರಿಗೆ ಸಿಹಿಸುದ್ದಿ ಸಿಕ್ಕಿದ್ದು, ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ.
ಕಳೆದ ವಾರ 10 ಗ್ರಾಂ ಚಿನ್ನದ ಬೆಲೆಯಲ್ಲಿ ಒಟ್ಟು 770 ರೂ. ಇಳಿಕೆ ಕಂಡಂತಾಗಿದೆ. ಈ ಮೂಲಕ ಚಿನ್ನದ ಬೆಲೆ 47,700 ರೂ. ಇಳಿಕೆ ಕಂಡಂತಾಗಿದೆ. ಕಳೆದ ವಾರ ಚಿನ್ನದ ದರ ಒಂದೇ ದಿನ ಭಾರೀ ಇಳಿಕೆ ಕಂಡಿತ್ತು.

ಇನ್ನು ಬೆಳ್ಳಿ ಬೆಲೆ ಕೆಜಿಗೆ 1,820 ರೂ. ಇಳಿಕೆಯಾಗಿದ್ದು, ಈ ಮೂಕ ಕೆಜಿ ಬೆಳ್ಳಿ ಬೆಲೆ 63,600 ರೂ. ಆಗಿದೆ. ಹಣದುಬ್ಬರ, ಅಂತಾರಾಷ್ಟ್ರೀಯ ಮಾರುಕಟ್ಟೆ ಬೆಲೆ, ಬಡ್ಡಿ ದರ ಜ್ಯುವೆಲರಿ ಮಾರುಕಟ್ಟೆ ಮತ್ತು ವ್ಯಾಪಾರ ಯುದ್ಧಗಳು ಚಿನ್ನದ ಬೆಲೆ ಏರಿಳಿತಕ್ಕೆ ಕಾರಣವಾಗಿದೆ.