ಕಿಚ್ಚನ ಅಭಿಮಾನಿಗಳಿಗೆ ‘ಸಂಕ್ರಾಂತಿ’ಗೆ ಶುಭ ಸುದ್ದಿ !

ಬೆಂಗಳೂರು, ಜನವರಿ 02, 2019 (www.justkannada.in): ಕೋಟಿಗೊಬ್ಬ 3 ತಂಡದಿಂದ ಹೊಸ ಸುದ್ದಿ ಬಂದಿದೆ.

ಈ ಸಿನಿಮಾದ ಮೊದಲ ಮೋಷನ್ ಪೋಸ್ಟರ್ ಸಂಕ್ರಾಂತಿಗೆ ಅಂದರೆ ಜನವರಿ 15 ರಂದು ಲಾಂಚ್ ಆಗಲಿದೆ.

ಹೌದು. ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಸಿನಿಮಾ ಈಗಾಗಲೇ ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ.

ಕೋಟಿಗೊಬ್ಬ 3 ಸಿನಿಮಾದ ಶೂಟಿಂಗ್ ವೇಳೆ ವಿದೇಶದಲ್ಲಿ ಚಿತ್ರತಂಡ ವಂಚಕರ ಕೈಗೆ ಸಿಲುಕಿ ದೊಡ್ಡ ಸುದ್ದಿಯಾಗಿತ್ತು. ಅದೆಲ್ಲವನ್ನೂ ಮೀರಿ ಚಿತ್ರ ಬಿಡುಗಡೆಯ ಹೊಸ್ತಿಲಿಗೆ ಬಂದಿದೆ.