ಯಶ್ ಅಭಿಮಾನಿಗಳಿಗೆ ಗುಡ್ ನ್ಯೂಸ್: ರೆಡಿಯಾಗ್ತಿವೆ ಕೆಜಿಎಫ್ 2 ಕಟೌಟ್ಸ್ !

ಬೆಂಗಳೂರು, ಮಾರ್ಚ್ 02, 2021 (www.justkannada.in): ಬಹುನಿರೀಕ್ಷಿತ ಕೆಜಿಎಫ್ 2 ಸಿನಿಮಾದ ಪ್ರಚಾರಕ್ಕೆ ಈಗಲೇ ಸಿದ್ಧತೆ ಶುರುವಾಗಿದೆ. ತ್ರಿಡಿ ಕಟೌಟ್ ರೆಡಿ ಮಾಡಲಾಗುತ್ತಿದೆ.

ಅಂದಹಾಗೆ ಕೆಜಿಎಫ್ 2 ಏಪ್ರಿಲ್ 14 ರಂದು ಬಿಡುಗಡೆಯಾಗಲಿದೆ. ಈಗಲೇ ಸಿನಿಮಾದ ತ್ರಿಡಿ ಕಟೌಟ್ ರೆಡಿಯಾಗಿದೆ. ಈ ವಿಶೇಷ ಕಟೌಟ್ ಥಿಯೇಟರ್ ಗಳ ಮುಂದೆ ರಾರಾಜಿಸಲಿದೆ.

ಕೆಜಿಎಫ್ 2 ಸಿನಿಮಾ ಕೇವಲ ಭಾರತದಲ್ಲಿ ಮಾತ್ರವಲ್ಲ, ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಕೆಜಿಎಫ್ 2 ಸಿನಿಮಾದ ಟೀಸರ್ ಒಂದು ಬಿಟ್ಟು ಇನ್ನು ಯಾವುದೇ ಅಪ್ ಡೇಟ್ ಇದುವರೆಗೆ ಸಿಕ್ಕಿಲ್ಲ.

ಸದ್ಯದಲ್ಲೇ ಅಪ್ ಡೇಟ್ ನೀಡುವುದಾಗಿ ಹೊಂಬಾಳೆ ಫಿಲಂಸ್ ಪ್ರಕಟಿಸಿತ್ತು. ಚಿತ್ರದ ಹಾಡೊಂದು ಸದ್ಯದಲ್ಲೇ ಬಿಡುಗಡೆಯಾಗಲಿದೆ ಎನ್ನಲಾಗಿದೆ.